ಕಿನ್ನಿಗೋಳಿ ಪಂಚಾಯತ್ ವಿಶೇಷ ಗ್ರಾಮ ಸಭೆ
Team Udayavani, Feb 9, 2018, 2:17 PM IST
ಕಿನ್ನಿಗೋಳಿ : ಮುಖ್ಯಮಂತ್ರಿಯವರ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾಗಿರುವ ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಅಭಿವೃದ್ಧಿ ಯೋಜನೆಗೆ ಒಂದು ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಹೇಳಿದರು.
ಅವರು ಫೆ. 8ರಂದು ಕಿನ್ನಿಗೋಳಿ ಗ್ರಾಮ ಪಂಚಾಯತ್ ರಾಜೀವ ಗಾಂಧಿ ಸಭಾಭವನದಲ್ಲಿ ಗ್ರಾ.ಪಂ.ನ ತಾಳಿಪಾಡಿ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸಂಬಂಧಪಟ್ಟಂತೆ ಕಾಮಗಾರಿ ಗುಚ್ಛ ತಯಾರಿಸಲು ನಡೆದ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯವಾಗಿ 50 ಲಕ್ಷ ರೂ. ವೆಚ್ಚದಲ್ಲಿ 10 ರಸ್ತೆಗಳ ಅಭಿವೃದ್ಧಿ ಡಾಮರೀಕರಣ ಹಾಗೂ ಕಾಂಕ್ರೀಟ್ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.
ಹೊಸಕಾವೇರಿಯಲ್ಲಿ ನೀರಿನ ಸಮಸ್ಯೆಯಿದೆ. ನಮಗೆ ನೀರು ಕೊಡಿ ಎಂದು ಗ್ರಾಮಸ್ಥರಾದ ನಳಿನಿ ಒತ್ತಾಯಿಸಿದರು.
ಇದಕ್ಕೆ ಪಿಡಿಒ ಅರುಣ್ ಪ್ರದೀಪ್ ಡಿ’ಸೋಜಾ, ಈ ಬಗ್ಗೆ ಗ್ರಾಮ ಸಭೆ ಅಥವಾ ವಾರ್ಡ್ ಸಭೆಯಲ್ಲಿ ಕೇಳಿ ಎಂದರು.
ಹೊಸಕಾವೇರಿ ರಸ್ತೆ ಮೂರು ವರ್ಷದಿಂದ ದುರಸ್ತಿ ಆಗಿಲ್ಲ. ದುರಸ್ತಿ ಮಾಡಲೆಂದು ಆಗೆದ ರಸ್ತೆ ಹಾಗೆಯೇ ಇದೆ. ಈ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕ್ರಿಯಾ ಯೋಜನೆಯಲ್ಲಿ ಹಣ ಮಂಜೂರು ಆಗಿದೆ. ಹೀಗಾಗಿ ಕಾಮಗಾರಿ ನಡೆಯುವ ಭರವಸೆ ಇದೆ. ಹೆಚ್ಚಿನ ಅನುದಾನ ನೀಡಿ ರಸ್ತೆ ಸರಿಪಡಿಸಿ ಎಂದು ಗ್ರಾಮಸ್ಥರಾದ ಬಿ.ಪಿ. ನಾರಾಯಣ ಹಾಗೂ ನಳಿನಿ ಒತ್ತಾಯಿಸಿದರು.
ಎಸ್. ಕೋಡಿ ವಾಸುದೇವ ಅಗ್ರಹಾರದ ರಸ್ತೆ ದುರಸ್ತಿ ಮಾಡಿ ಕೊಡಿ. ನಾವು ತೆರಿಗೆ ಕಟ್ಟುತ್ತಿರುವುದು ಯಾಕೆ ಎಂದು ಅಡೂರು ಗಣೇಶ್ ರಾವ್ ಪ್ರಶ್ನಿಸಿದಾಗ, ಅದು ಖಾಸಗಿ ರಸ್ತೆ. ಹೊರಗಿನ ರಸ್ತೆ ದುರಸ್ತಿ ಮಾಡಬಹುದು ಎಂದು ಪಿಡಿಒ ತಿಳಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಸದಸ್ಯರಾದ ಸಂತಾನ್ ಡಿ’ಸೋಜಾ, ಚಂದ್ರ ಶೇಖರ್, ಜಾನ್ಸನ್ ಡಿ’ಸೋಜಾ, ಸುನೀತಾ, ವಾಣಿ, ಅರುಣ್ ಕುಮಾರ್, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.