ದೆಹಲಿಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಆಗಬೇಕು
Team Udayavani, Dec 16, 2019, 12:17 AM IST
ಕಲ್ಲಡ್ಕ : ದೆಹಲಿಯ ಕೆಂಪು ಕೋಟೆಯಲ್ಲಿ ಜ. 26ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ವಿದ್ಯಾರ್ಥಿಗಳ ಇಂತಹ ಕ್ರೀಡಾ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಆಗಬೇಕು. ನನ್ನ ಜೀವನದಲ್ಲಿ ಹುಡುಗ ಹುಡುಗಿಯರು ಇಷ್ಟೊಂದು ಪ್ರತಿಭಾನ್ವಿತರಾಗಿ ಇದ್ದುದನ್ನು ಕಂಡಿಲ್ಲ. ಭಾರತ ನಿಜವಾದ ಸಾಂಸ್ಕೃತಿಕ ಮೌಲ್ಯವನ್ನು ಎತ್ತಿ ಹಿಡಿಯುವ ಭವಿಷ್ಯದ ಜನಾಂಗ ನೀವು. ಇಲ್ಲಿ ಅಸಾಧ್ಯ ಸಾಧ್ಯವಾಗಿದೆ ಎಂದು ಪುದುಚೇರಿ ಕಾರ್ಯಭಾರಿ ರಾಜ್ಯಪಾಲೆ ಡಾ. ಕಿರಣ್ ಬೇಡಿ ಹೇಳಿದರು.
ಅವರು ಡಿ. 15ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ವಾರ್ಷಿಕ ಕ್ರೀಡಾಕೂಟ ವೀಕ್ಷಣೆ ಬಳಿಕ ಮಾತನಾಡಿದರು.
ಇಂತಹ ಮಕ್ಕಳನ್ನು ಪಡೆದ ಹೆತ್ತವರು, ಶಾಲೆಯನ್ನು ಪಡೆದಿರುವ ಊರಿನ ಜನ ಧನ್ಯರು, ಮಕ್ಕಳ ಪ್ರತಿಭೆಯನ್ನು ಯುಟ್ಯೂಬ್‌ನಲ್ಲಿ ಪ್ರದರ್ಶಿಸುವಷ್ಟು ಉನ್ನತವಾಗಿದೆ. ಭಾರತೀಯ ಸಂಸ್ಕೃತಿ ಇಲ್ಲಿನ ಮಣ್ಣಿನ ಕಣಕಣದಲ್ಲಿ ಸೇರಿಕೊಂಡಿದೆ. ನೀವೆಲ್ಲರೂ ಪಾಂಡಿಚೇರಿಗೆ ಬನ್ನಿ ಎಂದು ಆಹ್ವಾನ ನೀಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ತುಳು ಸಾಹಿತ್ಯ ಪರಿಷತ್ ಅಧ್ಯಕ್ಷ ದಯಾನಂದ ಕತ್ತಲಸಾರ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಬಳ್ಳಾರಿ ಶಾಸಕ ರಾಜಶೇಖರ್, ಉದ್ಯಮಿ ಶಶಿಧರ ಶೆಟ್ಟಿ, ರಾಘವೇಂದ್ರ ರಾವ್, ರಾ.ಸ್ವ.ಸಂಘದ ಕಾರ್ಯವಾಹರಾದ ಬಸವರಾಜ್ , ಶ್ರೀಧರ್, ಜಾರ್ಖಂಡ್ ಸಚಿವ ಓಂಪ್ರಕಾಶ್, ಪ್ರಸಾದ್ ನೇತ್ರಾಲಯದ ಡಾ| ಪ್ರಸಾದ್, ಅಂತರಾಷ್ಟ್ರೀ ಬಾಡಿಬಿಲ್ಡರ್ ರವಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಎ., ಸಂಸದರಾದ ಕೆ.ಸಿ.ರಾಮಮೂರ್ತಿ, ಚಿತ್ರನಟ ಪ್ರನೀತ್ ಸುಭಾಶ್, ಕುಡಚಿ ಶಾಸಕ ರಾಜೀವ, ಸಂಸದರಾದ ರಾಮಮೂರ್ತಿ, ಅಣ್ಣಾಸಾಹೇಬ್ ಜೊಲ್ಲೆ, ಉಮೇಶ್ ಜಾದವ್ ಕಲಬುರ್ಗಿ, ಶಾಸಕರಾದ ಅವಿನಾಶ್ ಜಾದವ್ ಚಿಂಚೋಡಿ, ಗುಜರಾತ್ ಶಾಸಕ ಜಿನರಾಜ ಪೂಜಾರಿ, ದಯಾನಂದ ಭಜಂತ್ರಿ, ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ, ಧರ್ಮೆà ಗೌಡ, ಉದ್ಯಮಿಗಳಾದಿ ಡಾ| ಅನಂತರಾಮ, ಶಶಿರಾಜ ಶೆಟ್ಟಿ ಬರೋಡಾ, ವಿಜಯ ಅಹುಜ ಭಾಗವಹಿಸಿದ್ದರು.
ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್ ಎನ್. ಪ್ರಾಂಶುಪಾಲ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.
ಹೊನಲು ಬೆಳಕಿನ ಕ್ರೀಡಾಕೂಟದಲ್ಲಿ 3399 ವಿದ್ಯಾರ್ಥಿಗಳು ಸಮವಸ್ತ್ರಧಾರಿ ವಿದ್ಯಾರ್ಥಿಗಳು ಮೈನವಿರೇಳಿಸುವ ವಿವಿಧ ಪ್ರದರ್ಶನ ನೀಡಿದರು ಸಹಸ್ರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದ್ದರು.
ವಿದ್ಯಾಸಂಸ್ಥೆ ಸಂಚಾಲಕ ವಸಂತ ಮಾಧವ ಸ್ವಾಗತಿಸಿ, ಜಿನ್ನಪ್ಪ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಶಿಕ್ಷಣ, ಆರೋಗ್ಯ, ಆಹಾರ ಹಿಂದೆ ಗುರುಕುಲ ಮಾದರಿಯಲ್ಲಿ ಉಚಿತವಾಗಿತ್ತು. ಈಗ ವ್ಯಾಪಾರೀಕರಣವಾಗಿದೆ. ಶ್ರೀರಾಮ ವಿದ್ಯಾಕೇಂದ್ರದಲ್ಲಿ 3399 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಸಾಮಾಜಿಕ ಮತ್ತು ಜೀವನ ಸಂಸ್ಕೃತಿಯ ಶಿಕ್ಷಣ ನೀಡಲಾಗುತ್ತಿದೆ.
– ಡಾ| ಪ್ರಭಾಕರ ಭಟ್
ಅಧ್ಯಕ್ಷರು,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.