ಅನುದಾನ ಕೊರತೆ: ಮಂಗಳೂರು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ರದ್ದು
Team Udayavani, Jan 3, 2023, 6:45 AM IST
ಮಂಗಳೂರು: ದೇಶ ವಿದೇಶಿಗರ ಕೂಡುವಿಕೆಯಲ್ಲಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಅನುದಾನದ ಕೊರತೆಯಿಂದ ಈ ಬಾರಿ ರದ್ದುಗೊಳ್ಳುವ ಸಾಧ್ಯತೆ ಹೆಚ್ಚಿದೆ.
ದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಟೀಂ ಮಂಗಳೂರು ನೇತೃತ್ವದಲ್ಲಿ ಕರಾವಳಿ ಉತ್ಸವದ ಭಾಗವಾಗಿ ಗಾಳಿಪಟ ಉತ್ಸವ ನಡೆಯುತ್ತಿತ್ತು. ಆದರೆ, ರಾಜ್ಯ ಸರಕಾರದಿಂದ ಸಮರ್ಪಕವಾಗಿ ಅನುದಾನ ಬಾರದ ಕಾರಣ ಈ ಬಾರಿ ಆಯೋಜನೆಗೊಳ್ಳುವುದು ಅನುಮಾನ ಎನ್ನಲಾಗಿದೆ. ಗಾಳಿಪಟ ಉತ್ಸವಕ್ಕೆ ಸಾಮಾನ್ಯವಾಗಿ ಏಳರಿಂದ ಎಂಟು ದೇಶಗಳ ಪ್ರತಿನಿಧಿಗಳು ಆಗಮಿಸುತ್ತಾರೆ. ಸುಮಾರು 20ರಿಂದ 25 ಲಕ್ಷ ರೂ. ಖರ್ಚು ತಗಲುತ್ತದೆ. ಅಷ್ಟೊಂದು ಹಣ ಹೊಂದಿಸಲು ರಾಜ್ಯ ಸರಕಾರ ಆಸಕ್ತಿ ತೋರುತ್ತಿಲ್ಲ. ಅನುದಾನ ಹೊಂದಿಸುವ ನಿಟ್ಟಿನಲ್ಲಿ ಯಾವುದೇ ಸಂಘ-ಸಂಸ್ಥೆಗಳೂ ಮುಂದೆ ಬರುತ್ತಿಲ್ಲ. ಪರಿಣಾಮ, ಉತ್ಸವ ರದ್ದುಗೊಳಿಸಲು ಆಯೋಜಕರು ಚಿಂತನೆ ನಡೆಸಿದ್ದಾರೆ.
2.5 ಲಕ್ಷ ರೂ. ಬಾಕಿ
ಗಾಳಿಪಟ ಉತ್ಸವ ಕೊನೆಯ ಬಾರಿ 2019ರಲ್ಲಿ ಪಣಂಬೂರು ಕಡಲ ತೀರದಲ್ಲಿ ನಡೆದಿತ್ತು. ಉತ್ಸವಕ್ಕೆ ಬೆಲ್ಜಿಯಂ, ನೆದರ್ಲೆಂಡ್, ಫ್ರಾನ್ಸ್, ಕಾಂಬೋಡಿಯ, ಮಲೇಷ್ಯಾ ಸೇರಿ 8 ದೇಶಗಳ ಸುಮಾರು 16 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಉತ್ಸವಕ್ಕೆ ಪ್ರತ್ಯೇಕ ಅನುದಾನ ನೀಡುವುದಾಗಿ ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದಾಗ ಸಿ.ಪಿ. ಯೋಗೀಶ್ವರ್ ಅವರು ಹೇಳಿದ್ದರು. ಆದರೆ ಈವರೆಗೆ ಯಾವುದೇ ಅನುದಾನ ಸಿಕ್ಕಿಲ್ಲ. ಬದಲಾಗಿ 2.5 ಲಕ್ಷ ರೂ. ನೀಡಲು ರಾಜ್ಯ ಸರಕಾರ ಬಾಕಿ ಇದೆ.
ಜನವರಿ ತಿಂಗಳಲ್ಲಿ ಉತ್ಸವ
2019 ಸೇರಿದಂತೆ ಈ ಹಿಂದೆ ಮಂಗಳೂರಿನಲ್ಲಿ ಜನವರಿ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿತ್ತು. ಗುಜರಾತ್‌ನಲ್ಲಿ ಆಯೋಜನೆಗೊಳ್ಳುವ ಉತ್ಸವಕ್ಕೆ ಆಗಮಿಸುವ ವಿದೇಶಿ ಪ್ರತಿನಿಧಿಗಳಲ್ಲಿ ಹೆಚ್ಚಿನ ಮಂದಿ ಮಂಗಳೂರಿಗೂ ಆಗಮಿಸುತ್ತಿದ್ದರು. ಆದರೆ, ಈ ವರ್ಷದ ಉತ್ಸವಕ್ಕೆ ಮಂಗಳೂರಿನಲ್ಲಿ ಇನ್ನೂ ಯಾವುದೇ ತಯಾರಿ ಆರಂಭಗೊಂಡಿಲ್ಲ. ವಿದೇಶಿಗರನ್ನು ಆಹ್ವಾನಿಸಿ, ಆ ಪ್ರಕ್ರಿಯೆಗೆ ಕನಿಷ್ಠ ಮೂರು ತಿಂಗಳಾದರೂ ಬೇಕು. ಇನ್ನೂ ಆರಂಭಿಕ ಹಂತವೇ ನಡೆಯದ ಕಾರಣ ಈ ಬಾರಿಯ ಉತ್ಸವ ನಡೆಯುವುದಿಲ್ಲ ಎನ್ನುತ್ತಾರೆ ಟೀಂ ಮಂಗಳೂರಿನ ಆರ್ಟಿಸ್ಟ್ ದಿನೇಶ್ ಹೊಳ್ಳ.
ಅನುದಾನದ ಕೊರತೆ
ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲಿ ಮಂಗಳೂರು ಕೇಂದ್ರೀಕೃತವಾಗಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತದೆ. 2019ರಲ್ಲಿ ಕೊನೆಯದಾಗಿ ಉತ್ಸವ ನಡೆದಿತ್ತು. ಬಳಿಕ ನಿಂತಿದ್ದು, ಇನ್ನೂ ಆರಂಭಗೊಂಡಿಲ್ಲ. ಉತ್ಸವ ಆಯೋಜನೆಗೆ ಸಂಬಂಧಪಟ್ಟ ಇಲಾಖೆಯೂ ಉತ್ಸಾಹ ತೋರುತ್ತಿಲ್ಲ. ಆಯೋಜನೆ ಮತ್ತು ಅನುದಾನ ಹೊಂದಿಸುವುದೂ ಸವಾಲಾಗಿದೆ.
– ಸರ್ವೇಶ್ ರಾವ್, ಟೀಂ ಮಂಗಳೂರು ಸ್ಥಾಪಕ
– ನವೀನ್ ಭಟ್, ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.