ಪುಸ್ತಕ ವಾಚನದಿಂದ ಜ್ಞಾನ ವೃದ್ಧಿ: ಆಸ್ರಣ್ಣ
Team Udayavani, Dec 8, 2017, 12:55 PM IST
ಮಂಗಳೂರು : ಮನುಷ್ಯನಿಗೆ ಜ್ಞಾನ ಅತ್ಯಗತ್ಯ. ಅದು ಪುಸ್ತಕದ ರೂಪದಲ್ಲಿ ಅಡಕವಾಗಿದೆ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಸಂಪಾದನೆ ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವೆಂಕಟರಮಣ ಆಸ್ರಣ್ಣ ಅಭಿಪ್ರಾಯಪಟ್ಟರು.
ಎಸ್‌ಎಲ್‌ವಿ ಬುಕ್ ಹೌಸ್ ಮಂಗಳೂರು ನಗರದ ರಥಬೀದಿ ಬಿಇಎಂ ಪ್ರೌಢಶಾಲೆಯ ಮುಂಭಾಗದಲ್ಲಿ ತೆರೆದಿರುವ ದ್ವಿತೀಯ ಮಳಿಗೆಯನ್ನು ಅವರು ಗುರುವಾರ ಉದ್ಘಾಟಿಸಿದರು. ಮನುಷ್ಯ ಜ್ಞಾನಿಯಾಗುವುದಕ್ಕೆ ಪುಸ್ತಕ ರೂಪದಲ್ಲಿ ಮಾರ್ಗ ಲಭಿಸುತ್ತದೆ. ಪುಸ್ತಕಗಳನ್ನು ಓದಿದಷ್ಟು ಜ್ಞಾನವೂ ವೃದ್ಧಿಸುತ್ತದೆ. ಇದರಿಂದ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು.
ಕಾಣಿಯೂರು ಪ್ರಗತಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾಡೋಡಿ ಮಾತನಾಡಿ, ನಾನಾ
ಶಾಲೆಗಳಿಗೆ ಈ ಸಂಸ್ಥೆಯಿಂದ ಪುಸ್ತಕಗಳನ್ನು ಕಳುಹಿಸಲಾಗುತ್ತಿದೆ. ಸಂಸ್ಥೆಯ ಮಾಲಕ ದಿವಾಕರ ದಾಸ್ ಅವರ ಸ್ನೇಹಮಯಿ ವ್ಯಕ್ತಿತ್ವದಿಂದ ಇದು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.
ಸುದಾನ ವಸತಿ ಶಿಕ್ಷಣ ಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್, ಮೈಸೂರು ಗೋರೆ ಅಸೋಸಿಯೇಟ್ಸ್‌ನ
ರವೀಂದ್ರ ಗೋರೆ, ಉದ್ಯಮಿಗಳಾದ ಪದ್ಮನಾಭ ಶೆಟ್ಟಿ ಪುತ್ತೂರು, ಚಂದ್ರನಾಥ್ ಬೆಂಗಳೂರು, ಕನ್ನಡ ರತ್ನ
ಪ್ರಶಸ್ತಿ ಪುರಸ್ಕೃತೆ ಡಾ| ವನಿತಾ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಎಸ್‌ಎಲ್‌ವಿ ಗ್ರೂಪ್ ಮಾಲಕ ದಿವಾಕರ ದಾಸ್, ಪತ್ನಿ ಹೇಮಾವತಿ ದಾಸ್, ಸಹೋದರ ಸುರೇಶ್, ಸಂಸ್ಥೆಯ ಶಾಖಾ ವ್ಯವಸ್ಥಾಪಕ ರಾಜಾ ಅಂಚನ್ ಮೊದಲಾದವರು ಉಪಸ್ಥಿತರಿದ್ದರು. ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್, ಯುವ ಜಯ ಕರ್ನಾಟಕ ಅಧ್ಯಕ್ಷ ಸಹಜ್ ರೈ, ರಾಜಾರಾಂ ಶೆಟ್ಟಿ, ದೇವಿಪ್ರಕಾಶ್ ಶೆಟ್ಟಿ ವಿಟ್ಲ ಶುಭ ಹಾರೈಸಿದರು.
ವಿಟ್ಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಪ್ರಸ್ತಾವನೆಗೈದು, ರಾಮ್‌ದಾಸ್ ಶೆಟ್ಟಿ ವಿಟ್ಲ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.