ಕೋಡಿಕಲ್: ವರ್ಷ ಕಳೆದರೂ ಚರಂಡಿ ಅವ್ಯವಸ್ಥೆ ಮುಗಿದಿಲ್ಲ
ಬೃಹತ್ ಹೊಂಡ ನಿರ್ಮಾಣ; ಸವಾರರಿಗೆ ಸಂಕಷ್ಟ
Team Udayavani, Jun 25, 2020, 1:32 PM IST
ಕೋಡಿಕಲ್‌ನ ಮಂಜಪ್ಪ ಉಳ್ಳಾಲ್ ಕ್ರಾಸ್ ರಸ್ತೆಯ ಜಂಕ್ಷನ್.
ಮಹಾನಗರ: ನಗರದ ಕೋಡಿಕಲ್‌ನ ಕೊನೆಯ ಬಸ್ ನಿಲ್ದಾಣದ ಬಳಿ ಬಸ್ ತಿರುಗುವಲ್ಲಿ ಮಂಜಪ್ಪ ಉಳ್ಳಾಲ್ ರಸ್ತೆ ಕ್ರಾಸ್ ಮಾಡುವಲ್ಲಿ ಒಳ ಚರಂಡಿ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಚರಂಡಿಯ ಅವ್ಯವಸ್ಥೆಯನ್ನು ಇನ್ನೂ ಸರಿಪಡಿಸಿಲ್ಲ. ಆದುದರಿಂದ ಇದು ಅಪಘಾತದ ತಾಣವಾಗುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಅಮೃತ್ ಯೋಜನೆಯಡಿ ಗುತ್ತಿಗೆ ದಾರರು ಇಲ್ಲಿ ಒಳ ಚರಂಡಿ ಕೆಲಸ ವಹಿಸಿಕೊಂಡು, ಮಳೆ ನೀರು ಹರಿಯುವ ಚರಂಡಿಯ ಚಪ್ಪಡಿ ಕಲ್ಲುಗಳನ್ನು ತೆಗೆದು ಬದಿಗೆ ಸರಿಸಲಾಗಿತ್ತು. ಬಳಿಕ ಚರಂಡಿ ಅಗೆದು ಒಳಚರಂಡಿ ಕಾಮಗಾರಿ ಮುಗಿಸಿ ಮಣ್ಣು ತುಂಬಿಸಿ ಹೋಗಿದ್ದಾರೆ. ಇದರಿಂದ ಮಳೆ ಬಂದಾಗ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಅಲ್ಲದೆ ಕಳೆದ ವರ್ಷವೇ ಮಳೆಯಿಂದಾಗಿ ಮಣ್ಣು ಕೊಚ್ಚಿಕೊಂಡು ಹೋಗಿ ವಾಹನ ಸವಾರರಿಗೆ ತೊಂದರೆಯಾಗಿದ್ದು, ಈ ವರ್ಷವೂ ಅದೇ ಪರಿಸ್ಥಿತಿ ಇದೆ ಎಂದು ಸ್ಥಳೀಯ ನಿವಾಸಿಗಳು ಉದಯವಾಣಿಗೆ ತಿಳಿಸಿದ್ದಾರೆ. ಈಗಾಗಲೇ ಹಲವಾರು ದ್ವಿಚಕ್ರ ವಾಹನ ಸವಾರರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ ರಭಸದಿಂದ ಹರಿಯುವ ಮಳೆ ನೀರು ಪಕ್ಕದ ಕಟ್ಟಡಗಳಿಗೂ ನುಗ್ಗುತ್ತಿದೆ. ಇದು ಕೋಡಿಕಲ್‌ನ ಕೊನೆಯ ಬಸ್ ನಿಲ್ದಾಣ ಆಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ನಾಲ್ಕೈದು ಬಸ್‌ಗಳು ಇಲ್ಲಿಯೇ ತಿರುಗುತ್ತಿದ್ದು, ಇದರಿಂದಾಗಿ ಬೃಹತ್ ಹೊಂಡ ನಿರ್ಮಾಣವಾಗಿದೆ.
ಕಳೆದ ವರ್ಷ ಮಳೆಗಾಲದಲ್ಲಿ ಈ ಹೊಂಡಕ್ಕೆ ಕೇವಲ ಜಲ್ಲಿ ಕಲ್ಲು ತುಂಬಿಸಿ ಮುಚ್ಚಿದ್ದು, ಈ ವರ್ಷದ ಮಳೆಗಾಲದಲ್ಲಿ ಪುನಃ ಹೊಂಡ ನಿರ್ಮಾಣವಾಗಿದೆ. ಹೊಂಡ ವನ್ನು ಮುಚ್ಚಲು ಕ್ರಮ ವಹಿಸದಿದ್ದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಕೂಡಲೇ ಸಮಸ್ಯೆ ಸರಿಪಡಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
“ಕಳೆದ ವರ್ಷ ಕಾಮಗಾರಿ ನಡೆಸುವ ಸಂದರ್ಭ ಇಲ್ಲಿ ಒಳ ಚರಂಡಿಗಾಗಿ ಅಗೆದ ಜಾಗದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಸ್ಥಳೀಯ ನಾಗರಿಕರು ಸಂಬಂಧಪಟ್ಟ ಎಂಜಿನಿಯರ್ ಗಮನಕ್ಕೆ ತಂದಿದ್ದರು. ಆದರೆ ಅವರು ಜನರ ಬೇಡಿಕೆಗೆ ಸ್ಪಂದಿಸದೆ, ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮುಗಿಸಿ ಹೋಗಿದ್ದು, ಬಳಿಕ ಇತ್ತ ಬಂದಿಲ್ಲ ಎಂದು ಓರ್ವ ನಾಗಕರಿಕರು ಉದಯವಾಣಿಗೆ ತಿಳಿಸಿದರು.
ಶೀಘ್ರ ದುರಸ್ತಿ
ಇಲ್ಲಿ ಹೊಂಡ ನಿರ್ಮಾಣವಾಗಿ ನಾಗರಿಕರಿಗೆ ಬಹಳಷ್ಟು ಸಮಸ್ಯೆಯಾಗಿದೆ. ದುರಸ್ತಿ ಮಾಡುವಂತೆ ಪಾಲಿಕೆಯ ಗಮನಕ್ಕೆ ತಂದಿದ್ದು, ಗುತ್ತಿಗೆದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದಾರೆ. ಶೀಘ್ರದಲ್ಲಿಯೇ ದುರಸ್ತಿ ಕೆಲಸ ಪೂರ್ತಿಗೊಳ್ಳುವ ನಿರೀಕ್ಷೆ ಇದೆ.
-ಮನೋಜ್ ಕುಮಾರ್, ಸ್ಥಳೀಯ ಕಾರ್ಪೊರೇಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.