ಕೊಕ್ಕಡ ದೇವಸ್ಥಾನ : ಕೋರಿ ಜಾತ್ರೆ ಸಂಪನ್ನ
Team Udayavani, Dec 21, 2018, 1:10 AM IST
ಕೊಕ್ಕಡ: ಪೂರ್ವಶಿಷ್ಟ ಸಂಪ್ರದಾಯದಂತೆ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಡಿ. 18ರಂದು ಕೊಕ್ಕಡ ಕೋರಿ ಜಾತ್ರೆ, ಉತ್ಸವಾದಿಗಳು ನಡೆದವು. ದೇವಸ್ಥಾನದಲ್ಲಿ ಉತ್ಸವಾದಿಗಳು ನಡೆದು ಕೋರಿಗದ್ದೆಗೆ ಮೆರವಣಿಗೆಯಲ್ಲಿ ದೇವರು ಸಾಗಿ, ಕಟ್ಟೆಯಲ್ಲಿ ವಿರಾಜಮಾನರಾಗಿ, ಸಂಪ್ರದಾಯದಂತೆ ಜಾನುವಾರುಗಳನ್ನು ಇಳಿಸಿ ಗದ್ದೆಗೆ ಪೂಕರೆಯನ್ನು ಹಾಕುವ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಜಾನುವಾರು ಗದ್ದೆಗೆ
ಬ್ರಹ್ಮಶ್ರೀ ಎಡಮನೆ ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಗಣಹೋಮ, ಏಕಾದಶ ರುದ್ರ, ಮಹಾಪೂಜೆ ನಡೆದು ಗುತ್ತಿನ ಮನೆಯಿಂದ ಜಾನುವಾರುಗಳನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕರೆತರಲಾಯಿತು. ದೇವಸ್ಥಾನದಲ್ಲಿ ದೇವರ ಒಪ್ಪಿಗೆ ಪಡೆದು ಮತ್ತೆ ಈ ಜಾನುವಾರುಗಳನ್ನು ಬ್ಯಾಂಡು ವಾಲಗ, ಕೊರಗ ಭೂತಗಳ ಮೆರವಣಿಗೆಯ ಸಮೇತ ಕೋರಿ ಗದ್ದೆಗೆ ಇಳಿಸಲಾಯಿತು. ಊರ- ಪರವೂರಿನಿಂದ ಕರೆತಂದಿದ್ದ ಜಾನುವಾರುಗಳನ್ನು ಗದ್ದೆಯಲ್ಲಿ ಇಳಿಸಿ ಹರಕೆ ಸಲ್ಲಿಸಲಾಯಿತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ಪೂಕರೆ
ದೇವರು ಕೋರಿ ಗದ್ದೆಯ ಕಟ್ಟೆಗೆ ಸಾಗಿ ಪೂಜೆ ಸಲ್ಲಿಕೆಯಾದೊಡನೆ ನಾಗಬ್ರಹ್ಮರು ಮತ್ತು ಇತರ ದೈವಗಳ ಸಮಕ್ಷಮ ಕೋರಿ ಗದ್ದೆಗೆ ಪೂಕರೆಯನ್ನು ಹಾಕಲಾಯಿತು. ದೇವಸ್ಥಾನದಲ್ಲಿ ಸಂಜೆ ವೇಳೆ ಉತ್ಸವಾದಿಗಳು ನಡೆದ ಅನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ರಾತ್ರೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು. ಅರ್ಚಕ ರಮಾನಂದ ಭಟ್ ಮತ್ತಿತರರು ಧಾರ್ಮಿಕ ವಿಧಿ - ವಿಧಾನಗಳನ್ನು ನಡೆಸಿದರು.
ಕೊಕ್ಕಡ ಕೋರಿ ಜಾತ್ರೆಯ ಕಾರ್ಯಕ್ರಮ ದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ರಾವ್ ಹಾಗೂ ಸದಸ್ಯರು, ಅರ್ಚಕ ರಮಾನಂದ ಭಟ್ ಮತ್ತು ಪವಿತ್ರಪಾಣಿ ರಾಧಾಕೃಷ್ಣ ಯಡಪ್ಪಾಡಿತ್ತಾಯ, ಉದ್ಯಮಿ ಪೂವಾಜೆ ಕುಶಾಲಪ್ಪ ಗೌಡ, ದೇವದಾಸ್ ಬಾಣಜಾಲು, ಮಹಾಬಲ ನಾಯ್ಕ, ಕೃಷ್ಣಪ್ಪ ಗೌಡ, ರುಕ್ಮಯ್ಯ ಮಡಿವಾಳ, ಜನಾರ್ದನ ಶಬರಾಡಿ ಮತ್ತು ಊರಿನ ಗಣ್ಯರು ಭಾಗವಹಿಸಿದರು.
ಹರಕೆ ಸಲ್ಲಿಕೆ
ಭಕ್ತರು ಬೆಳಗ್ಗಿನಿಂದಲೇ ತಲೆಯಲ್ಲಿ ಸೊಪ್ಪಿನ ಕಟ್ಟು ಹೊತ್ತುಕೊಂಡು ಗದ್ದೆಗೆ ಸುತ್ತು ಬಂದು ಈ ಕೋರಿ ಗದ್ದೆಗೆ ಸೊಪ್ಪನ್ನು ಹಾಕುವಂತಹ ಆರೋಗ್ಯ ಸಂಬಂಧಿ ಹರಕೆಗಳನ್ನು ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.