ಕೊಕ್ಕಡ ದೇವಾಸ್ಥಾನ : ಕೋರಿ ಜಾತ್ರೆ ಸಂಪನ್ನ 


Team Udayavani, Dec 18, 2017, 4:49 PM IST

18-Dec-18.jpg

ಕೊಕ್ಕಡ: ಪೂರ್ವಶಿಷ್ಟ ಸಂಪ್ರದಾಯದಂತೆ ಕೊಕ್ಕಡ ಕೋರಿ ಜಾತ್ರೆ, ಉತ್ಸವಾದಿಗಳು ಬ್ರಹ್ಮಶ್ರೀ ಎಡಮನೆ ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಗಣಪತಿ ಹೋಮ, ಏಕಾದಶ ರುದ್ರ, ಮಹಾಪೂಜೆ ಉತ್ಸವಾದಿಗಳ ಬಳಿಕ ಕೋರಿಗದ್ದೆಗೆ ಮೆರವಣಿಗೆಯಲ್ಲಿ ದೇವರು ಸಾಗಿ ಕಟ್ಟೆಯಲ್ಲಿ ವಿರಾಜಮಾನರಾಗಿ ಸಂಪ್ರದಾಯದಂತೆ ಜಾನುವಾರುಗಳನ್ನು ಇಳಿಸಿ ಗದ್ದೆಗೆ ಪೂಕರೆಯನ್ನು ಹಾಕುವ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.  

ಊರ ಪರವೂರ ಜನರು ಬೆಳಗ್ಗಿನಿಂದಲೇ ತಲೆಯಲ್ಲಿ ಸೊಪ್ಪಿನ ಕಟ್ಟು ಹೊತ್ತುಕೊಂಡು ಗದ್ದೆಗೆ ಸುತ್ತು ಬಂದು ಕೋರಿ ಗದ್ದೆಗೆ ಸೊಪ್ಪನ್ನು ಹಾಕಿ ಆರೋಗ್ಯ ಸಂಬಂಧಿ ಹರಕೆಗಳನ್ನು ಸಲ್ಲಿಸಿದರು. ಗುತ್ತಿನ ಮನೆಯಿಂದ ಜಾನುವಾರುಗಳನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ಕರೆತರಲಾಯಿತು. ದೇವಸ್ಥಾನದಲ್ಲಿ ದೇವರ ಒಪ್ಪಿಗೆ ಪಡೆದು ಮತ್ತೆ ಈ ಜಾನುವಾರುಗಳನ್ನು ಮೆರವಣಿಗೆಯಲ್ಲಿ ಕೋರಿ ಗದ್ದೆಗೆ ಇಳಿಸಲಾಯಿತು. ಈ ಸಂದರ್ಭ ಹರಕೆಗಾಗಿ ಊರಪರವೂರಿನಿಂದ ಕರೆತಂದಿದ್ದ ಜಾನುವಾರುಗಳನ್ನೂ ಗದ್ದೆಗೆ ಇಳಿಸಿ ಹರಕೆ ಸಲ್ಲಿಸಲಾಯಿತು.

ದೇವರು ಕೋರಿ ಗದ್ದೆಯ ಕಟ್ಟೆಗೆ ಸಾಗಿ ಪೂಜೆ ಸಲ್ಲಿಕೆಯಾದೊಡನೆ ನಾಗಬ್ರಹ್ಮರು ಮತ್ತು ಇನ್ನಿತರ ದೈವಗಳ ಸಮಕ್ಷಮ ಕೋರಿ ಗದ್ದೆಗೆ ಪೂಕರೆಯನ್ನು ಹಾಕಲಾಯಿತು. ದೇಗುಲದಲ್ಲಿ ಸಂಜೆ ವೇಳೆ ಉತ್ಸವಾದಿಗಳು ನಡೆದ ಅನಂತರ ಭಕ್ತರಿಗೆ ಪ್ರಸಾದ ವಿತರಣೆ ನಡೆದು, ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಅರ್ಚಕರಾದ ರಮಾನಂದ ಭಟ್‌ ಮತ್ತಿತರರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು.

ಪೂಕರೆ ವಾಲುವಿಕೆಯ ಸಂಕೇತ
ಜಾತ್ರೆಯಂದು ದೇವರ ಸಮ್ಮುಖದಲ್ಲಿ ಕೋರಿಗದ್ದೆಯಲ್ಲಿ ನೆಡಲಾಗುವ ಎತ್ತರದ ಪೂಕರೆಯು ಯಾವ ಕಡೆಗೆ, ದಿಕ್ಕಿಗೆ ವಾಲುತ್ತದೆ ಅನ್ನುವುದನ್ನೇ ಆಧರಿಸಿ ಈ ಭಾಗದ ಹಲವಾರು ಚಟುವಟಿಕೆಗಳು ಮುಂದಿನ ದಿನಗಳಲ್ಲಿ ನಿರ್ಧರಿಸಲ್ಪಡುತ್ತಿರುವುದು ನಡೆದು ಬಂದ ತುಳುನಾಡಿನ ಒಂದು ನಂಬಿಕೆ. ಕೋರಿ ಗದ್ದೆಯಲ್ಲಿ ನೆಡಲಾಗುವ ಪೂಕರೆಯು ಗದ್ದೆಯು ನೀರು ತುಂಬಿರುವ ಕಾರಣ ನೇರ ನಿಲ್ಲದೆ ಯಾವುದಾದರೂ ಒಂದು ಕಡೆಗೆ ವಾಲುವುದು ಮಾಮೂಲಿ. ಆದರೆ ಪೂಕರೆ ಈ ಬಾರಿ ಯಾವ ದಿಕ್ಕಿಗೆ ವಾಲಿದೆ ಅನ್ನುವ ಲೆಕ್ಕಾಚಾರವನ್ನೇ ಎದುರಿಟ್ಟುಕೊಂಡು ಮುಂದಿನ ಬೆಳೆ, ಮಳೆ, ಜಾತ್ರೆ ಅನಂತರ ನಡೆಯುವ ಕೋಳಿ ಅಂಕದಲ್ಲಿ ಯಾವ ಕಡೆಯ ಕೋಳಿ ಜಯಿಸುತ್ತದೆ, ಶುಭ, ಅಶುಭ ಕಾರ್ಯಗಳು ಈ ಸೀಮೆಯಲ್ಲಿ ಇದೇ ರೀತಿ ಮುಂದೆ ನಡೆಯಲಿ ಅನ್ನುವ ಬಗ್ಗೆ ಈ ಪೂಕರೆ ವಾಲಿರುವ ದಿಕ್ಕನ್ನು ಅನುಸರಿಸಿ ನಿಖರವಾಗಿ ಲೆಕ್ಕಾಚಾರ ಹೇಳುವ ಹಿರಿಯರು ಈಗಲೂ ಇದ್ದಾರೆ.

ಟಾಪ್ ನ್ಯೂಸ್

11

Kannada Rajyotsava: ನಿಂತ ನೆಲವೇ ಕರ್ನಾಟಕ!

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

3-raj-b-shetty

Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kharge–Siddu

Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ

Waqf

Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್‌ ಬಿಸಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Coastal-Rain

Heavy Rain: ಕರಾವಳಿಯಲ್ಲಿ ಸಂಜೆಯಾಗುತ್ತಲೇ ಮಳೆ; ಬೆಳ್ತಂಗಡಿಯಲ್ಲಿ ಮನೆ ಕುಸಿತ

4

Puttur: ಅಮ್ಚಿನಡ್ಕದಲ್ಲಿ ಮತ್ತೆ ಕಾಡಾನೆ ಹಾವಳಿ

accident2

Belthangady: ಟ್ಯಾಂಕರ್‌ ಪಲ್ಟಿ; ಪ್ರಾಣಾಪಾಯದಿಂದ ಪಾರು

1(1)

Puttur: ಎಲ್ಲೆಡೆ ಬೆಳಕಿನ ಹಬ್ಬದ ಝಗಮಗ

POLICE-5

Vitla ಪೊಲೀಸರಿಂದ ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4

New Delhi: ದೀಪಾವಳಿ ಹಬ್ಬದ ವೇಳೆ ಅಮೆರಿಕ ರಾಯಭಾರಿ ಡ್ಯಾನ್ಸ್‌!

11

Kannada Rajyotsava: ನಿಂತ ನೆಲವೇ ಕರ್ನಾಟಕ!

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

4-editorial

Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.