ಕೊಳ್ನಾಡು: ವಸತಿ ಯೋಜನೆ ಕಾಮಗಾರಿ ಆದೇಶಪತ್ರ ವಿತರಣೆ
Team Udayavani, Jan 4, 2018, 12:28 PM IST
ಕೊಳ್ನಾಡು: ಕೊಳ್ನಾಡು ಗ್ರಾ.ಪಂ. ವ್ಯಾಪ್ತಿಯ 47 ಫಲಾನುಭವಿಗಳಿಗೆ ವಸತಿ ಯೋಜನೆ ಕಾಮಗಾರಿ ಆದೇಶಪತ್ರವನ್ನು ನೇತ್ರಾವತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, 4 ಹಂತಗಳಲ್ಲಿ ವಸತಿ ನಿಗಮ ಹಾಗೂ ಉದ್ಯೋಗ ಖಾತ್ರಿ ಯೋಜನೆ ಮೂಲಕ ರೂ. 1,53,040 ಸಾಲರಹಿತ ಸಹಾಯಧನ ಯೋಜನೆ ನೀಡಲಾಗಿದ್ದು, ಫಲಾನುಭವಿಗಳು ಸರಕಾರದ ನಿಯಮವನ್ನು ಪಾಲಿಸಿಕೊಂಡು ಕಾಲಮಿತಿಯೊಳಗೆ ಮನೆ ನಿರ್ಮಿಸಬೇಕು. ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮಕ್ಕೆ 2017-18ನೇ ಸಾಲಿನಲ್ಲಿ ಅತಿ ಹೆಚ್ಚು ಮನೆ ಒದಗಿಸಿದ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಬಡವರ ಮೇಲಿನ ಕಾಳಜಿ ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ವಸತಿ ಮತ್ತು ನಿವೇಶನ ಸಮಿತಿ ಸಭೆಯ ಸದಸ್ಯ ವಿಶ್ವನಾಥ ಶೆಟ್ಟಿ ಪೆರ್ಲದಬೈಲು, ಯೂಸುಫ್ ಟಿ. ಉಪಸ್ಥಿತರಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.