ಕೊಂಕಣ ರೈಲ್ವೆ: ಮುಂಗಾರು ವೇಳಾಪಟ್ಟಿ ಜೂ. 10ರಿಂದ ಅನ್ವಯ
Team Udayavani, Jun 9, 2022, 7:20 AM IST
ಮಂಗಳೂರು: ಕೊಂಕಣ ರೈಲ್ವೇ ಮೂಲಕ ಸಂಚರಿಸುವ ರೈಲುಗಳು ಜೂ. 10ರಿಂದ ಅಕ್ಟೋಬರ್ 31ರ ವರೆಗೆ ಮುಂಗಾರು ವೇಳಾಪಟ್ಟಿಯನ್ನು ಅನುಸರಿಸಲಿವೆ.
ಟಿಕೆಟ್ ಬುಕಿಂಗ್ ಮಾಡಿದವರು ಪ್ರಯಾಣಕ್ಕೆ ಮೊದಲು ವೇಳಾಪಟ್ಟಿಯನ್ನು ದೃಢಪಡಿಸಿ ಕೊಳ್ಳುವಂತೆ ದಕ್ಷಿಣ ರೈಲ್ವೇ ಸೂಚಿಸಿದೆ.
ನಂ. 12620 ಮಂಗಳೂರು ಸೆಂಟ್ರಲ್ ಮುಂಬಯಿ ಲೋಕಮಾನ್ಯ ತಿಲಕ್ ಮತ್ಸ್ಯಗಂಧಎಕ್ಸ್ ಪ್ರಸ್ ಮಂಗಳೂರಿನಿಂದ 12.40ಕ್ಕೆ (ಪ್ರಸ್ತುತ 2.15) ಹೊರಡಲಿದೆ. ನಂ. 12619 ಮತ್ಸ್ಯಗಂಧ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 10.10ಕ್ಕೆ (ಪ್ರಸ್ತುತ ಬೆಳಗ್ಗೆ 7.40) ತಲಪುವುದು.
ನಂ. 12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಸಂಜೆ 4.35ಕ್ಕೆ (ಮಧ್ಯಾಹ್ನ 2) ಹೊರಡುವುದು. ನಂ. 12133 ಮುಂಬಯಿ ಸಿಎಸ್‌ಟಿ-ಮಂಗಳೂರು ಜಂಕ್ಷನ್ ರೈಲು ಮಂಗಳೂರಿಗೆ ಸಂಜೆ 3.45(ಮಧ್ಯಾಹ್ನ 1.05)ಕ್ಕೆ ತಲಪುವುದು.
ನಂ. 06601 ಮಡಗಾಂವ್ ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಮಡಗಾಂವ್‌ನಿಂದ ಮಧ್ಯಾಹ್ನ 1.45 (ಮ. 2)ಕ್ಕೆ ಹೊರಡುವುದು. ಮಂಗಳೂರು ಜಂಕ್ಷನ್‌ಗೆ ಆಗಮನ, ನಿರ್ಗಮನ ರಾತ್ರಿ 9.08/9.10(ಪ್ರಸ್ತುತ 8.33/8.35). ರೈಲು ಮಂಗಳೂರು ಸೆಂಟ್ರಲ್‌ಗೆ ರಾತ್ರಿ 9.40(9.05)ಕ್ಕೆ ತಲಪುವುದು.
ನಂ. 12431 ತಿರುವನಂತಪುರಂ ಸೆಂಟ್ರಲ್ ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ಮಂಗಳ, ಗುರು, ಶುಕ್ರವಾರಗಳಂದು ತಿರುವನಂತಪುರದಿಂದ ಮಧ್ಯಾಹ್ನ 2.30 (ಪ್ರಸ್ತುತ ರಾತ್ರಿ 7.15)ಕ್ಕೆ ಎಂದರೆ 4.45 ಗಂಟೆ ಬೇಗ ಹೊರಡಲಿದೆ.
ನಂ. 12617 ಎರ್ನಾಕುಳಂ-ಹಜರತ್ ನಿಜಾಮುದೀನ್ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ಎರ್ನಾಕುಳಂನಿಂದ ಬೆಳಗ್ಗೆ 10.40(ಮಧ್ಯಾಹ್ನ 1.25)ಕ್ಕೆ ಹೊರಡಲಿದೆ.
ನಂ. 16346 ತಿರುವನಂತಪುರ-ಮುಂಬಯಿ ನೇತ್ರಾವತಿ ಎಕ್ಸ್‌ಪ್ರೆಸ್ ಹೊರಡುವ ಸಮಯದಲ್ಲಿ ಬದಲಾವಣೆ ಇರುವುದಿಲ್ಲ. ಆದರೆ ಕಾಸರಗೋಡಿನಲ್ಲಿ ಆಗಮನ ನಿರ್ಗಮನ ರಾತ್ರಿ 8.08/08.10. ಮಂಗಳೂರು ಜಂಕ್ಷನ್ ರಾತ್ರಿ 9.30/9.40. ಇದು ಪ್ರಸ್ತುತ ಸಮಯಕ್ಕಿಂತ ಒಂದು ಗಂಟೆ ಮೊದಲಾಗಿರುತ್ತದೆ.
ನಂ. 12977 ಎರ್ನಾಕುಳಂ ಜಂಕ್ಷನ್-ಅಜ್ಮೇರ್ ಮರುಸಾಗರ್ ಎಕ್ಸ್‌ಪ್ರೆಸ್ ರವಿವಾರಗಳಂದು ಎರ್ನಾಕುಳಂನಿಂದ ಹೊರಡುವುದು. ಹೊರಡುವವ ಸಮಯ ಸಂಜೆ 6.50 (ಪ್ರಸ್ತುತ 8.25). ನಂ.19577 ತಿರುನಲ್ವೇಲಿ ಜಂಕ್ಷನ್-ಜಾಮ್ ನಗರ್ ಸೋಮವಾರ, ಮಂಗಳವಾರಗಳಂದು ತಿರುನಲ್ವೇಲಿಯಿಂದ ಬೆಳಗ್ಗೆ 5.15ಕ್ಕೆ(ಪ್ರಸ್ತುತ 8)ಹೊರಡುವುದು.
ನಂ. 22659 ಕೊಚ್ಚುವೇಲಿ-ಯೋಗನಗರಿ ಹೃಷಿಕೇಶ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಶುಕ್ರವಾರಗಳಂದು ಕೊಚ್ಚುವೇಲಿಯಿಂದ ಬೆಳಗ್ಗೆ 4.50(9.10)ಕ್ಕೆ ಹೊರಡುವುದು. ನಂ.12202 ಕೊಚ್ಚುವೇಲಿ -ಲೋಕಮಾನ್ಯ ತಿಲಕ್ ಗರೀಬ್‌ರಥ್ ಎಕ್ಸ್‌ಪ್ರೆಸ್ ಕೊಚ್ಚುವೇಲಿಯಿಂದ ಬೆಳಗ್ಗೆ 7.45(ಪ್ರಸ್ತುತ 8.45)ಕ್ಕೆ ಹೊರಡುವುದು.
ನಂ.22476 ಕೊಯಮತ್ತೂರು ಹಿಸಾರ್ ಕೊಯಮತ್ತೂರಿನಿಂದ ಮಧ್ಯಾಹ್ನ 12.40 (ಪ್ರಸ್ತುತ 2.55)ಕ್ಕೆ ಹೊರಡುವುದು. ನಂ. 02197 ಕೊಯ ಮತ್ತೂರು ಜಂಕ್ಷನ್ ಜಬಲ್ಪುರ ವಿಶೇಷ ರೈಲು ಕೊಯಮತ್ತೂರಿನಿಂದ ಸಂಜೆ 3.25(ಪ್ರಸ್ತುತ 5.05)ಕ್ಕೆ ಹೊರಡಲಿದೆ. ಇದು ಜೂನ್ 13ರಿಂದ ಆಗಸ್ಟ್ 1ರ ವರೆಗೆ ಅನ್ವಯ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.