ರೋನ್‌ರೋಚ್ ಅವರಿಗೆ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ
Team Udayavani, Jul 11, 2017, 2:25 AM IST
ಬಿಕರ್ನಕಟ್ಟೆ: ಖ್ಯಾತ ಕೊಂಕಣಿ ಸಾಹಿತಿ ರೋನ್ ರೋಚ್ ಅವರಿಗೆ 2017ನೇ ಸಾಲಿನ ದಿ| ವಿಕ್ಟರ್ ರೊಡ್ರಿಗಸ್ ಆಂಜೆಲೊರ್ ಸ್ಮಾರಕ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ರವಿವಾರ ನಗರದ ಬಿಕರ್ನಕಟ್ಟೆ ಬಾಲ ಯೇಸು ಪುಣ್ಯಕ್ಷೇತ್ರದ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಮಂಗಳೂರು ಧರ್ಮಪ್ರಾಂತದ ಎಪಿಸ್ಕೋಪಲ್ ವಿಗಾರ್ ಕಾರ್ಮೆಲೈಟ್ ಧರ್ಮಗುರು ರೆ| ಡಾ| ಪಿಯುಸ್ ಡಿ’ಸೋಜಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ದಿವಂಗತ ವಿಕ್ಟರ್ ರೊಡ್ರಿಗಸ್ ಅವರ ಸೇವಾ ಮನೋಭಾವವನ್ನು ಕೊಂಡಾಡಿದ ಅವರು ಪ್ರಶಸ್ತಿ ವಿಜೇತ ರೋನ್ ರೋಚ್ ಅವರ ಕೊಂಕಣಿ ಸಾಹಿತ್ಯದ ಸೇವೆಯನ್ನು ಪ್ರಶಂಸಿಸಿ ಅಭಿನಂದಿಸಿದರು.
ಪ್ರಶಸ್ತಿಯು 10,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಫಲಪುಷ್ಪ, ಶಾಲು ಮತ್ತು ಸಮ್ಮಾನವನ್ನು ಒಳಗೊಂಡಿದೆ. ಮುಖ್ಯ ಅತಿಥಿ ಧರ್ಮಗುರು ರೆ| ಡಾ| ವಿಲ್ಫೆ†ಡ್ ರೊಡ್ರಿಗಸ್ ಅವರು ಕೊಂಕಣಿ ಪ್ರತಿಕೆ “ನಮಾನ್ ಬಾಳೊಕ್ ಜೆಜು’ 2001ರಲ್ಲಿ ಆರಂಭಿಸುವಾಗ ದಿವಂಗತ ವಿಕ್ಟರ್ ರೊಡ್ರಿಗಸ್ ಅವರು ನೀಡಿದ ಸಹಕಾರವನ್ನು ಸ್ಮರಿಸಿದರು. ಇನ್ನೋರ್ವ ಮುಖ್ಯ ಅತಿಥಿ ಖ್ಯಾತ ಕೊಂಕಣಿ ಸಾಹಿತಿ ನವೀನ್ ಕುಲಶೇಖರ್ ಅವರು ಕೊಂಕಣಿ ಭಾಷೆ, ಸಾಹಿತ್ಯವನ್ನು ಅಳಿಯದೆ ಉಳಿಸಲು ಹೆಚ್ಚೆಚ್ಚು ಜನರು ಪತ್ರಿಕೆಗಳನ್ನು ಖರೀದಿಸಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ರೋನ್ ರೋಚ್ ಅವರ ಪರವಾಗಿ ಅವರ ಪತ್ನಿ ಗ್ರೇಸ್ ಮಾರಿಯಾ ಅವರು ತಮ್ಮ ಪತಿಯ ಕೊಂಕಣಿ ಸಾಹಿತ್ಯ ಸೇವೆಯನ್ನು ಪರಿಗಣಿಸಿ ನೀಡಿದ ಪ್ರಶಸ್ತಿಗೋಸ್ಕರ ಕೃತಜ್ಞತೆ ಸಲ್ಲಿಸಿದರು. ಸಮನ್ವಯ ಸಂಸ್ಥೆಯ ನಿರ್ದೇಶಕ ರೆ| ಡಾ| ರೊನಾಲ್ಡ್ ಕುಟಿನ್ಹೊ ಅವರು ಸ್ವಾಗತಿಸಿ, ಸೆಲಿನ್ ರೊಡ್ರಿಗಸ್ ವಂದಿಸಿದರು. ರೆ| ಡಾ| ಪಿಯುಸ್ ಪಿಂಟೊ ಅವರು ಪ್ರಶಸ್ತಿ ವಿಜೇತರನ್ನು ಪರಿಚಯಿಸಿ, ಡೊಲ್ಫಿ ಲೋಬೊ ಕಾಸ್ಸಿಯಾ ನಿರೂಪಿಸಿದರು. ದಿ| ವಿಕ್ಟರ್ ರೊಡ್ರಿಗಸ್ ಅವರ ಜೀವನಕ್ಕೆ ಸಂಬಂಧಿಸಿದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಹಲವಾರು ಕೊಂಕಣಿ ಸಾಹಿತಿಗಳು ಮತ್ತು ಪ್ರಶಸ್ತಿ ವಿಜೇತರ ಬಂಧು ಮಿತ್ರರು ಹಾಗೂ ದಿವಂಗತ ವಿಕ್ಟರ್‌ರವರ ಕುಟುಂಬದವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು
Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್
Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !
MUST WATCH
ಹೊಸ ಸೇರ್ಪಡೆ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.