ತ್ಯಾಜ್ಯ ಮಣ್ಣು ತುಂಬಿಸಿ ಮರಳು ಸಂಗ್ರಹಕ್ಕೆ ಹುನ್ನಾರ?

Team Udayavani, Apr 30, 2018, 11:36 AM IST

30-April-7.jpg

ಕೂಳೂರು : ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಕೂಳೂರು ಪಡುಕೋಡಿ, ಬಂಗ್ರ ಕೂಳೂರು ಪ್ರದೇಶದಲ್ಲಿ ಫ‌ಲ್ಗುಣಿ ನದಿಗೆ ತ್ಯಾಜ್ಯ ಮಣ್ಣು ತುಂಬಿ ಅಲ್ಲಲ್ಲಿ ಒತ್ತುವರಿ, ಅತಿ ಕ್ರಮ ಮಾಡಲಾಗುತ್ತಿದೆ. ಒಂದೆಡೆ ನದಿ ದಂಡೆಯನ್ನೇ ನುಂಗಲಾಗುತ್ತಿದ್ದರೆ, ಇನ್ನೊಂದೆಡೆ ನದಿ ನೀರಿಗೆ ಮಣ್ಣು ಹಾಕಿ ವಿಸ್ತಾರ ಮಾಡಲಾಗುತ್ತಿದೆ.

ದಿನಕ್ಕೆ ನೂರಾರು ಲಾರಿಗಳು ಸರತಿ ಸಾಲಿನಲ್ಲಿ ಆಗಮಿಸಿ ನದಿ ದಂಡೆಯ ಉದ್ದಕ್ಕೂ ಮಣ್ಣು ತುಂಬಿಸಿ ಒತ್ತುವರಿ ಮಾಡಲಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್‌ನಿಂದ ಹಿಡಿದು ಹಳೆ ಕಟ್ಟಡ ಕೆಡವಿದ ಸಾಮಾನುಗಳು, ಗಾಜಿನ ಚೂರುಗಳು ರಾಶಿ ರಾಶಿಯಾಗಿ ನದಿ ಒಡಲು ಸೇರುತ್ತಿವೆ. ಇನ್ನೊಂದೆಡೆ ನದಿಯ ದಡದ ಉದ್ದಕ್ಕೂ ಇದ್ದ ಕಾಂಡ್ಲ ಗಿಡಗಳೂ ಮಣ್ಣು ರಾಶಿಯನ್ನು ಸೇರಿ ಮರೆಯಾಗುತ್ತಿವೆ. ಜನವರಿಯಲ್ಲಿ ಜಿಲ್ಲಾಧಿಕಾರಿಯವರಿಗೆ ದೂರುನೀಡಲಾಗಿದೆ. ಜಿಲ್ಲಾ ಧಿಕಾರಿ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ತತ್‌ಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಭಾಗದಲ್ಲಿ ಈ ಹಿಂದೆ ಹೊಗೆ ತೆಗೆಯಲು ಯಾವುದೇ ವ್ಯವಸ್ಥೆ ಇರಲಿಲ್ಲ. ತಣ್ಣೀರುಬಾವಿ ಪ್ರದೇಶದಲ್ಲಿ ದಕ್ಕೆ ನಿರ್ಮಿಸಿ ಮರಳು ತೆಗೆಯಲು ಅನುಮತಿ ನೀಡಲಾಗಿತ್ತು. ಆದರೆ ಇದೀಗ ಪಡುಕೋಡಿ ಬಳಿಯೂ ಹೊಗೆ ತೆಗೆಯುವ ಕಾರ್ಯಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಈ ಭಾಗದಲ್ಲಿಯೂ ನದಿ ದಂಡೆಯನ್ನು ಮಣ್ಣು ಹಾಕುವ ಮೂಲಕ ವಾಹನ ಸಲೀಸಾಗಿ ಓಡಾಡಲು, ಮರಳು ರಾಶಿ ಹಾಕಲು ನದಿಯನ್ನೇ ಬಳಸಿಕೊಳ್ಳಲಾಗುತ್ತಿದೆ. 

ಹೆದ್ದಾರಿಯಲ್ಲೂ ಅನಧಿಕೃತ ದಿಢೀರ್‌ ತಿರುವು ನಿರ್ಮಾಣ!
ಈ ಪಡುಕೋಡಿ ಬಂಗ್ರ ಕೂಳೂರು ಸಾಗಲು ಸರಿಯಾದ ರಸ್ತೆ ಇರಲಿಲ್ಲ. ಇದೀಗ ರಸ್ತೆ ಕಾಂಕ್ರೀಟ್‌ ಕಾಮಗಾರಿ ಜತೆಗೆ ವಿಸ್ತರಣೆಯೂ ಆಗಿದೆ. ಆದರೆ ಬೃಹತ್‌ ವಾಹನಗಳು ತಿರುವು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಯಾವುದೇ ಅನುಮತಿ ಪಡೆಯದೆ ಇದೀಗ ಹೆದ್ದಾರಿಯನ್ನು ಕೂಳೂರು ಮೇಲ್ಸೇತುವೆ ಬಳಿ ತುಂಡರಿಸಿ ಅಪಾಯಕಾರಿ ತಿರುವು ನಿರ್ಮಿಸಲಾಗಿದೆ. ಸಮೀಪವೇ ಶಾಲೆ, ಬಸ್‌ ನಿಲ್ದಾಣವಿರುವುದರಿಂದ ಜನನಿ ಬಿಡ ಪ್ರದೇಶವಾಗಿದೆ. ಇದರಿಂದ ಈ ಪ್ರದೇಶ ಅಪಘಾತವಲಯವಾಗುವ ಸಾಧ್ಯತೆಯಿದೆ.

ಚುನಾವಣೆ ಬಳಿಕ ಕ್ರಮ
ಕೂಳೂರು ಸಮೀಪ ಫ‌ಲ್ಗುಣಿ ನದಿಗೆ ಮಣ್ಣು ತುಂಬಿಸುವ ಬಗ್ಗೆ ಮಾಹಿತಿ ಬಂದಿದೆ. ಚುನಾವಣಾ ಕಾರ್ಯ ಒತ್ತಡವಿರುವುದರಿಂದ ಮುಗಿದ ಬಳಿಕ ಸಿಆರ್‌ ಝಡ್‌ ಟಾಸ್ಕ್ ಸಮಿತಿಗೆ ವರದಿ ನೀಡಲಾಗುವುದು. ಮಹಾನಗರ ಪಾಲಿಕೆಯೂ ಅತಿಕ್ರಮಣ ವಾಗಿದ್ದರೆ ತೆರವುಗೊಳಿಸುವ ಅಧಿಕಾರ ಹೊಂದಿದೆ.
– ಮಹೇಶ್‌,
ಮೀನುಗಾರಿಕಾ ಉಪನಿರ್ದೇಶಕರು

ಟಾಪ್ ನ್ಯೂಸ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

Chikkamagaluru: ಕಾಫಿನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

012

Jayarama Acharya: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Shimoga; ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ; ಮಾಜಿ ಉದ್ಯೋಗಿಯ ಮೇಲೆ ಆರೋಪ

Shimoga; ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ; ಮಾಜಿ ಉದ್ಯೋಗಿಯ ಮೇಲೆ ಆರೋಪ

By Election; ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಒಲವು ಬಿಜೆಪಿ ಕಡೆಗೆ: ಶಾಸಕ ಭರತ್‌ ಶೆಟ್ಟಿ

By Election; ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಒಲವು ಬಿಜೆಪಿ ಕಡೆಗೆ: ಶಾಸಕ ಭರತ್‌ ಶೆಟ್ಟಿ

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

Chikkamagaluru: ಕಾಫಿನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.