ತುರ್ತಾಗಿ ವೈದ್ಯರ ಕಾಣಬೇಕೆ? ‘ವಾಟ್ಸಪ್ ಮೂಲಕ ಔಷಧಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ನೂತನ ಸೇವೆ
ಆನ್ ಲೈನ್ ಮೂಲಕ ರೋಗಿಗಳ ಸೇವೆಗೆ ಮುಂದಾದ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆ
Team Udayavani, Mar 28, 2020, 1:02 PM IST
ಮಂಗಳೂರು: ಕೋವಿಡ್ 19 ಹರಡುವಿಕೆ ನಿಯಂತ್ರಿಸಲು ದೇಶದಲ್ಲಿ ಲಾಕ್ ಡೌನ್ ಘೋಷಣೆಯ ಬಳಿಕ ಜಿಲ್ಲೆಯಲ್ಲಿ ಹಲವು ಆಸ್ಪತ್ರೆಗಳು ತಮ್ಮ ಹೊರ ರೋಗಿಗಳಿಗೆ ನೀಡುವ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಅನೇಕ ರೋಗಿಗಳಿಗೆ ಸಕಾಲಕ್ಕೆ ವೈದ್ಯರ ಸಲಹೆ ಔಷಧಗಳು ಸಿಗದೆ ತೊಂದರೆಗೀಡಾಗಿದ್ದಾರೆ.
ಇದಕ್ಕಾಗಿ ನಗರದ ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆ ವಿನೂತನವಾಗಿ ರೋಗಿಗಳ ಸೇವೆಗೆ ನಿಂತಿದೆ. ಸಾರ್ವಜನಿಕರಿಗೆ ಓಡಾಟಕ್ಕೆ ಅವಕಾಶ ಇಲ್ಲದ ಕಾರಣ ಕೆ.ಎಸ್.ಹೆಗ್ಡೆ ಆಸ್ಪತ್ರೆಯೂ ಆನ್ ಲೈನ್ ನ ಮೂಲಕ ರೋಗಿಗಳ ಸೇವೆಗೆ ಮುಂದಾಗಿದೆ.
ಆಸ್ಪತ್ರೆಯೂ ಎಲ್ಲಾ ವಿಭಾಗದ ವೈದ್ಯರ ವಾಟ್ಸಪ್ ನಂಬರ್ ನೀಡಿದ್ದು, ಆಯಾ ವಿಭಾಗದ ವೈದ್ಯರಿಗೆ ಯಾವುದಾದರೂ ರೋಗಗಳಿಂದ ಬಳಲುತ್ತಿರುವ ರೋಗಿಗಳು ವಾಟ್ಸಾಪ್ ನಲ್ಲಿ ತಮ್ಮ ರೋಗ ಲಕ್ಷಣ ಮಾಹಿತಿನ್ನು ರವಾನಿಸಬೇಕು . ಇದರೊಂದಿಗೆ ಹೆಸರು, ವಯಸ್ಸು, ಲಿಂಗ, ತೂಕ, ಖಾಯಿಲೆಯ ಮಾಹಿತಿ ಹಾಗೂ ಹಳೆಯ ಪ್ರಿಸ್ಕ್ರಿಪ್ಷನ್ ಗಳಿದ್ದರೆ ತಪ್ಪದೆ ನೀಡಬೇಕು. ಇವೆಲ್ಲವೂ ನೋಡಿದ ಬಳಿಕ ಅಗತ್ಯವಿದ್ದರೆ ವೈದ್ಯರೇ ನಿಮಗೆ ಕರೆ ಮಾಡುತ್ತಾರೆ ಇಲ್ಲವಾದರೆ, ಯಾವ ಔಷಧಿಸೂಕ್ತವೆಂದು ಅಥವಾ ವೈದ್ಯರ ಸಲಹೆಯನ್ನು “ವೈದ್ಯರ ನೊಂದಣೆ ಸಂಖ್ಯೆವಿರುವ ಚೀಟಿಯಲ್ಲಿ” ಬರೆದು ರೋಗಿಗಳ ಸಂಖ್ಯೆಗೆ ವೈದ್ಯರು ವಾಟ್ಸಾಪ್ ಮಾಡಲಿದ್ದಾರೆ. ಬಳಿಕ ಔಷಧಿಯನ್ನು ಸಮೀಪದ ಮೆಡಿಕಲ್ ನಲ್ಲಿ ಪಡೆಯಬಹುದಾಗಿದೆ.
ಮಾರಕ ಕೋವಿಡ್ 19 ನಿಂದ ಪಾರಾಗಲು , ಸಾಮಾಜಿಕ ಅಂತರ ಕಾಯ್ದುಗೊಳ್ಳುವುದು ಹಾಗೂ ಮನೆಯಲ್ಲಿರುವುದು ಸದ್ಯದ ಮುನ್ನೆಚ್ಚರಿಕಾ ಕ್ರಮವಾಗಿರುವ ಹಿನ್ನಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆಯೂ ರಾಜ್ಯದಲ್ಲೇ ಮೊದಲ ಬಾರಿಗೆ ಈ ವಿನೂತನ ಸೇವೆಗೆ ಮುಂದಾದಾಗಿರುವುದು ಶ್ಲಾಘನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.