ಬೆರಳ ತುದಿಯಲ್ಲಿ ಬಸ್ ಸಂಚಾರದ ಲೈವ್ ಮಾಹಿತಿ
Team Udayavani, Aug 26, 2018, 12:41 PM IST
ಮಂಗಳೂರು: ಯಾವ ರೈಲು ಎಲ್ಲಿ ಸಂಚರಿಸು ತ್ತಿದೆ? ನಿಲ್ದಾಣಕ್ಕೆ ಎಷ್ಟು ಹೊತ್ತಿಗೆ ಬರುತ್ತಿದೆ ಎಂಬ ಮಾಹಿತಿ ಈಗ ಲೈವ್ ಆಗಿ ಮೊಬೈಲ್‌ನಲ್ಲೇ ಸಿಗುತ್ತದೆ. ಇದೇ ರೀತಿ ಇನ್ನು ಕೆಲವೇ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮಾಹಿತಿಯೂ ಲಭ್ಯವಾಗಲಿದೆ.
ವಿಟಿಎಂಎಸ್ ಅನುಷ್ಠಾನ
ಸರಕಾರಿ ಬಸ್ ಸಂಚಾರದ ಬಗ್ಗೆ ನಿಗಾ ವಹಿಸುವ ಜತೆಗೆ ಬಸ್ ಸಂಚಾರದ ಬಗ್ಗೆ ಮಾಹಿತಿ ನೀಡುವ “ವೆಹಿಕಲ್ ಟ್ರಾಕಿಂಗ್ ಆ್ಯಂಡ್ ಮಾನಿಟರಿಂಗ್ ಸಿಸ್ಟಮ್’ (ವಿಟಿಎಂಎಸ್) ಅನುಷ್ಠಾನಕ್ಕೆ ಕೆಎಸ್‌ಆರ್‌ಟಿಸಿ ಮುಂದಾಗಿದೆ. ಈ ಪ್ರಾಯೋಗಿಕ ಯೋಜನೆಯನ್ನು ಮೊದಲ ಹಂತದಲ್ಲಿ ಮಂಗಳೂರು, ಪುತ್ತೂರು, ರಾಮನಗರ (ಹಾರೋಹಳ್ಳಿ) ಮೈಸೂರು ಗ್ರಾಮಾಂತರ ವಿಭಾಗಗಳ ಒಟ್ಟು 1,900 ಬಸ್‌ಗಳಲ್ಲಿ ಜಾರಿಗೊಳಿಸಲಾಗಿದೆ.
ಏನು ಪ್ರಯೋಜನ?
ವಿಟಿಎಂಎಸ್ ಮೂಲಕ ಬಸ್ ಸಂಚರಿಸು ತ್ತಿರುವ ಪ್ರದೇಶದ ನಿಖರ ಮಾಹಿತಿ ಕೆಎಸ್‌ಆರ್‌ಟಿಸಿ ಬೆಂಗಳೂರಿನ ಕೇಂದ್ರ ಕಚೇರಿಗೆ ಲಭ್ಯವಾಗು ತ್ತಿದೆ. ಈ ಸೇವೆ ಮುಂದೆ ಪ್ರಯಾಣಿಕರಿಗೂ ಸಿಗಲಿದೆ. ಇದರಿಂದ ಬಸ್ ಎಷ್ಟು ಹೊತ್ತಿಗೆ ನಿಲ್ದಾಣಕ್ಕೆ ಬರಲಿದೆ? ಎಷ್ಟು ವೇಗದಲ್ಲಿ ಸಂಚರಿಸುತ್ತಿದೆ ಎಂಬ ಮಾಹಿತಿಗಳು ನಿರ್ದಿಷ್ಟ ಆ್ಯಪ್ ಮೂಲಕ ಪ್ರಯಾಣಿಕರಿಗೆ ಮೊಬೈಲ್‌ನಲ್ಲೇ ನೋಡಲು ಸಾಧ್ಯವಾಗಲಿದೆ. ಜತೆಗೆ ಎಸ್‌ಎಂಎಸ್ ಕೂಡ ಬರಲಿದೆ.
356 ಬಸ್‌ಗಳಲ್ಲಿ ಜಿಪಿಆರ್‌ಎಸ್
ಮಂಗಳೂರು ವಿಭಾಗದ 570 ಬಸ್‌ಗಳ ಪೈಕಿ 356 ಬಸ್‌ಗಳಿಗೆ ಜಿಪಿಆರ್‌ಎಸ್ ತಂತ್ರಜ್ಞಾನ ಅವಡಿಸಲಾಗಿದೆ. ಬಸ್ಸಿನ ವೇಗ, ತಲುಪುವ ಸಮಯ ಮಾಹಿತಿಗಳು ಈಗ ಮಂಗಳೂರು ನಿಯಂತ್ರಣ ಕೊಠಡಿಗೆ ಸದ್ಯ ಬರುತ್ತಿದೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿವೆ. ಮುಂದೆ ಮೊಬೈಲ್‌ಗಳಲ್ಲಿ ಹಾಗೂ ಡಿಸ್‌ಪ್ಲೇ ಬೋರ್ಡ್‌ಗಳಲ್ಲೂ ಮಾಹಿತಿ ದೊರೆಯಲಿದೆ. ವಿಶೇಷವಾಗಿ ಕೆಎಸ್‌ಆರ್‌ಟಿಸಿ ಬಸ್‌ನ ಟಿಕೆಟಿಂಗ್ ಮೆಷಿನ್‌ಗಳಿಗೂ ಸಾಫ್ಟ್ವೇರ್ ಅಳವಡಿಸಿ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ನಿರ್ವಾಹಕರೇ ಬುಕ್ಕಿಂಗ್ ಮಾಡುವ ಸೌಲಭ್ಯ ದೊರೆಯಲಿದೆ.
ರೆಡಿಯಾಗಲಿದೆ ಆ್ಯಪ್
ವಿಟಿಎಂಎಸ್ ಪ್ರಾಯೋಗಿಕ ಜಾರಿಗೆ ಪೂರಕವಾಗಿ ಪ್ರಯಾಣಿಕ ರಿಗೆ ಲಭ್ಯವಾಗಲು ಹೊಸ ಆ್ಯಪ್ ಕೂಡ ಸಿದ್ಧವಾಗಲಿದೆ. ಸದ್ಯ ಮೈಸೂರಿನಲ್ಲಿ “ಮಿತ್ರ’ ಎಂಬ ಆ್ಯಪ್ ಇದ್ದು, ಇದೇ ಮಾದರಿಯಲ್ಲಿ ವಿಭಾಗವಾರು ಆ್ಯಪ್‌ಗ್ಳು ಆರಂಭವಾಗಲಿವೆ. ಆ್ಯಪ್ ಲಭ್ಯವಾದರೆ ಯಾವುದೇ ಬಸ್ ಸಂಚಾರದ ಸಂಪೂರ್ಣ ಮಾಹಿತಿ ಸಿಗಲಿದೆ.
ಪ್ರಯಾಣಿಕರ ಸುರಕ್ಷತೆ, ಬಸ್ ಸಂಚಾರದ ಅವಧಿ, ಸ್ಥಳದ ಬಗ್ಗೆ ಪೂರ್ಣ ಮಾಹಿತಿ ಮೊಬೈಲ್‌ನಲ್ಲಿ ದೊರೆಯು
ವಂತೆ ಮಾಡುವ ವಿಟಿಎಂಎಸ್ ಯೋಜನೆ ಶೀಘ್ರ ಪೂರ್ಣ ಪ್ರಮಾಣ ದಲ್ಲಿ ಜಾರಿಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರಿನಿಂದ ಇದರ ನಿರ್ವಹಣೆ ನಡೆಯಲಿದೆ.
- ದೀಪಕ್ ಕುಮಾರ್,ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಾಧಿಕಾರಿ
*ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.