ಕೆಎಸ್ಸಾರ್ಟಿಸಿ ಎ.ಸಿ. ಬಸ್ ಇಂದಿನಿಂದ ಸಂಚಾರ ಆರಂಭ ; ಮಣಿಪಾಲಕ್ಕೆ ಎಸಿ ಬಸ್ ಸಂಚಾರ ಇಲ್ಲ
Team Udayavani, Jun 25, 2020, 6:49 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಂಗಳೂರು/ಉಡುಪಿ: ರಾಜ್ಯದಲ್ಲಿ ಜೂ.25ರಿಂದ ಕೆಎಸ್ಸಾರ್ಟಿಸಿ ಹವಾನಿಯಂತ್ರಿತ ಬಸ್ ಸಂಚಾರ ಆರಂಭಗೊಳ್ಳಲಿದ್ದು, ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದಲೂ (ಉಡುಪಿ, ಕುಂದಾಪುರ) ಕೆಲವೊಂದು ಸೀಮಿತ ರೂಟ್‌ಗಳಿಗೆ ಎ.ಸಿ. ಬಸ್ ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ.
ದ.ಕ.ದಲ್ಲಿ ಇಂದಿನಿಂದ ಸೇವೆ
ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ಈ ಹಿಂದೆ ಪ್ರತೀ ದಿನ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳಿಗೆ ಸುಮಾರು 50ಕ್ಕೂ ಮಿಕ್ಕಿ ಹವಾ ನಿಯಂತ್ರಿತ ಬಸ್‌ಗಳು ಸಂಚರಿಸುತ್ತಿತ್ತು. ಆದರೆ, ಕೊರೊನಾ ಆತಂಕ ಹಿನ್ನಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಎಲ್ಲ ರೀತಿಯ ಸಾರ್ವಜನಿಕ ಬಸ್ ಸೇವೆ ನಿಲ್ಲಿಸಲಾಗಿತ್ತು. ಆದರೆ, ಇದೀಗ ಜೂ.25ರಿಂದ ಮತ್ತೆ ಬಸ್ ಕಾರ್ಯಾಚರಣೆ ಆರಂಭವಾಗಲಿದೆ.
ಉಡುಪಿ ಜೂ.26ರಿಂದ ಕಾರ್ಯಾರಂಭ
ಉಡುಪಿ ಜಿಲ್ಲೆಗೆ ಸಂಬಂಧಿಸಿದ ಕೆಎಸ್ಸಾರ್ಟಿಸಿ ಎಸಿ ಬಸ್‌ಗಳು ಮಂಗಳೂರು ಹಾಗೂ ಬೆಂಗಳೂರು ಡಿಪೋದಲ್ಲಿ ಇವೆ.
ಜೂ. 26ರಿಂದ ಉಡುಪಿಯಿಂದ ಬೆಂಗಳೂರು, ಮೈಸೂರಿಗೆ ಕೆಎಸ್ಸಾರ್ಟಿಸಿ ಎ.ಸಿ. ಬಸ್ ಸಂಚಾರ ಪ್ರಾರಂಭವಾಗಲಿದೆ.
ಭಟ್ಕಳ-ಮಂಗಳೂರು ನಡುವಿನ ಎ.ಸಿ. ಬಸ್‌ಗಳನ್ನು ಜನರ ಬೇಡಿಕೆಯನುಸಾರ ಓಡಿಸಲಾಗುವುದು ಉಡುಪಿ ಡಿಪೋ ಮ್ಯಾನೇಜರ್ ಉದಯ ಕುಮಾರ್ ತಿಳಿಸಿದರು.
ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಗಳಿಂದ ನಾನ್ ಎ.ಸಿ. ಸ್ಲಿàಪರ್ ಬಸ್ ಸೇವೆ ಈಗಾಗಲೇ ಆರಂಭಗೊಂಡಿತ್ತು. ಮಂಗಳೂರು ವಿಭಾಗಗಳಿಂದ ವಿವಿಧ ಭಾಗಗಳಿಂದ ಈಗಾಗಲೇ ಒಂದೆರಡು ಸ್ಲೀಪರ್ ಬಸ್ ಸೇವೆ ಆರಂಭಗೊಂಡಿದೆ. ಅದೇ ರೀತಿ ಪುತ್ತೂರು, ಧರ್ಮಸ್ಥಳ, ಸುಳ್ಯ ಮತ್ತು ಮಡಿಕೇರಿ ಡಿಪೋದಿಂದಲೂ ಸ್ಲೀಪರ್ ಬಸ್ ಕಾರ್ಯಾಚರಣೆ ನಡೆಸುತ್ತಿದೆ.
ಮಣಿಪಾಲಕ್ಕೆ ಎಸಿ ಬಸ್ ಸಂಚಾರ ಇಲ್ಲ
ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲಕ್ಕೆ ಎಸಿ ಬಸ್ ಸಂಚಾರ ಆರಂಭ ಮಾಡದಿರಲು ನಿರ್ಧರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ 8 ಎಸಿ ಬಸ್‌ಗಳು ಸಂಚರಿಸುತ್ತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.