ಕೆಎಸ್ಸಾರ್ಟಿಸಿ: 6 ವರ್ಷಗಳಿಂದ ಅಪಘಾತ ಇಳಿಕೆ


Team Udayavani, Jun 27, 2019, 5:00 AM IST

1406MLR2-KSRTC

ಸಾಂದರ್ಭಿಕ ಚಿತ್ರ.

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಒಂದೆಡೆ ಸ್ಮಾರ್ಟ್‌ ವ್ಯವಸ್ಥೆಗಳಿಗೆ ಒಗ್ಗಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಅಪಘಾತ ಪ್ರಮಾಣವನ್ನೂ ಇಳಿಸಿಕೊಂಡು ಸುರಕ್ಷಿತವೆನಿಸಿಕೊಳ್ಳುತ್ತಿದೆ. ಅವಘಡ ಪ್ರಮಾಣ ಇಳಿಕೆ ಆರು ವರ್ಷಗಳಿಂದ ಸತತವಾಗಿ ದಾಖಲಾಗಿದೆ.

ಕೆಎಸ್‌ಆರ್‌ಟಿಸಿಯ ಅಂಕಿ – ಅಂಶದ ಪ್ರಕಾರ 2013- 14ನೇ ಸಾಲಿನಲ್ಲಿ 1,266 ಅಪಘಾತವಾಗಿತ್ತು, 2014-15ನೇ ಸಾಲಿನಲ್ಲಿ 1,207, 2015-16ರಲ್ಲಿ 1,100, 2016-17ರಲ್ಲಿ 1,050 ಮತ್ತು 2017-18ನೇ ಸಾಲಿನಲ್ಲಿ 1,043ಕ್ಕೆ ಇಳಿಕೆಯಾಗಿದೆ. ಇದೇ ಇಳಿಕೆ ಮುಂದುವರಿದು 2018-19ನೇ ಸಾಲಿನಲ್ಲಿ 1010 ಅವಘಡಗಳಷ್ಟೇ ಆಗಿವೆ.
ಸ್ಥಳೀಯ ಮಟ್ಟದಲ್ಲಿಯೇ ಅಪಘಾತ ವಲಯ “ಬ್ಲಾಕ್‌ ಸ್ಪಾಟ್‌’ ಗುರುತಿಸುವಿಕೆ ಇದಕ್ಕೆ ಪ್ರಮುಖ ಕಾರಣ. ಯಾವ ರಸ್ತೆಗಳಲ್ಲಿ ಹೆಚ್ಚು ಅವಘಡಗಳು ಸಂಭವಿಸುತ್ತವೆ ಎಂದು ಪ್ರತೀ ನಿಗಮದ ವತಿಯಿಂದ ಈಗಾಗಲೇ ಸರ್ವೇ ಮಾಡಲಾಗಿದೆ. ಅದರನ್ವಯ ಅಪಘಾತ ವಲಯಗಳು, ಶಾಲಾ ವಠಾರಗಳ ಸಮೀಪ ಸೂಚನ ಫಲಕ, ರಸ್ತೆ ಉಬ್ಬು ಅಳವಡಿಕೆ ಮಾಡಲಾಗಿದೆ.

ಕೆಎಸ್ಸಾರ್ಟಿಸಿ ವತಿಯಿಂದ ಪ್ರತೀ ವರ್ಷ ರಸ್ತೆ
ಸುರಕ್ಷತಾ ಸಪ್ತಾಹ ಆಯೋಜಿಸಲಾಗುತ್ತಿದೆ. ಇದರೊಡನೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಬೀದಿ ನಾಟಕ, ಕರಪತ್ರಗಳ ಹಂಚಿಕೆ, ಮಾಹಿತಿ ಕೈಪಿಡಿ, ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ತಿಳಿವಳಿಕೆ, ಕಾಲ್ನಡಿಗೆ ಜಾಥಾ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕದ ಗೌರವವನ್ನು ನಿಗಮವು ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಐದು ವರ್ಷ, ನಗರದಲ್ಲಿ ಮೂರು ವರ್ಷ ಅಪಘಾತ ರಹಿತ ಬಸ್‌ ಚಾಲನೆ ಮಾಡಿದ ಚಾಲಕರಿಗೆ 32 ಗ್ರಾಂ ಬೆಳ್ಳಿ ಪದಕ ಮತ್ತು 150 ರೂ. ಮಾಸಿಕ ಭತ್ಯೆ ನೀಡಲಾಗುತ್ತಿದೆ. ಚಾಲಕ ಬೆಳ್ಳಿ ಪದಕ ಪಡೆದ ಅನಂತರ ಸತತವಾಗಿ 5 ವರ್ಷ ಅರ್ಹತಾ ಪುರಸ್ಕಾರಕ್ಕೆ ಅರ್ಹರಾದ್ದಲ್ಲಿ ಚಿನ್ನದ ಪದಕ ನೀಡಲಾಗುತ್ತಿದೆ. 2016-17ನೇ ಸಾಲಿನಲ್ಲಿ ನಾಲ್ವರು ಚಾಲಕರಿಗೆ ಬೆಳ್ಳಿ ಪದಕ ನೀಡಲಾಗಿತ್ತು. ಈ ಬಾರಿ ಮೂವರಿಗೆ ನೀಡಲಾಗಿದೆ.

ಯಶಸ್ವಿಯಾದ
ಸಿಮ್ಯುಲೇಟರ್‌ ತರಬೇತಿ
ಅಪಘಾತ ರಹಿತ ಬಸ್‌ ಚಾಲನೆಯ ಉದ್ದೇಶದಿಂದ ಕೆಎಸ್ಸಾರ್ಟಿಸಿಯು ತನ್ನ ಚಾಲಕರಿಗೆ ಕೆಲವು ವರ್ಷಗಳಿಂದ ಸಿಮ್ಯುಲೇಟರ್‌ ತರಬೇತಿಯನ್ನು ನೀಡುತ್ತಿದೆ. ಇದು ರಕ್ಷಣಾತ್ಮಕ ಚಾಲನ ಕೌಶಲದ ತರಬೇತಿ. ಈ ತರಬೇತಿಯಿಂದ ಅಪಘಾತ ಪ್ರಮಾಣ ಕಡಿಮೆಯಾಗಿದ್ದು, ಯಶಸ್ವೀ ಉಪಕ್ರಮವನ್ನು ನಿಗಮವು ಮುಂದುವರಿಸಿದೆ.

ಅಪಘಾತ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಕೆಎಸ್ಸಾರ್ಟಿಸಿಯಿಂದ ಬಸ್‌ ಚಾಲಕರಿಗೆ ಅರಿವು ಕಾರ್ಯಾಗಾರವನ್ನು ಕೆಲವು ವರ್ಷಗಳಿಂದ ಹಮ್ಮಿಕೊಳ್ಳಲಾಗುತ್ತಿದೆ. ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಗೌರವಿಸಲಾಗುತ್ತಿದೆ. ಈಗಾಗಲೇ ಅಪಘಾತ ಪ್ರಮಾಣ ಇಳಿಮುಖಗೊಂಡಿದ್ದು, ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಕಡಿಮೆ ಮಾಡುವತ್ತ ಗಮನಹರಿಸಲಾಗುವುದು.
– ಶಿವಯೋಗಿ ಸಿ. ಕಳಸದ್‌
ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

ಅಪಘಾತ ಪ್ರಮಾಣ
ವರ್ಷ ಅಪಘಾತ
2013 -14 1,266
2014 -15 1,207
2015 -16 1,100
2016 -17 1,050
2017 -18 1,043
2018 -19 1,010

ಟಾಪ್ ನ್ಯೂಸ್

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

saavu

ಮಂಜನಾಡಿ ಗ್ಯಾಸ್‌ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

1-kambala

Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ

12

Mangaluru: ಕಾಂಕ್ರೀಟ್‌ ರಸ್ತೆ ನಿರ್ಮಿಸಿದರೂ ಫುಟ್‌ಪಾತ್‌ ಇಲ್ಲ

11

Mangaluru: ಕರಾವಳಿ ಉತ್ಸವ; ಅರಣ್ಯ ಅನುಭವ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.