ದಲಿತೋದ್ಧಾರಕ ಕುದ್ಮುಲ್ ರಂಗರಾವ್
Team Udayavani, Jun 29, 2018, 11:02 AM IST
ಮಹಾನಗರ: ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯ ವಿರುದ್ಧ ಹೋರಾಡಿದ, ಸಮಾನತೆ ಸಾಧಿಸಿ ಹಾಗೂ ಶಿಷ್ಟಾಚಾರಗಳನ್ನು ಮೈಗೂಡಿಸಿಕೊಂಡು ಬದುಕಬೇಕೆಂದು ಪ್ರತಿಪಾದಿಸಿ ಅದನ್ನು ತೋರಿಸಿ ಕೊಡುವ ಮೂಲಕ ದೀನ ದಲಿತರ ಉದ್ಧಾರಕರೆಂದು ಹೆಸರು ಪಡೆದವರು ದಿ| ಕುದ್ಮುಲ್ ರಂಗ ರಾಯರು. ಜೂ. 29ರಂದು ಅವರ 159ನೇ ಜನ್ಮ ದಿನಾಚರಣೆ.
ವೃತ್ತಿಯಲ್ಲಿ ವಕೀಲರಾಗಿದ್ದ ಕುದ್ಮುಲ್ ರಂಗರಾಯರು ಸತ್ಯ, ನ್ಯಾಯಕ್ಕಾಗಿ ದುಡಿದು, ದೀನ ದಲಿತರ ವಕಾಲತ್ತುಗಳನ್ನು ತಾವೇ ವಹಿಸುವ ಮೂಲಕ ‘ಬಡವರ ಬಂಧು’ ಹಾಗೂ ‘ಬಡವರ ವಕೀಲರು’ ಎಂದೇ ಪ್ರಸಿದ್ಧಿ ಪಡೆದಿದ್ದರು. ಆಗಿನ ಬ್ರಿಟಿಷ್ ಕಾಲದ 19ನೇ ಶತಮಾನದ ಮಧ್ಯ ಕಾಲದಲ್ಲಿ ದಲಿತರ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿ ಪ್ರತ್ಯೇಕ ಶಾಲೆ, ಕಾಲನಿ, ಭೂಮಿ, ಬಾವಿ, ವಿತರಣಾ ಕಾರ್ಯಕ್ರಮವನ್ನು ರೂಪಿಸಿದ್ದರು.
ದಲಿತರು ಸ್ವಾವಲಂಬಿಯಾಗಿ ಬದುಕಲು ಕಲಿಯಬೇಕು. ಆತ್ಮ ಗಾಂಭೀರ್ಯ ಬೆಳೆಸಿಕೊಳ್ಳುವುದರ ಜತೆಗೆ ಧಾರ್ಮಿಕ ಆಚರಣೆಯನ್ನು ಮೈಗೂಡಿಸಿಕೊಂಡು, ಏಕಾಗ್ರತೆ, ಸಂಘಟನೆಯ ವೃದ್ಧಿಗೆಂದೇ ಪ್ರತಿಯೊಂದು ಕಾಲನಿಯಲ್ಲಿ ಭಜನ ಮಂದಿರವನ್ನು ಸ್ಥಾಪಿಸಿದ್ದರು. ಬದುಕುವ ಹಕ್ಕು, ವಾಸಿಸುವ ಹಕ್ಕು, ಶಿಕ್ಷಣ ಹಾಗೂ ಉದ್ಯೋಗದ ಹಕ್ಕುಗಳಿಗೆ ದಲಿತರು ಹೇಗೆ ಮೈಗೂಡಿಸಬೇಕು ಎನ್ನುವುದನ್ನು ತನ್ನ ಸಾಮಾಜಿಕ ಕಾರ್ಯಗಳಲ್ಲಿ ಪ್ರತಿಪಾದಿಸುತ್ತಾ ಅದನ್ನು ಕಾರ್ಯರೂಪಕ್ಕೆ ತಂದಿದ್ದರು.
ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ 1959 ಜೂ. 29ರಂದು ಜನಿಸಿದ ಕುದ್ಮಲ್ ರಂಗರಾಯರು ಬಾಲ್ಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಬಹಳ ಕಷ್ಟದಿಂದ ತನ್ನ ಶಿಕ್ಷಣವನ್ನು ಕಾಸರಗೋಡಿನಲ್ಲಿ ಮುಗಿಸಿ ಮುಂದೆ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದಿದ್ದರು.
ಅಸ್ಪೃಶ್ಯರಿಗಾಗಿ ಶಾಲೆ ತೆರೆದರು
19ನೇ ಶತಮಾನದ ಅಂತ್ಯದಲ್ಲಿ ಜಿಲ್ಲೆಯ ದಲಿತರಿಗೆ ಯಾವುದೇ ಶಾಲಾ, ಸಂಸ್ಥೆಗಳಲ್ಲಿ ಮುಕ್ತ ಪ್ರವೇಶವಿರಲಿಲ್ಲ. ಆಗ ರಂಗರಾಯರು ವೆಲೆನ್ಸಿಯ ಸಮೀಪದ ನಂದಿಗುಡ್ಡೆ ಬಳಿ ಅಸ್ಪೃಶ್ಯರಿಗಾಗಿಯೇ ಒಂದು ಶಾಲೆಯನ್ನು ತೆರೆದು ಆ ಶಾಲೆಯಲ್ಲಿ ಮಕ್ಕಳಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದರು.
1982ರಲ್ಲಿ ದಲಿತರ ವಿದ್ಯಾಭ್ಯಾಸಕ್ಕೆ ತನ್ನದೇ ಸ್ವಂತ ಹಣದಿಂದ ನಗರದ ಚಿಲಿಂಬಿಯಲ್ಲಿ ಬಾಡಿಗೆಗೆ ಮನೆಯನ್ನು
ಪಡೆದು ಪ್ರಾಥಮಿಕ ಶಾಲೆಯನ್ನು ಆರಂಭಿಸಿದ್ದರು. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳ ಕಿರುಕುಳದಿಂದಾಗಿ, ಶಾಲೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದಿತ್ತು. ಬಳಿಕ ಕಂಕನಾಡಿ, ಬೋಳೂರು ದಡ್ಡಲ್‌ಕಾಡ್‌ಗಳಲ್ಲಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದ್ದರು.
ದಲಿತರಿಗೆ ಕೈಗಾರಿಕಾ ತರಬೇತಿ
ದಲಿತರು ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ನೆಲೆಯಲ್ಲಿ ಶೇಡಿಗುಡ್ಡೆಯ ಕಟ್ಟಡದಲ್ಲಿ ದಲಿತರಿಗೆ ಕೈಗಾರಿಕಾ ತರಬೇತಿಯನ್ನು ಆರಂಭಿಸಿ ದರು. ಕೊರಗ ಜನಾಂಗದವರಿಗೆ ಭೂಮಿ ಹಾಗೂ ಮನೆಯನ್ನು ನಿರ್ಮಿಸಿ ಆಶ್ರಯವನ್ನು ಕಲ್ಪಿಸಿದ್ದರು. ಜತೆಗೆ ಗುಡಿ ಕೈಗಾರಿಕೆಗೂ ಸಹಾಯ ಮಾಡಿ ಈ ಜನಾಂಗಕ್ಕೆ ಉಡುಪಿ-ಪುತ್ತೂರಿನಲ್ಲಿ ದರ್ಖಾಸು ಭೂಮಿ ಕೊಡಿಸಿದ್ದರು.
ಹೆಮ್ಮಕ್ಕಳಿಗೆ ವಿದ್ಯಾರ್ಥಿನಿಲಯ
ದೂರದ ಊರಿನಿಂದ ಬರುವ ಹೆಮ್ಮಕ್ಕಳಿಗೆ ವಿದ್ಯಾರ್ಥಿನಿಲಯವನ್ನು ಶೇಡಿಗುಡ್ಡೆಯಲ್ಲಿ ಸ್ಥಾಪಿಸಿ ಅವರ ವಿದ್ಯಾಭ್ಯಾಸಕ್ಕೆ, ಸ್ಫೂರ್ತಿ ಹಾಗೂ ಬೆಳವಣಿಗೆಗೆ ಅವಕಾಶ ಕಲ್ಪಿಸಿದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶಿಕ್ಷಕ ತರಬೇತಿ ಕೊಟ್ಟು, ಅವರು ಸ್ಥಾಪಿಸಿದ ಅತ್ತಾವರ ಬಾಬುಗುಡ್ಡೆ ಶಾಲೆ, ದಡ್ಡಲ್‌ಕಾಡ್, ಉಳ್ಳಾಲ, ತಲಪಾಡಿ, ತೋಕೂರು, ಬೋಳೂರು, ಮೂಲ್ಕಿ, ಉಡುಪಿ, ಬನ್ನಂಜೆ, ನೇಜಾರು ಮುಂತಾದ ಶಾಲೆಗಳಿಗೆ ಪರಿಶಿಷ್ಟ ಜಾತಿಯ ಅಧ್ಯಾಪಕರನ್ನು ನೇಮಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ದಾರಿ ದೀಪವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.