ಕುದ್ರೋಳಿ ದೇಗುಲ: ಬ್ರಹ್ಮ ಕಲಶೋತ್ಸವ
Team Udayavani, Feb 18, 2019, 4:29 AM IST
ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ರವಿವಾರ ಭಕ್ತಿ-
ಸಂಭ್ರಮದಿಂದ ಸಂಪನ್ನಗೊಂಡಿತು. ಸಾವಿರಾರು ಭಕ್ತ ಸಂದೋಹದ ಸಮ್ಮುಖದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ನೆರವೇರಿತು. 900 ತಾಮ್ರದ ಕಳಶ, 108 ಬೆಳ್ಳಿಯ ಕಲಶ, 1 ಬೆಳ್ಳಿಯ ಪ್ರಧಾನ ಕಲಶದಲ್ಲಿ ಶ್ರೀದೇವರಿಗೆ ಅಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ 12.15ಕ್ಕೆ ಬ್ರಹ್ಮಕಲಶಾಭಿಷೇಕ ಆರಂಭವಾಯಿತು.
ಮಹಾಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ದೇವರ ಅನ್ನಪ್ರಸಾದ ಸ್ವೀಕರಿಸಿದರು. ಬ್ರಹ್ಮಕಲಶೋತ್ಸವದ ಅಪೂರ್ವ ಕ್ಷಣವನ್ನು ವೀಕ್ಷಿಸಲು ನೆರವಾಗಲು ದೇವಾಲಯದ ಹೊರಭಾಗದಲ್ಲಿ ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಸಾವಿರಾರು ಭಕ್ತರು ಬ್ರಹ್ಮಕಲ ಶಾಭಿಷೇಕದ ದೃಶ್ಯವನ್ನು ಇದರ ಮೂಲಕ ವೀಕ್ಷಿಸಿದರು.
67 ಮೆಟಿಲಿನ ಅಟ್ಟಣಿಗೆ ಏರಿದ ಪೂಜಾರಿ
ಗೋಕರ್ಣನಾಥ ದೇವರಿಗೆ ಅಭಿಷೇಕ ಆರಂಭದ ಸಮಯದಿಂದ 1.45ರ ಪ್ರಧಾನ ಕಲಶಾಭಿಷೇಕ ಪೂರ್ಣಗೊಳ್ಳುವ ತನಕದ 1.30ರ ತಾಸು ಜನಾರ್ದನ ಪೂಜಾರಿ ಅವರು ನಿಂತುಕೊಂಡೇ ಕಲಶಾಭಿಷೇಕದ ಅಪೂರ್ವ ಕ್ಷಣವನ್ನು ವೀಕ್ಷಿಸಿದರು. ಜತೆಗೆ ನೂತನ ಧ್ವಜಸ್ತಂಭ ವಾಹನ ಪ್ರತಿಷ್ಠೆಗೆ ಜನಾರ್ದನ ಪೂಜಾರಿ ಅವರು 67 ಮೆಟ್ಟಿಲಿನ ಅಟ್ಟಣಿಗೆಯನ್ನು ಏರಿ ಗಮನಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.