ಸ್ವಚ್ಛತೆ ಜಾಗೃತಿಗೆ ಶಾಲೆಗಳಿಗೆ ಬರುತ್ತಿದ್ದಾರೆ ಕುದ್ರೋಳಿ ಗಣೇಶ್‌!


Team Udayavani, Jun 14, 2018, 10:59 AM IST

14-june-3.jpg

ಮಹಾನಗರ : ಇಂದು ಎಲ್ಲಿ ನೋಡಿದರಲ್ಲಿ ಕಸ. ಸುತ್ತಮುತ್ತ ಸ್ವಚ್ಛತೆ ಮರೆಯಾಗಿದೆ. ಅದರಲ್ಲೂ ಯುವಕರು ಸ್ವಚ್ಛತೆಯನ್ನು ಕಡೆಗಣಿಸುತ್ತಿದ್ದಾರೆ. ಮಕ್ಕಳಲ್ಲಿ ಎಳೆಯದರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ವಿಸ್ಮಯ ಜಾದೂ ತಂಡದ ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್‌ ಅವರು ಜಿಲ್ಲೆಯ ನೂರು ಶಾಲೆಗಳಲ್ಲಿ ‘ಸ್ವಚ್ಛತೆಗಾಗಿ ಜಾದೂ’ ಎಂಬ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.

ಮುಂದಿನ ಪೀಳಿಗೆಗೆ ಸ್ವಚ್ಛತೆ ಬಗ್ಗೆ ತಿಳಿಸುವ ಸಂದೇಶವನ್ನು ಜಾದೂ ಪ್ರದರ್ಶನದ ಹೊಂದಿದೆ. ಭಾಷಣದ ಮೂಲಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದಕ್ಕಿಂತ ಜಾದೂ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಲು ಕುದ್ರೋಳಿ ಗಣೇಶ್‌ ತಯಾರಾಗಿದ್ದಾರೆ.

ಅಂದಹಾಗೆ, ಕುದ್ರೋಳಿ ಗಣೇಶ್‌ ಅವರ ತಂಡ ಕಳೆದ ವರ್ಷ ಜಾಥಾ ಮತ್ತು ಬೀದಿ ನಾಟಕಗಳನ್ನು ಏರ್ಪಡಿಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದರು. ಜತೆಗೆ ವಿವಿಧ ಶಾಲೆಗಳಿಗೆ ತೆರಳಿ ಶಿಕ್ಷಣಕ್ಕಾಗಿ ಜಾದೂ ಪ್ರದರ್ಶನ ಏರ್ಪಡಿಸಿದ್ದರು. ಸ್ವಚ್ಛತೆ ಬಗ್ಗೆ ಮುಂದಿನ ಪೀಳಿಗೆಗೆ ಆಳವಾದ ಜಾಗೃತಿ ಮೂಡಬೇಕು ಎಂಬ ಉದ್ದೇಶದಿಂದ ಇದೀಗ ಪುಟಾಣಿ ಮಕ್ಕಳಿಗೆ ಜಾದೂ ಪ್ರದರ್ಶನ ನೀಡಲು ಮುಂದಾಗಿದ್ದಾರೆ.

20 ನಿಮಿಷಗಳ ಕಾಲ ಪ್ರದರ್ಶನ
ಜಾದೂ ಪ್ರದರ್ಶನ ಆರಂಭದಲ್ಲಿ ವಿದ್ಯಾರ್ಥಿಗಳನ್ನು ಖುಷಿಪಡಿಸುವ ಉದ್ದೇಶದಿಂದ 20 ನಿಮಿಷಗಳ ಕಾಲ ರಂಜನೀಯ ಜಾದೂ ನಡೆಯಲಿದೆ. ಇದಾದ ಬಳಿಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಜಾದೂಪ್ರದರ್ಶನ ಪ್ರಾರಂಭವಾಗಲಿದೆ. ಕುದ್ರೋಳಿ ಗಣೇಶ್‌ ಅವರ ಜತೆ ರಾಮಕೃಷ್ಣ ಮಿಷನ್‌ ಸ್ವಚ್ಛ ಮಂಗಳೂರು ಸಹಯೋಗದಲ್ಲಿ, ಎಂಆರ್‌ ಪಿಲ್‌ ಪ್ರಾಯೋಜಕತ್ವ ಇರಲಿದೆ.

ಹೇಗಿರಲಿದೆ ಮ್ಯಾಜಿಕ್‌
ಮೊದಲನೆಯ ಪ್ರದರ್ಶನವಾಗಿ ‘ನಮಗೆ ಇರುವುದು ಒಂದೇ ಭೂಮಿ. ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂಬ ವಿಷಯಕ್ಕೆ ಸಂಬಂಧಿಸಿದ ಜಾದೂ ನಡೆಯಲಿದೆ. ಜಾದೂ ಪ್ರಾರಂಭದಲ್ಲಿ ಭೂಮಿಯನ್ನು ಸಂಕೇತಿಸುವ ಮಾಯಾ ಪೆಟ್ಟಿಗೆ ಇರಲಿದ್ದು, ನೀರು, ಗಾಳಿ ಆಶ್ರಯ ಸಾಂಕೇತಿಕವಾಗಿ ಬರುತ್ತದೆ. ನಾವು ಭೂಮಿಗೆ ಹಾಕುತ್ತಿರುವ ಕಸ, ತ್ಯಾಜ್ಯ, ಪ್ಲಾಸ್ಟಿಕ್‌ಗಳನ್ನು ಪೊರಕೆ ಸಹಾಯದಿಂದ ಸ್ವಚ್ಛತೆ ಮಾಡಿದಾಗ ಅಲ್ಲಿ ಪ್ಲಾಸ್ಟಿಕ್‌ ಮಾಯವಾಗುತ್ತದೆ. ಅದೇ ಸಮಯದಲ್ಲಿ ಜಾದೂ ಪೆಟ್ಟಿಗೆ ಯಿಂದ ಭೂಮಿಯ ಗೋಳ ಹೊರ ಬರುತ್ತದೆ. ಇರುವುದೊಂದೇ ಭೂಮಿ ಇದರ ಸ್ವಚ್ಛತೆ ನಮ್ಮೆಲ್ಲರ ಹೊಣೆ ಎಂಬ ವಿಷಯವನ್ನು ಜಾದೂ ಜತೆ ಹಾಡಿನ ಮೂಲಕ ತಿಳಿಸಲಾಗುತ್ತದೆ. 

ಕಸ ಎಸೆದರೆ ಪರಿಸರ ಮಾಲಿನ್ಯವಾಗುತ್ತದೆ. ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು ಎಂಬ ವಿಷಯಕ್ಕೆ ಸಂಬಂಧಿಸಿದ ಜಾದು ಕೂಡ ಪ್ರದರ್ಶನ ವಾಗಲಿದೆ. ಅಲ್ಲದೆ, ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು, ‘ದೇಹದ ಸ್ವತ್ಛತೆ, ದೇಶದ ಸ್ವಚ್ಛತೆ’ ಎಂಬ ಪರಿಕಲ್ಪನೆಯ ಜಾದೂ ಪ್ರದರ್ಶನ ನಡೆಯಲಿದೆ. ಇದರ
ಜತೆ ಕಸಕ್ಕೂ ಮೌಲ್ಯವಿದೆ ಜತೆಗೆ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಸಂದೇಶ ಜಾದೂ ಮೂಲಕ ಕುದ್ರೋಳಿ ಗಣೇಶ್‌ ಅವರ ತಂಡ ವಿದ್ಯಾರ್ಥಿಗಳಿಗೆ ಪ್ರಸ್ತುಪಡಿಸಲಾಗುತ್ತದೆ.

ಎಷ್ಟು ಶಾಲೆಗಳಲ್ಲಿ ನಡೆಯಲಿದೆ
ಸ್ವಚ್ಛತೆಗಾಗಿ ಜಾದೂ ಪ್ರದರ್ಶನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 50 ದಿನಗಳ ಕಾಲ ನಡೆಯಲಿದೆ. ಜಿಲ್ಲೆಯ 100 ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಕುದ್ರೋಳಿ ಗಣೇಶ್‌ ಅವರ ತಂಡ ತೆರಳಿ ಒಟ್ಟಾರೆ 100 ಪ್ರದರ್ಶನ ನಡೆಸಲಿದ್ದಾರೆ. ಪ್ರತೀ ಶಾಲೆಯಲ್ಲಿ ಒಂದೂವರೆ ಗಂಟೆಗಳ ಕಾಲ ಪ್ರದರ್ಶನ ನಡೆಯಲಿದೆ.

ಮಕ್ಕಳು ಆಕರ್ಷಣೆ
ಜಾದೂ ಪ್ರದರ್ಶನಕ್ಕೆ ಮಕ್ಕಳು ತತ್‌ಕ್ಷಣ ಆಕರ್ಷಿತರಾಗುತ್ತಾರೆ. ಜಾದೂ ಎಂಬುವುದು ವೈಜ್ಞಾನಿಕ ಕಲೆ. ಇದರ ಮುಖಾಂತರ ಮಾಹಿತಿಗಳು ಮಕ್ಕಳ ಮನಸ್ಸಿಗೆ ನಾಟಬಹುದು. ಈ ಕಾರ್ಯಕ್ರಮದಲ್ಲಿ ಹಾಡಿನ ಜೊತೆ ಜಾದು ಪ್ರದರ್ಶನ ಸಾಗುತ್ತದೆ.
 – ಕುದ್ರೋಳಿ ಗಣೇಶ್‌,
   ಜಾದೂಗಾರ

ಬದಲಾವಣೆ ಮಕ್ಕಳಿಂದ ಸಾಧ್ಯ
ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಮಕ್ಕಳಿಂದಲೇ ಸಾಧ್ಯ. ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಪರಿಕಲ್ಪನೆ ಮೂಡಿಸುವ ಉದ್ದೇಶ ನಮ್ಮದು. ಆಗ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಸ್ವಚ್ಛತೆಗಾಗಿ ಜಾದೂ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಕ್ಕಳಿಗೆ ಮನೋರಂಜನೆ ಇಷ್ಟ. ಇದರ ಜತೆ ಜಾದೂ ಮೂಲಕ ತಿಳಿಸಿದರೆ ಅದರ ಪ್ರಭಾವ ಹೆಚ್ಚು.
-ಸ್ವಾಮಿ ಏಕಗಮ್ಯಾನಂದ, ರಾಮಕೃಷ್ಣ ಮಿಷನ್‌
ಸ್ವಚ್ಛತಾ ಅಭಿಯಾನ ಸಂಚಾಲಕ

ಟಾಪ್ ನ್ಯೂಸ್

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.