ಕುಕ್ಕೆ ಆಂಜನೇಯ ದೇಗುಲದಲ್ಲಿ ಕಳವಿಗೆ ಯತ್ನ: ದೂರು ದಾಖಲು
Team Udayavani, Jun 2, 2019, 11:27 AM IST
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಟ್ಟಿರುವ ಸವಾರಿ ಮಂಟಪ ಹಿಂಬದಿಯ ಶ್ರೀ ಅಭಯ ಆಂಜನೇಯ ದೇವಸ್ಥಾನದಿಂದ ಶುಕ್ರವಾರ ತಡರಾತ್ರಿ ಕಳವಿಗೆ ಯತ್ನಿಸಲಾಗಿದೆ.
ಶನಿವಾರ ಬೆಳಗ್ಗೆ ದೇಗುಲದ ಸಿಬಂದಿ ಹಾಗೂ ಅರ್ಚಕರಿಗೆ ಕಳ್ಳರು ನುಗ್ಗಿರುವುದು ಗೊತ್ತಾಗಿದೆ. ದೇವಸ್ಥಾನದ ಸುತ್ತ ಮೇಲ್ಛಾವಣಿ ನಿರ್ಮಿಸಿ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿದೆ. ಕಳ್ಳರು ಅದರ ಮೇಲಿನಿಂದ ಹೊರಾಂಗಣ ಪ್ರವೇಶಿಸಿ ಗರ್ಭಗುಡಿಯ ಬೀಗ ಒಡೆದು ಒಳ ನುಗ್ಗಿದ್ದಾರೆ.
ಗರ್ಭಗುಡಿಯ ಒಳಗಿದ್ದ ಕಾಣಿಕೆ ಹುಂಡಿಯ ಬೀಗ ಒಡೆದಿದ್ದರೂ ಅದ ರಲ್ಲಿದ್ದ ಹಣವನ್ನು ಕೊಂಡೊಯ್ಯದಿರು ವುದು ಆಶ್ಚರ್ಯ ಮೂಡಿಸಿದೆ. ಆಂಜನೇಯ ಮೂರ್ತಿಗೂ ಹಾನಿ ಮಾಡಿಲ್ಲ.
ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಸೇವಾ ಕೌಂಟರಿನ ಮೇಲಿನ ಶೀಟನ್ನು ಜಾರಿಸಿ ಒಳ ಗಿಳಿದು ಕೌಂಟರ್‌ನಲ್ಲಿದ್ದ ಚಿಲ್ಲರೆ ಹಣ ಎಗರಿಸಿದ್ದು ಬಿಟ್ಟರೆ ಹೆಚ್ಚಿನ ಕಳವು ಮಾಡಿಲ್ಲ. ಘಟನೆ ಸಂಬಂಧ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ. ಎಚ್. ಅವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಶ್ರಮಿ ಸುತ್ತಿದ್ದಾರೆ.
ಸಿ.ಸಿ. ಕೆಮರಾ ಇಲ್ಲ
ನಗರದ ಪ್ರಮುಖ ಭಾಗದಲ್ಲಿಯೇ ಆಂಜನೇಯ ಗುಡಿಯಿದ್ದು, ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು ಇಲ್ಲಿಗೂ ಬರುತ್ತಾರೆ. ಇಲ್ಲಿ ಸಿ.ಸಿ. ಕೆಮರಾಗಳಿಲ್ಲ ಹಾಗೂ ರಾತ್ರಿ ಭದ್ರತಾ ಸಿಬಂದಿಯೂ ಇಲ್ಲ. ಈ ಮಾಹಿತಿ ಇರುವವರೇ ಕಳವು ನಡೆಸಿರುವ ಶಂಕೆಯಿದೆ.
ಶುದ್ಧೀಕರಣ
ಕಿಡಿಗೇಡಿಗಳು ಗರ್ಭಗುಡಿ ಪ್ರವೇಶಿಸಿ ಅಶುದ್ಧವಾಗಿರುವ ಕಾರಣ ಶನಿವಾರದ ಪೂಜಾ ವಿಧಾನಗಳನ್ನು ತಾತ್ಕಾಲಿಕವಾಗಿ ಸ್ತಗಿತಗೊಳಿಸಲಾಗಿತ್ತು. ಶುದ್ಧಗೊಳಿಸಿದ ಬಳಿಕ ನಿತ್ಯ ಪೂಜೆಗಳನ್ನು ನಡೆಸಲು ಅರ್ಚಕರ ಸಲಹೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.