ಕುಕ್ಕೆಯಲ್ಲಿ ಸ್ವದೇಶಿ ದರ್ಶನ್ ಜಾರಿಗೆ ಯತ್ನ : ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
Team Udayavani, Dec 28, 2022, 6:35 AM IST
ಸುಬ್ರಹ್ಮಣ್ಯ: ದೇಶದ ಪ್ರಸಿದ್ಧ ಶ್ರದ್ಧಾಕೇಂದ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೇಂದ್ರ ಸರಕಾರದ ಸ್ವದೇಶಿ ದರ್ಶನ್ ಯೋಜನೆಯನ್ನು ಜಾರಿಗೆ ತರಲು ಉತ್ಸುಕಳಾಗಿದ್ದೇನೆ. ದೇವಸ್ಥಾನದಿಂದ ಈ ಬಗ್ಗೆ ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಕಳಿಹಿಸಿದರೆ ಜಾರಿ ಖಚಿತ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಸ್ಮತಿ ಇರಾನಿ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ ಸ್ಮತಿ ಅವರು ಕಿರುಷಷ್ಠಿ ಮಹೋತ್ಸವದ ಕಾರ್ತಿಕ ವೇದಿಕೆಯಲ್ಲಿ “ಆಧುನಿಕ ಭಾರತ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ’ ವಿಷಯವಾಗಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಪ್ರಾಂಜಲಿ ಅವರ ಪ್ರಶ್ನೆಗೆ ಈ ಉತ್ತರ ನೀಡಿದರು.
ಒಬ್ಬ ನಟಿ ಮತ್ತು ರಾಜಕಾರಣಿಯಾಗಿ ತಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸಿದ್ದೀರಿ? ಎಂಬ ಪ್ರಶ್ನೆಗೆ, ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತೆ. ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಇವು ಜೀವನ ಮೌಲ್ಯ, ದೇಶ ಸೇವೆಗೆ ಪ್ರೇರಣೆ ನೀಡಿವೆ. ರಾಜಕಾರಣಿಯಾಗಿ ದೇಶದ ಜನತೆಯ ಸೇವೆ ಮಾಡುತ್ತಿದ್ದೇನೆ. ಆರಂಭದಲ್ಲಿ ಪತ್ರಕರ್ತೆಯಾಗಿದ್ದೆ. ಆರಂಭಿಕ ವೇತನ ಕೇವಲ 200 ರೂ. ಇತ್ತು. 2001-2002ರಲ್ಲಿ ನನ್ನ 24ರ ಹರೆಯದಲ್ಲಿ ಡಬ್ಲೂಎಚ್‌ಒನ ಒಆರ್‌ಎಸ್ ಕಾರ್ಯಕ್ರಮದ ಭಾರತದ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೆ. 2003ರಲ್ಲಿ ಬಿಜೆಪಿಗೆ ಬಂದೆ ಎಂದರು.
ರಾ. ಶಿಕ್ಷಣ ನೀತಿ ಜಾರಿ: ಕರ್ನಾಟಕ ಪ್ರಥಮ ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದ್ದೇವೆ. ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಲು ಇದು ಸಹಕಾರಿ. ಮೆಡಿಕಲ್ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನೂ ಮಾತೃ ಭಾಷೆಯಲ್ಲಿ ಕಲಿಯಬಹುದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಪ್ರಥಮ ರಾಜ್ಯ ಕರ್ನಾಟಕ ಎಂದರು.
ಮಹಿಳಾ ಸಶಕ್ತೀಕರಣ
ಮುಂದಿನ ವರ್ಷ ಭಾರತದಲ್ಲಿ ಜಿ20 ಸಮ್ಮೇಳನ ನಡೆಯಲಿದೆ. ಇದರಲ್ಲಿ ಮಹಿಳಾ ಸಶಕ್ತೀಕರಣ ಮತ್ತು ಸ್ವಾತಂತ್ರ್ಯದ ಬಗ್ಗೆ ಭಾರತ ತೆಗೆದುಕೊಳ್ಳುವ ನಿಲುವು ಏನು? ಎಂಬುದಕ್ಕೆ ಮಹಿಳಾ ಸಶಕ್ತೀಕರಣ ಮತ್ತು ಸ್ವಾತಂತ್ರ್ಯಕ್ಕೆ ಎಲ್ಲ ರಾಷ್ಟ್ರಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಭಾರತದ ನಿಲುವನ್ನು ಪ್ರಸ್ತಾವಿಸಲಿದೆ. ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿದಾಗ ಬದುಕಿನ ಒತ್ತಡ ಕಡಿಮೆ ಮಾಡಬಹುದು. ಜನಔಷಧ ಕೇಂದ್ರಗಳಲ್ಲಿ ಕೇವಲ ಒಂದು ರೂ.ಗೆ ನ್ಯಾಪಿRನ್‌ಗಳನ್ನು ಕೊಡಲಾಗುತ್ತಿದ್ದು ಹೆಣ್ಣು ಮಕ್ಕಳು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದ ಅವರು, ಅಗ್ನಿಪಥ್ ಯೋಜನೆ ಯುವ ಜನಾಂಗಕ್ಕೆ ದೇಶ ಸೇವೆಗೆ ಪ್ರೇರಣೆ ನೀಡುತ್ತದೆ ಎಂದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ಕಾ.ನಿ. ಅಧಿಕಾರಿ ಡಾ| ನಿಂಗಯ್ಯ, ಕೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ.ಟಿ., ಎಸ್‌ಎಸ್‌ಪಿಯು ಪ್ರಾಂಶುಪಾಲ ಸೋಮಶೇಖರ್ ನಾಯಕ್ ವೇದಿಕೆಯಲ್ಲಿದ್ದರು. ಪ್ರಾಧ್ಯಾಪಕ ಡಾ| ಗೋವಿಂದ ಎನ್.ಎಸ್. ಸ್ವಾಗತಿಸಿ, ವಿದ್ಯಾರ್ಥಿನಿ ಆಶಿತಾ ವಂದಿಸಿದರು. ಶ್ರುತಿ ನಿರ್ವಹಿಸಿದರು.
ಸಮಸ್ಯೆಯಾದರೆ ತತ್‌ಕ್ಷಣ ಕರೆ ಮಾಡಿ
ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ತಮ್ಮನ್ನು ಸಂಪರ್ಕಿಸುವ ಅವಕಾಶ ಇದೆಯೇ? ಎಂಬ ಕನ್ನಿಕಾ ಅವರ ಪ್ರಶ್ನೆಗೆ, “ನನ್ನ ಮೈಲ್ ಐಡಿ ಮತ್ತು ದೂರವಾಣಿ ಸಂಖ್ಯೆ ನನ್ನ ವೆಬ್ ಸೈಟ್‌ನಲ್ಲಿದೆ. ಅದಕ್ಕೆ ಕರೆ ಮಾಡಿದರೆ ತತ್‌ಕ್ಷಣ ಸ್ಪಂದಿಸುತ್ತೇನೆ. ಉಚಿತ ಸಹಾಯವಾಣಿ 1098ಕ್ಕೂ ಕರೆ ಮಾಡಬಹುದು. ಪ್ರತೀ ದಿನ ಸುಮಾರು 70 ಲಕ್ಷ ಕರೆಗಳು ಇದಕ್ಕೆ ಬರುತ್ತವೆ. ಎಲ್ಲದಕ್ಕೂ ಸಮರ್ಪಕವಾಗಿ ಸ್ಪಂದಿಸಲಾಗುತ್ತದೆ’ ಎಂದರು.
ಒತ್ತಡ ಶಮನಕ್ಕೆ ಯೋಗ ಮಾಡಿ
ಮನಸ್ಸಿನ ಒತ್ತಡ ಹಾಗೂ ಕೋಪವನ್ನು ಯಾವ ರೀತಿ ಕಮ್ಮಿ ಮಾಡುವುದು ಎಂಬ ಪ್ರಶ್ನೆಗೆ ಬೆಳಗ್ಗೆ ಎದ್ದು ಯೋಗ ಮಾಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.