ಕುಕ್ಕೆ ದೇಗುಲ: ಸೋರುವ ಗುಡಿಗೆ ಕೊನೆಗೂ ಕಾಯಕಲ್ಪ
Team Udayavani, May 31, 2019, 6:10 AM IST
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಹೊರಾಂಗಣ ಸುತ್ತುಪೌಳಿಯನ್ನು 14 ಕೋ. ರೂ. ವೆಚ್ಚದಲ್ಲಿ ನವೀಕರಣಗೊಳಿಸಲು ಬುಧವಾರ ರಾಜ್ಯ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದ ಮಳೆಗಾಲದಲ್ಲಿ ಸೋರುವ ಕುಕ್ಕೆ ದೇಗುಲದ ಗುಡಿಗೆಕೊನೆಗೂ ಕಾಯಕಲ್ಪ ಸಿಗಲಿದೆ.
ಕೆಲಸಕ್ಕೆ ತಗಲುವ ಅಂದಾಜು ಮೊತ್ತಮಂಗಳೂರು ವಿಭಾಗದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ದೇಗುಲದಿಂದ ಠೇವಣಿ ಇರಿಸಿ ಅನಂತರ ತಾಂತ್ರಿಕಮಂಜೂರಾತಿ ಪಡೆದು ಅನುಷ್ಠಾನ ಗೊಳಿಸಲಾಗುತ್ತದೆ.
ದೇವಸ್ಥಾನದ ಸ್ವಂತ ನಿಧಿಯಲ್ಲಿ ಸಾಕಷ್ಟು ಹಣವಿದೆ. ಅದನ್ನು ಬಳಸಿ ಸುತ್ತುಪೌಳಿಯನ್ನು ನವೀಕರಿಸಲಾಗು ತ್ತದೆ. ಕ್ಷೇತ್ರದ ಸಂಪ್ರದಾಯಕ್ಕೆ ತೊಂದರೆ ಆಗದಂತೆ ಪ್ರಧಾನಅರ್ಚಕರು, ವಾಸ್ತುಶಿಲ್ಪಿಗಳು, ಆಗಮಪಂಡಿತರ ಸಲಹೆ ಪಡೆದು ಮುಂದು ವರಿಯಲು ಆಡಳಿತವು ನಿರ್ಧರಿಸಿದೆ.
ದಶಕದಿಂದ ಸೋರಿಕೆ
ದೇಗುಲದ ಗುಡಿಯ ಹೊರಾಂಗಣ ಮೇಲ್ಛಾವಣಿ ಸೋರುತ್ತಿತ್ತು. ಇದಕ್ಕೆ ಟಾರ್ಪಲ್ ಹೊದೆಸಿದ ಬಗ್ಗೆ ‘ಉದಯವಾಣಿ’ 2015ರ ಅ. 3ರಂದೇ ವರದಿ ಪ್ರಕಟಿಸಿತ್ತು. ಟಾರ್ಪಲ್ ಹಾಕಿದ ವಿಚಾರ ಭಕ್ತರಿಗೆ ಅಸಮಾಧಾನ ಮೂಡಿಸಿತ್ತು.
ಸೋರಿಕೆ ಸಮಸ್ಯೆ ಇರುವುದು ಗರ್ಭಗುಡಿ ಪ್ರವೇಶಿಸುವ ದ್ವಾರ ಮತ್ತು ಉಮಾಮಹೇಶ್ವರ ಗುಡಿಯ ಮೇಲ್ಛಾವಣಿಯಲ್ಲಿ. ಇಲ್ಲಿಂದ ಸೋರಿದ ನೀರು ಒಳಗೆ ಹರಿಯುತ್ತದೆ. ಹತ್ತು ವರ್ಷಗಳಿಂದ ಹೀಗೆಯೇ ಇದೆ. ದೇಗುಲದ ಇತರ ಗುಡಿಗಳ ಮೇಲೆ ಅಳವಡಿಸಿದ ತಗಡಿನ ಅಡಿಯ ದಾರು ಭಾಗಗಳೂ ಶಿಥಿಲಗೊಂಡಿವೆ. ಕೋಟಿಗಟ್ಟಲೆ ರೂ. ಆದಾಯವುಳ್ಳ ಕ್ಷೇತ್ರದ ಈ ಸ್ಥಿತಿ ಸರಕಾರ ಮತ್ತು ಆಡಳಿತಕ್ಕೆ ಇದು ಮುಜುಗರ ಉಂಟು ಮಾಡಿತ್ತು.
ಬಳಿಕ ಅಂದು ದೇವಸ್ಥಾನದ ಆಡಳಿತಾಧಿಕಾರಿ ಯಾಗಿದ್ದ ಪುತ್ತೂರು ಸಹಾಯಕ ಆಯುಕ್ತರು ದೇಗುಲದಲ್ಲಿ ಸಭೆ ನಡೆಸಿದ್ದರು. ಕೊನೆಗೆ 8 ಕೋ.ರೂ. ವೆಚ್ಚದಲ್ಲಿ ಸುತ್ತುಗೋಪುರ ನವೀಕರಣ ಕಾಮಗಾರಿಯನ್ನು ಲೊಕೋಪಯೋಗಿ ಇಲಾಖೆ, ವಿಶೇಷ ಉಪವಿಭಾಗ ವತಿಯಿಂದ ಠೇವಣಿ ಕೊಡುಗೆ ಯೋಜನೆ ಆಧಾರದಲ್ಲಿ ನಿರ್ವಹಿಸಲು ಅನುಮೋದನೆ ದೊರಕಿತ್ತು.
ಎಕ್ಸ್‌ಪ್ರೆಸ್ ಆಫ್ ಇಂಟರೆಸ್ಟ್ ಮೂಲಕ ಶಿಲ್ಪಿಗಳಿಂದ ಕೊಟೇಶನ್ ಪಡೆದು ಅನುಮೋದನೆ ನೀಡಲಾಗಿತ್ತು. ಶಿಲ್ಪಿಗಳ ಕೂಲಿ ದರ ಮತ್ತು ಸಾಮಗ್ರಿಗಳ ದರದಲ್ಲಿ ವ್ಯತ್ಯಾಸವಿದ್ದರಿಂದ ಕಾರಣ ಅವರಿಂದಲೇ 14 ಕೋಟಿ ರೂ.ಗಳ ಮರು ಅಂದಾಜು ಪಟ್ಟಿ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿತ್ತು. ಬಳಿಕ ವಿಳಂಬವಾಗಿದ್ದರೂ ಈಗಿನ ಆಡಳಿತ ಅನುಮೋದನೆ ಪಡೆಯಲು ಯಶಸ್ವಿ ಯಾಗಿದೆ.
2015ರಲ್ಲೇ ‘ಉದಯವಾಣಿ’ ಬೆಳಕು ಚೆಲ್ಲಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.