“ಕುಕ್ಕೆ ಸುಬ್ರಹ್ಮಣ್ಯನಿಗೆ ಶೀಘ್ರ ನೂತನ ಬ್ರಹ್ಮರಥ’


Team Udayavani, Mar 25, 2017, 3:28 PM IST

24SUB01.jpg

ಸುಬ್ರಹ್ಮಣ್ಯ : ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯು ಅಧಿಕಾರಕ್ಕೆ ಬಂದು ಐದು ತಿಂಗಳು ಪೂರೈಸಿದೆ. ಈ ನಡುವೆ ನೂತನ ಆಡಳಿತ ಮಂಡಳಿಯು ಭಕ್ತರ ಅನುಕೂಲಕ್ಕಾಗಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡು ಅದನ್ನು ಕಾರ್ಯಗತಗೊಳಿಸಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಮಾಡಲಾಗುವುದು. ಶ್ರೀ ಕ್ಷೇತ್ರದ ಬ್ರಹ್ಮರಥವನ್ನು ಸುಮಾರು ಅಂದಾಜು 2ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ರಚಿಸಲಾಗುವುದು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ಕುಕ್ಕೆ  ಶ್ರೀ ಸುಬ್ರಹ್ಮಣ್ಯ ದೇವಸ್ಥಾದ ಆಡಳಿತ ಕಚೇರಿಯ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಈಗಿರುವ ರಥವು ಹಳೆಯದಾಗಿದೆ. ಆದುದರಿಂದ ಆಡಳಿತ ಮಂಡಳಿಯು ನೂತನವಾಗಿ ಬ್ರಹ್ಮರಥ ನಿರ್ಮಾಣ ಮಾಡಲು ಸಂಕಲ್ಪ$ ಮಾಡಿದೆ. ಬ್ರಹ್ಮರಥವನ್ನು ಸೇವಾರ್ಥವಾಗಿ ನಿರ್ಮಿಸುವ  ಅವಕಾಶವನ್ನು  ಭಕ್ತರಿಗೆ ನೀಡಲಾಗಿದೆ. ಭಕ್ತರು ರಥವನ್ನು ಸೇವಾ ರೂಪದಲ್ಲಿ ನಿರ್ಮಿಸಿ ಕೊಡಲು ಮುಂದೆ ಬಂದರೆ   ಶ್ರೀ ದೇವಳದ ವತಿಯಿಂದ ಅವರಿಗೆ ಅನುಕೂಲ ಮಾಡಿ ಕೊಡಲಾಗುವುದು. ಇಬ್ಬರು ಅಥವಾ ಮೂರು ನಾಲ್ಕು ಮಂದಿ ಒಟ್ಟಾಗಿ ಸೇವೆ ನೆರವೇರಿಸಲು ಬಯಸಿದರೆ ಕೂಡ ಸೇವಾ ಕೈಂಕರ್ಯ ಮಾಡಲು ಅನುವು ಮಾಡಿಕೊಡಲಾಗುವುದು. ಒಂದು ವೇಳೆ ಭಕ್ತರು ಮುಂದೆ ಬಾರದಿದ್ದರೆ  ದೇವಸ್ಥಾದ ವತಿಯಿಂದ ರಥವನ್ನು ನಿರ್ಮಿಸಲಾಗುವುದು.ಆನ್‌ಲೈನ್‌ ಮುಖಾಂತರ ಕೇವಲ 60 ಸರ್ಪ ಸಂಸ್ಕಾರವನ್ನು  ಒಂದು ದಿನಕ್ಕೆ ಮುಂಗ ಡವಾಗಿ ಬುಕ್‌ ಮಾಡಲು ಮಾತ್ರ ಅವಕಾಶವಿತ್ತು. ಅದನ್ನು ಈಗ 100ಕ್ಕೆ ಏರಿಸಿದ್ದೇವೆ. ಇದರಿಂದ ಭಕ್ತರಿಗೆ ಇನ್ನಷ್ಟು ಅನುಕೂಲವಾಗಿದೆ ಎಂದರು.

ತ್ಯಾಜ್ಯ ವಿಲೇವಾರಿಗೆ‌ ಪರಿಹಾರ
ಕ್ಷೇತ್ರದಲ್ಲಿ ಘನ ತ್ಯಾಜ್ಯ ವಿಲೇವಾರಿ ಮತ್ತೂಂದು ಸಮಸ್ಯೆಯಾಗಿತ್ತು. ಈ ಸಮಸ್ಯೆಯ ಶಾಶ್ವತ ನಿವಾರಣೆಗೆ ಆಡಳಿತ ಮಂಡಳಿ ಯೋಜನೆ ರೂಪಿಸಿದೆ. ಈ ಕಾರಣದಿಂದ ಮಹಾರಾಷ್ಟ್ರದ ಪೂನಾಕ್ಕೆ ಶ್ರೀ ದೇವಸ್ಥಾದ ನಿಯೋಗ ತೆರಳಿ ಅಲ್ಲಿನ ಆರ್ಗಾನಿಕ್‌ ವೇಸ್ಟ್‌ ಕನ್‌ವರ್ಟರ್‌ ಮೆಷಿನ್‌ ಮತ್ತು ನಾನ್‌ ಆರ್ಗಾನಿಕ್‌ ಡಿಸ್ಟ್ರಕ್ಷನ್‌ ಮೆಷಿನ್‌ನ ಕಾರ್ಯ ವೈಖರಿ ಅಧ್ಯಯನ ನಡೆಸಿದೆ ಎಂದ ಅವರು, ಅಲ್ಲದೆ ಸುಮಾರು 75 ಲಕ್ಷ ರೂ.ನ ಈ ಅತ್ಯಾಧುನಿಕ ಮೆಷಿನ್‌ ಅನ್ನು ಕ್ಷೇತ್ರದಲ್ಲಿ ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ. ಸಮರ್ಪಕ ಮತ್ತು ವ್ಯವಸ್ಥಿತವಾದ ಒಳಚರಂಡಿ ಘಟಕದ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. ಇಲ್ಲಿಗೆ ಪೈಪ್‌ ಜೋಡಣೆಯ  ಕಾಮಗಾರಿಯು ಅಂತಿಮ ಹಂತದಲ್ಲಿದೆ. ಒಂದು ವಾರದ ಒಳಗೆ ಪೈಪ್‌ ಲೈನ್‌ ಜೋಡಣಾ ಕಾರ್ಯ ಮುಗಿಯಲಿದೆ. ಒಳಚರಂಡಿ ವ್ಯವಸ್ಥೆ ಮೂಲಕ ಕ್ಷೇತ್ರದ ಎಲ್ಲಾ ಖಾಸಗಿ, ಮಠ ಹಾಗೂ ಗೃಹ ಬಳಕೆದಾರರಿಗೆ ಒಳಚರಂಡಿ ಸಂಪರ್ಕ ವ್ಯವಸ್ಥೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಮಾಸ್ಟರ್‌ ಪ್ಲಾನ್‌ 
ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಮಾಸ್ಟರ್‌ಪ್ಲಾನ್‌ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಿಂದ ನೆರವೇರಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಪ್ರಾಶಸ್ತÂ  ನೀಡಲಾಗಿದೆ. ಈಗಾಗಲೇ ರಸ್ತೆ ವಿಸ್ತರಣೆ ಕಾಮಗಾರಿಯು ಪೂರ್ಣಗೊಂಡಿದೆ. ಇನ್ನು ಮೆಸ್ಕಾಂನ ವಿದ್ಯುತ್‌ ಕಂಬಗಳ ಸ್ಥಳಾಂತರ ಕಾರ್ಯ ಬಾಕಿ ಉಳಿದಿದೆ. ಈ ಕಾಮಗಾರಿ ನಡೆಸಲು ಇಲಾಖೆಗೆ ದೇವಸ್ಥಾನದಿಂದ  ಈಗಾಗಲೆ  22 ಲಕ್ಷ  ರೂ. ಪಾವತಿಸಲಾಗಿದೆ. ಮುಂದಿನ 15 ದಿನಗಳ ಒಳಗೆ ಈ ಕಾರ್ಯ ಪೂರ್ತಿಯಾಗಲಿದೆ. ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್‌ನ್ನುಸುಮಾರು 68 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುವುದು.  ಕ್ಷೇತ್ರಕ್ಕೆ ನಿರಂತರ ನೀರು ಪೂರೈಕೆ ಮಾಡಲು ದೇವಸ್ಥಾನದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿ$ಸಲಾಗಿದೆ. ಕುಮಾರಧಾರ ನದಿಯ ತಟದಲ್ಲಿ ಇನ್‌ಟೆಕ್‌ ಜಾÂಕ್‌ವೆಲ್‌ ನಿರ್ಮಿಸಲಾಗಿದೆ. ಇಲ್ಲಿಂದ ಪಂಪಿಂಗ್‌ ಮೂಲಕ ನೀರು ಶುದ್ಧೀಕರಣ ಘಟಕಕ್ಕೆ ತಂದು ಶುದ್ಧೀಕರಿಸುವ ವ್ಯವಸ್ಥೆಯಾಗಿದೆ. ಅಲ್ಲಿಂದ ನೀರನ್ನು ಅಂಗಡಿಗುಡ್ಡೆಯಲ್ಲಿ ನಿರ್ಮಿತವಾದ ಸುಮಾರು 15ಲಕ್ಷ ಲೀ. ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ಗೆ ರವಾನಿಸಿ ಶುದ್ಧೀಕರಿಸಿದ ನೀರನ್ನು ಸಂಗ್ರ ಹಿಸುವ ವ್ಯವಸ್ಥೆ ನಿರ್ಮಾಣವಾಗಿದೆ. ಎಂದು ಹೇಳಿದರು.

ಸುತ್ತುಗೋಪುರ ನವೀಕರಣ
ಅಷ್ಟಮಂಗಲ ಪ್ರಶ್ನೆ ಪ್ರಕಾರ ಶ್ರೀ ಕ್ಷೇತ್ರದ ಸುತ್ತುಗೋಪುರವನ್ನು ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ನವೀಕರಿಸಲಾಗುವುದು. ಶ್ರೀ ಕ್ಷೇತ್ರದ ಇಂಜಾಡಿಯಲ್ಲಿ ಭಕ್ತರ ಅನುಕೂಲತೆಗಾಗಿ 200 ಕೊಠಡಿಗಳ ವಸತಿ ಗೃಹವನ್ನು ಮಾಸ್ಟರ್‌ಪ್ಲಾನ್‌ ಯೋಜನೆಯಲ್ಲಿ ನಿರ್ಮಿಸಲಾಗುವುದು. ಅದೇ ರೀತಿ ಆದಿ ಸುಬ್ರಹ್ಮಣ್ಯದಲ್ಲಿ ನಿರ್ಮಾಣಗೊಂಡಿರುವ 184 ಕೊಠಡಿಯ ವಸತಿ ಗೃಹವನ್ನು ಶೀಘ್ರವೇ ಉದ್ಘಾಟಿಸಲಾಗುವುದು. ಮೈಸೂರು, ಬೆಂಗಳೂರಿನಲ್ಲಿ ಇರುವ ದೇವಸ್ಥಾನದ ಸ್ಥಳದಲ್ಲಿ ಆ ಭಾಗದ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರ್ತಾಭವನ, ಮಾಹಿತಿ ಕೇಂದ್ರ ಮತ್ತು ಕಲ್ಯಾಣ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ಕ್ಷೇತ್ರದ ಸಂಪೂರ್ಣ ವ್ಯವಹಾರವನ್ನು ಪಾರದರ್ಶಕವಾಗಿಡಲು  ಕ್ರಮ ಕೈಗೊಳ್ಳ ಲಾಗಿದೆ. ಹಾಗಾಗಿ ಆರ್ಥಿಕ ವ್ಯವ  ಹಾರವನ್ನು ಸಂಪೂರ್ಣ ಗಣಕೀಕೃತ ಗೊಳಿಸಲಾಗುವುದು ಎಂದು ಅವರು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್‌, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹೇಶ್‌ ಕುಮಾರ್‌ ಕೆ.ಎಸ್‌ ಕರಿಕ್ಕಳ, ಬಾಲಕೃಷ್ಣ ಗೌಡ ಬಳ್ಳೇರಿ, ಕೃಷ್ಣಮೂರ್ತಿ ಭಟ್‌, ಮಾಧವ.ಡಿ, ರಾಜೀವಿ.ಆರ್‌. ರೈ, ದೇವಸ್ಥಾನದ ಮಾಸ್ಟರ್‌ಪ್ಲಾನ್‌ ಅಭಿವೃದ್ಧಿ  ಸಮಿತಿ ಸದಸ್ಯ ಶಿವರಾಮ ರೈ, ಕಚೆೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್‌, ಅಭಿಯಂತರ ಉದಯ ಕುಮಾರ್‌ ಉಪಸ್ಥಿತರಿದ್ದರು.

ದೇವಸ್ಥಾನದ ಬಜೆಟ್‌ ಸಿದ್ಧ
ಶ್ರೀ ದೇವಳದ ಬಜೆಟ್‌ ಅನ್ನು ಸಿದ್ದಪಡಿಸಲಾಗಿದೆ. 2017-18ನೇ ಸಾಲಿನ ದೇವಳದ ಬಜೆಟ್‌ನ ಮೂಲಕ ಭಕ್ತರ ಅನುಕೂಲತೆಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು. 2017-18ರಲ್ಲಿ 400 ಕೋಟಿ ರೂ. ಬಜೆಟ್‌ ಸಿದ್ಧಪಡಿಸಿದ್ದೇವೆ. ದೇವಸ್ಥಾದಲ್ಲಿ   ಸಿಬಂದಿ ಕೊರತೆ ಇರುವುದರಿಂದ   ಹೆಚ್ಚಿನ  ಸಿಬಂದಿ ಆವಶ್ಯಕತೆ  ಪಟ್ಟಿಯನ್ನು ತಯಾರಿಸಿ ಶೀಘ್ರವೇ ಮಂಜೂರಾತಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಮೂಲಕ ದೇವಳದಲ್ಲಿ ಹೆಚ್ಚಿನ ಉದ್ಯೋಗ  ಸೃಷ್ಟಿ ಮಾಡಲಾಗುವುದು ಎಂದರು. 

ಸಂಜೆಯೂ ಆಶ್ಲೇಷ ಬಲಿ
ಹಿಂದಿನಿಂದ ಆಶ್ಲೇಷ ಬಲಿ ಸೇವೆಯು ಬೆಳಗ್ಗೆ ಮಾತ್ರ ಮೂರು ಹಂತದಲ್ಲಿ ನಡೆಯುತ್ತಿತ್ತು. ಇದರಿಂದ ಭಕ್ತ ಸಂದಣಿ ಅಧಿಕವಾಗುತ್ತಿತ್ತು. ಆದುದರಿಂದ ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಸಂಜೆ ವೇಳೆ ಕೂಡಾ ಆಶ್ಲೇಷ ಬಲಿ ಸೇವೆ ನೆರವೇರಿಸಲು ಶೀಘ್ರ ವ್ಯವಸ್ಥೆ ಮಾಡಲಾಗುವುದು. ಆದುದರಿಂದ ಶೀಘ್ರವೇ  ಶ್ರೀ  ದೇವಸ್ಥಾದಲ್ಲಿ  ಆಶ್ಲೇಷ ಬಲಿ ಸೇವೆಯನ್ನು  ಸಂಜೆಯ ವೇಳೆ ಎರಡು ಹಂತದಲ್ಲಿ  ನಡೆಸಲು ಉದ್ದೇಶಿಸಲಾಗಿದೆ ಎಂದು ಮುಂಡೋಡಿ ತಿಳಿಸಿದರು.
 

ಟಾಪ್ ನ್ಯೂಸ್

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.