ಕುಕ್ಕೆ: “ಸಂಘರ್ಷ ತಪ್ಪಿಸಲು ಜೂ.10ರೊಳಗೆ ಸಂಧಾನ ಸಭೆ’
ಪೇಜಾವರ ಶ್ರೀಪಾದರಿಂದ ದೇವಸ್ಥಾನ; ಮಠ ಭೇಟಿ
Team Udayavani, Jun 8, 2019, 10:26 AM IST
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ, ಶ್ರೀ ಸಂಪುಟ ಮಠದ ನಡುವೆ ತಲೆದೋರಿ ರುವ ಸಂಘರ್ಷ ತಪ್ಪಿಸಿ ಕ್ಷೇತ್ರದಲ್ಲಿ ಶಾಂತಿ ನೆಲೆಸು ವಂತಾಗಲು ಜೂ. 10ರೊಳಗೆ ಸಂಧಾನ ಸಭೆ ನಡೆಸಲಾ ಗುವುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ದೇವಸ್ಥಾನ ಮತ್ತು ಮಠಗಳ ನಡುವೆ ಹಿಂದಿನಿಂದ ಕೆಲವು ವಿಚಾರಗಳಲ್ಲಿ ಸಂಘರ್ಷವಿದ್ದರೂ ಉತ್ತಮ ಬಾಂಧವ್ಯವಿತ್ತು. ಇತ್ತೀಚಿನ ದಿನಗಳಲ್ಲಿ ಗೊಂದಲ ಏರ್ಪಟ್ಟು ಅತಿ ರೇಕ ಹಂತಕ್ಕೆ ತಲುಪುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಕ್ಷೇತ್ರ ದಲ್ಲಿ ಶಾಂತಿ ನೆಲೆಸಬೇಕು. ಹಿಂದೂಗಳ ಶ್ರದ್ಧಾ ಕೇಂದ್ರದಲ್ಲಿ ಎದ್ದಿರುವ ಸಂಘರ್ಷವನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸುವುದು ಸೂಕ್ತ. ಇದೇ ಉದ್ದೇಶದಿಂದ ದೇವಸ್ಥಾನ ಮತ್ತು ಮಠದ ಮಧ್ಯೆ ಒಮ್ಮತ ತರಲು ಪ್ರಯತ್ನಿಸುತ್ತಿದ್ದೇನೆ. ಎರಡೂ ಕಡೆಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಜೂ.10ರೊಳಗೆ ಸಂಧಾನ ಸಭೆ ನಡೆಸಲು ನಿರ್ಧರಿಸಿದ್ದೇನೆ. ಸಭೆಗೆ ಸೂಕ್ತ ಸ್ಥಳವನ್ನು ಶೀಘ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸಭೆಯಲ್ಲಿ ಎರಡೂ ಕಡೆಯ ಪ್ರಮುಖರು ಇರುತ್ತಾರೆ. ಯಾರೆಲ್ಲ ಇರಬೇಕು ಅನ್ನುವುದನ್ನು ಶೀಘ್ರ ಪಟ್ಟಿ ಮಾಡುತ್ತೇವೆ, ಧಾರ್ಮಿಕ ಕ್ಷೇತ್ರಗಳ ನಡುವೆ ಅನ್ಯೋ ನ್ಯತೆ ಸೃಷ್ಟಿಸುವ ರೀತಿಯಲ್ಲಿ ಆ ಸಂಧಾನ ಸೂತ್ರ ಇರುತ್ತದೆ ಎಂದರು.
ಭೇಟಿ ವೇಳೆ ಶ್ರೀಗಳು ಎರಡೂ ಕಡೆಯವರಿಂದ ಪ್ರತ್ಯೇಕ ಅಭಿಪ್ರಾಯ ಪಡೆದುಕೊಂಡರು.
ಆರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದ ಅವರು ಬಳಿಕ ಸಂಪುಟ ಶ್ರೀ ನರಸಿಂಹ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಮಠದ ಕೊಠಡಿಯಲ್ಲಿ ಯತಿಗಳಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಗಳು, ಮಠದ ಪ್ರಮುಖರ ಜತೆ ಹಿಂದೂ ಮುಖಂಡರ ಸಮ್ಮುಖ ಮಾತು ಕತೆ ನಡೆಸಿದರು. ಮಠದ ಕೆಲವು ಕಡತಗಳನ್ನು ಪರಿಶೀಲಿ ಸಿದರು. ಮಠದ ಸರ್ಪಸಂಸ್ಕಾರ ಯಾಗ ಶಾಲೆ ವೀಕ್ಷಿಸಿ ದರು. ಇದೇ ವೇಳೆ ಯತಿಗಳಿಬ್ಬರು ಗುಪ್ತವಾಗಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಅನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಯ 2ನೆೇ ಮಹಡಿಯಲ್ಲಿ ದೇಗುಲದ ಆಡಳಿತ ಮಂಡಳಿ, ಪ್ರಮುಖರ ಜತೆ ಮಾತುಕತೆ ನಡೆಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಶ್ರೀಗಳನ್ನು ತುಳಸಿ ಮಾಲೆ ಹಾಕಿ ಫಲಪುಷ್ಪ ನೀಡಿ ಸ್ವಾಗತಿಸಿದರು.
ಮಾತಿನ ಚಕಮಕಿ
ಸಭೆಯಲ್ಲಿ ಸಂಧಾನ ಸಭೆಗೆ ಹಿಂದೂ ಸಂಘಟ ನೆಗಳನ್ನು ಆಹ್ವಾನಿಸಬೇಕು ಎಂದು ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಹೇಳಿದರು. ಆಗ ಪೇಜಾವರ ಮಠದ ಶ್ರೀಗಳ ಜತೆ ಮಾತುಕತೆ ನಡೆಸುವ ವೇಳೆ ವಿಹಿಂಪ ಮುಖಂಡ ಎಂ.ಬಿ. ಪುರಾಣಿಕ್ ಅಷ್ಟಮಂಗಲ ಪ್ರಶ್ನೆಯಲ್ಲಿ ನಂಬಿಕೆ ಇಲ್ಲ ಎಂದಿದ್ದನ್ನು ಪ್ರಸ್ತಾವಿಸಿದರು. ಈ ವೇಳೆ ಸಂಘರ್ಷದ ವಾತಾವರಣ ಉಂಟಾಗಿ ಬಳಿಕ ಮುಖಂಡರು ತಿಳಿಗೊಳಿಸಿದರು.
ಯತಿಗಳನ್ನು ದೇಗುಲದ ಮುಂಭಾಗದ ಗೋಪುರದಿಂದ ಒಳಗೆ ಅದ್ದೂರಿ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಮಠಕ್ಕೆ ಬಂದಾಗ ಮಠದ ದಿವಾನ ಸುದರ್ಶನ ಜೋಯಿಸರು ಶ್ರೀಗಳನ್ನು ಪುಷ್ಪ ವೃಷ್ಟಿ ಮೂಲಕ ಅದ್ದೂರಿಯಾಗಿ ಬರ ಮಾಡಿಕೊಂಡರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರ, ವ್ಯವ ಸ್ಥಾಪನ ಸಮಿತಿ ಸದಸ್ಯ ಮಹೇಶ್‌ಕುಮಾರ್ ಕರಿಕ್ಕಳ, ಸಮಿತಿ ಸದಸ್ಯರು, ಪ್ರಮುಖರಾದ ಎಂ.ಬಿ. ಸದಾಶಿವ, ಪ್ರೊ| ಎಂ.ಬಿ. ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಜಗದೀಶ ಶೇಣವ, ಶರಣ್ ಪಂಪ್‌ವೆಲ್, ಭಾಸ್ಕರ ಧರ್ಮಸ್ಥಳ, ಮುರಳಿಕೃಷ್ಣ ಹಸಂತಡ್ಕ, ಗುರುಪ್ರಸಾದ್ ಪಂಜ ಉಪಸ್ಥಿತರಿದ್ದರು.
ಬೆಳಗ್ಗೆ ಸಭೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತ ಹಿತರಕ್ಷಣಾ ವೇದಿಕೆ ಪೂರ್ವಭಾವಿ ಸಭೆ ಬೆಳಗ್ಗೆ ಉತ್ತರಾದಿ ಮಠದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್‌ಕುಮಾರ್ ಕರಿಕ್ಕಳ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ದೇವಸ್ಥಾನದಲ್ಲಿ ಈ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆ ವೇಳೆ ಗಣಪತಿ ದೋಷ, ಯತಿ ಹತ್ಯೆ ದೋಷ ಇತ್ಯಾದಿ ದೋಷಗಳು ಕಾಣಿಸಿಕೊಂಡಿದ್ದವು. ದೇಗುಲ, ಮಠ ಜಂಟಿಯಾಗಿ ಅಷ್ಟಮಂಗಲ ಇರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎನ್ನುವ ಅಭಿಪ್ರಾಯಗಳು ವ್ಯಕ್ತ ಗೊಂಡವು. ಜಂಟಿಯಾಗಿ ಅಷ್ಟಮಂಗಲ ಪ್ರಶ್ನೆ ಇರಿಸಿ ಎಲ್ಲ ದೋಷಗಳಿಗೆ ಪರಿಹಾರ ಕಂಡುಕೊಳ್ಳುವುದು, ದೇವಸ್ಥಾನದಿಂದ ಮರೆಯಾದ ಗಣಪತಿಯನ್ನು ಮೂಲ ಸ್ಥಳದಲ್ಲೇ ಸ್ಥಾಪಿಸುವುದು.
ಮಠದವರು ಸುಬ್ರಹ್ಮಣ್ಯ ಸ್ವಾಮಿ ಮಠ ಎಂದು ಹೆಸರನ್ನು ದುರು ಪಯೋಗಪಡಿಸದಂತೆ ಕ್ರಮ ವಹಿಸುವುದು, ದೇಗುಲ ದಲ್ಲಿ ನಡೆಯುವ ಸರ್ಪಸಂಸ್ಕಾರ ಸಹಿತ ಪ್ರಮುಖ ಸೇವೆಗಳನ್ನು ಮಠದಲ್ಲಿ ನಡೆಸುವುದನ್ನು ನಿಲ್ಲಿಸುವುದು, ದೇವಸ್ಥಾನ, ಮಠದ ಮಧ್ಯೆ ಉತ್ತಮ ಬಾಂಧವ್ಯ ಸೃಷ್ಟಿಸುವುದು ಇತ್ಯಾದಿ ಬೇಡಿಕೆಗಳನ್ನು ಪೇಜಾವರ ಶ್ರೀಗಳ ಮುಂದಿಡುವ ಕುರಿತು ಸಭೆ ನಿರ್ಧರಿಸಿತು.
ಗುರುವಾರ ಉಡುಪಿ ಮಠದಲ್ಲಿ ಪೇಜಾವರ ಶ್ರೀಗಳ ಜತೆ ಮಾತುಕತೆ ನಡೆಸಿದ ವೇಳೆ ಉಪಸ್ಥಿತರಿದ್ದ ವಿಹಿಂಪ ರಾಜ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್, ಅಷ್ಟಮಂಗಲ ಪ್ರಶ್ನೆಯಲ್ಲಿ ತನಗೆ ನಂಬಿಕೆ ಇಲ್ಲ ಎಂದು ಹೇಳಿರುವುದಕ್ಕೆ ಸಭೆಯಲ್ಲಿ ಖಂಡನೆ ವ್ಯಕ್ತಪಡಿಸಲಾಯಿತು.
ವ್ಯವಸ್ಥಾಪನ ಸಮಿತಿ ಸದಸ್ಯ ಬಾಲಕೃಷ್ಣ ಬಳ್ಳೇರಿ, ಕಿಶೋರು ಶಿರಾಡಿ, ಶಿವರಾಮ ರೈ, ಮೋನಪ್ಪ ಮಾನಾಡು, ಶ್ರೀನಾಥ್ ಭಟ್, ಪ್ರಶಾಂತ ಭಟ್‌ಮಾಣಿಲ, ಗುರುಪ್ರಸಾದ್ ಪಂಜ, ಸತೀಶ್ ಕೂಜು ಗೋಡು, ಗೋಪಾಲ ಎಣ್ಣೆಮಜಲು, ಜಿಲ್ಲಾ ಧಾ.ಪ. ಸದಸ್ಯೆ ವಿಮಲಾ ರಂಗಯ್ಯ, ಕರುಣಾಕರ ಬಿಳಿಮಲೆ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.