ಫಲ್ಗುಣಿ ನದಿಯಲ್ಲಿ ಹಬ್ಬದ ಕಳೆ; ಜಲಕ್ರೀಡೆ, ಸಾಂಸ್ಕೃತಿಕ ವೈಭವದ ಸೆಲೆ


Team Udayavani, Jan 13, 2019, 4:59 AM IST

13-january-3.jpg

ಮಹಾನಗರ : ನಳನಳಿಸುವ ಜಲರಾಶಿಯಲ್ಲಿ ಬೋಟುಗಳ ಕಲರವ; ನದಿಯ ಇಕ್ಕೆಲಗಳ ವಿಹಂಗಮ ನೋಟ ವನ್ನು ಆಸ್ವಾದಿಸುತ್ತಾ ತೇಲುವ ಆಹಾರ ಮಳಿಗೆಯಲ್ಲಿ ತಮ್ಮ ನೆಚ್ಚಿನ ಆಹಾರವನ್ನು ಸವಿಯುವ ಅವಕಾಶ; ದೋಣಿಗಳಲ್ಲಿ ಜಲವಿಹಾರ, ಜಲಕ್ರೀಡೆಯ ಪುಳಕ… ಸುಂದರ ಪ್ರಕೃತಿ ಸೊಬಗಿನ ಹಿನ್ನೆಲೆಯೊಂದಿಗೆ ಗಾನ, ನೃತ್ಯ, ಸಂಗೀತದ ಪುಳಕ… ಒಟ್ಟಾರೆಯಾಗಿ ಕೂಳೂರಿನ ಫಲ್ಗುಣಿ ನದಿಯಲ್ಲಿ ಹಬ್ಬದ ಕಳೆ; ತಣ್ಣನೆ ಹರಿಯುವ ನದಿಗೆ ಆಕರ್ಷಣೆಯ ಸೆಲೆ.

ರಾಜ್ಯದ ಪಾಲಿಗೆ ವಿನೂತನ ಮತ್ತುಪ್ರಥಮ ಎನ್ನಬಹುದಾದ ನದಿ ಉತ್ಸವ (ರಿವರ್‌ ಫೆಸ್ಟಿವಲ್‌) ಶನಿವಾರ ಆರಂಭ ಗೊಂಡಿದ್ದು ರವಿವಾರವೂ ನಡೆಯಲಿದೆ. ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆಯ ಬಳಿಯಿಂದ ಸುಲ್ತಾನ್‌ ಬತ್ತೇರಿಯವರೆಗೆ ಸುಮಾರು 23 ಕಿ.ಮೀ. ವರೆಗೆ ನದಿ ಮತ್ತು ನದಿಪಾತ್ರದಲ್ಲಿ ನಡೆಯುವ ಉತ್ಸವದಲ್ಲಿ ಎರಡು ದಿನಗಳ ಕಾಲ ವೈವಿಧ್ಯಮಯ ಮನೋರಂಜನೆ ಹಾಗೂ ಜಲಸಂಬಂಧಿತ ಕ್ರೀಡೆಗಳು ನಡೆಯುತ್ತಿವೆ. ಕೂಳೂರಿನಿಂದ ಬಂಗ್ರ ಕೂಳೂರುವರೆಗೆ ಸುಮಾರು ಎರಡುವರೆ ಕಿ.ಮೀ. ದೂರು ನದಿ ಬದಿಯಲ್ಲಿ ನಡೆಯುತ್ತಾ ಪ್ರಕೃತಿ ಸೌಂದರ್ಯ ಆಸ್ವಾದಿಸಬಹುದು.

ಬೋಟು ವಿಹಾರ
ನಿಗದಿತ ಶುಲ್ಕ ತೆತ್ತು ನದಿಯಲ್ಲಿ ವಿಹರಿಸಲು ವ್ಯವಸ್ಥೆ ಮಾಡಲಾಗಿದ್ದು, ಜನರು ಜಲವಿಹಾರದ ಆನಂದವನ್ನು ಅನುಭವಿಸಿದರು. ಉತ್ಸವ ತಾಣಗಳಲ್ಲದೆ ನದಿ ತೀರದಲ್ಲಿರುವ ಇತರ ಜೆಟ್ಟಿಗಳಿಗೆ ಪ್ರವಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಸುಮಾರು 13 ದೋಣಿಗಳು ಕಾರ್ಯಾಚರಿಸುತ್ತಿವೆ. ನದಿ ಮಧ್ಯದಲ್ಲಿ ಆಕರ್ಷಕ ತೇಲುವ ರೆಸ್ಟೋರೆಂಟ್‌ಗಳಲ್ಲಿ ಕುಳಿತು ನೀರಿನ ಅಲೆಗಳ ಹಿತವಾದ ಜೋಕಾಲಿಯ ನಡುವೆ, ವಿಶಾಲ ಜಲರಾಶಿ ಮತ್ತು ನದಿಯ ಎರಡೂ ಬದಿಗಳಲ್ಲೂ ಇರುವ ಹಸಿರು ಸಿರಿಯ ರಮಣೀಯ ದೃಶ್ಯವನ್ನು ಆನಂದಿಸುತ್ತಾ, ಸ್ವಾದಿಷ್ಟಭರಿತ ತಿಂಡಿತಿನಸುಗಳ ಸವಿದರು.

ಜಲಕ್ರೀಡೆಗಳ ಪುಳಕ
ನದಿ ಉತ್ಸವಕ್ಕೆ ಆಗಮಿಸುವ ಸಾರ್ವ ಜನಿಕರಿಗೆ ಜಲಕ್ರೀಡೆಗಳು ಮನಸ್ಸಿಗೆ ಉಲ್ಲಾಸ ನೀಡುತ್ತಿವೆೆ. ರೋಯಿಂಗ್‌, ಕಯಾಕ್‌, ಸ್ಟ್ಯಾಂಡ್‌ ಆಫ್‌ ಫೆಡಲಿಂಗ್‌, ವಿಂಡ್‌ ಸರ್ಫಿಂಗ್‌ ಜೆಟ್ಸೆಕಿ, ಸ್ಪೀಡ್‌ಬೋಟು ಸಹಿತ ವಿವಿಧ ಜಲಕ್ರೀಡೆಗಳು ಪ್ರದರ್ಶಿತ ಗೊಳ್ಳುತ್ತಿವೆ. ಇದರಲ್ಲಿ ಭಾಗವಹಿಸುವ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿದ್ದು ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ಆನಂದಿಸಿದರು. ಜಲಕ್ರೀಡೆ ಪ್ರವೀಣರು, ತರಬೇತುದಾರರು ಆಸಕ್ತ ಸಾರ್ವಜನಿಕರ ಜತೆ ಇದ್ದು ಮಾರ್ಗದರ್ಶನ ನೀಡುತ್ತಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು
ವಿಶೇಷವಾಗಿ ಆಯೋಜಿಸಿರುವ ವೈವಿಧ್ಯ ಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನದಿ ಉತ್ಸವಕ್ಕೆ ಮೆರುಗು ನೀಡುತ್ತಿವೆ. ಬಂಗ್ರಕೂಳೂರು ಮತ್ತು ಸುಲ್ತಾನ್‌ ಬತ್ತೇರಿಯಲ್ಲಿ ಅಳವಡಿಸಿರುವ ವೇದಿಕೆಗಳಲ್ಲಿ ಯುವ ಹಾಗೂ ವೃತ್ತಿಪರ ಕಲಾವಿದರಿಂದ ಗಾನ, ನೃತ್ಯ, ಸಂಗೀತ ಕಾರ್ಯಕ್ರಮಗಳು ನದಿ ಉತ್ಸವದಲ್ಲಿ ಆಗಮಿಸುವ ಸಾರ್ವಜನಿಕರ ಮನಸ್ಸುಗಳಿಗೆ ಮುದ ನೀಡುತ್ತಿವೆ. ಬಂಗ್ರಕೂಳೂರಿನಲ್ಲಿ ಆಯೋಜಿಸಲಾದ ಚಿತ್ರಕಲಾ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದ್ದು, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಖರೀದಿಯ ಮಜಾ ನೀಡುತ್ತಿವೆ.

ವಿಶಿಷ್ಟ ಉದ್ಘಾಟನೆ 
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಕೂಳೂರು ಸೇತುವೆಯ ಬಳಿಯ ಫಲ್ಗುಣಿ ನದಿ ತೀರದ ಜೆಟ್ಟಿಯ ಪಕ್ಕ ಗಿಡಗಳನ್ನು ನೆಡುವ ಮೂಲಕ ನದಿ ಉತ್ಸವಕ್ಕೆ ಚಾಲನೆ ನೀಡಿದರು. ಬಾಲಕಿಯೋರ್ವಳು ಇದಕ್ಕೆ ನೀರೆರೆದಳು. ಮೇಯರ್‌ ಭಾಸ್ಕರ್‌ ಕೆ., ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರಿಗೆ ಸಾಥ್‌ ನೀಡಿದರು. ಬಳಿಕ ನದಿಗೆ ಹೂವು ಅರ್ಪಿಸಲಾಯಿತು. ವೇದಿಕೆಯಲ್ಲಿ ಸಚಿವರು ಡೊಳ್ಳು ಬಾರಿಸಿದರು. ಸ್ಪೀಡ್‌ಬೋಟ್‌ನಲ್ಲಿ ನದಿಯಲ್ಲಿ ಸಂಚರಿಸಿ ಜಲಕ್ರೀಡೆಯನ್ನು ಉದ್ಘಾಟಿಸಿದರು. ಡೊಳ್ಳು ಕುಣಿತ, ಡೋಲುವಾದನ, ಕೊಂಬು, ಕಹಳೆ, ಚೆಂಡೆವಾದನ ಉದ್ಘಾಟನೆಗೆ ಮೆರುಗು ನೀಡಿದವು.

ಟಾಪ್ ನ್ಯೂಸ್

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Tamil film Maharaja to be released in China on November 29

Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್‌!

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.