ಕುಮಾರಧಾರೆ ಕ್ಷೀಣ: ನೀರಿಗೆ ತತ್ವಾರ!
Team Udayavani, Dec 21, 2017, 3:17 PM IST
ಉಪ್ಪಿನಂಗಡಿ: ಪುತ್ತೂರು ನಗರ ಸಹಿತ ತಾಲೂಕಿನ ಬಹುಭಾಗಗಳಿಗೆ ಕುಡಿಯಲು ಮತ್ತು ಕೃಷಿಗೆ ನೀರೊದಗಿಸುವ
ಕುಮಾರಧಾರಾ ನದಿಯ ಅಣೆಕಟ್ಟೆಯಲ್ಲಿ ಈ ಬಾರಿ ನೀರಿನ ಮಟ್ಟ ಕುಸಿದಿದೆ. ಇಂಟೆಕ್ ವೆಲ್‌ನಲ್ಲಿ ನಿಗದಿಗಿಂತ ಎರಡು ಅಡಿ ಕಡಿಮೆ ನೀರಿದ್ದು, ಈ ಬಾರಿ ಜನವರಿ ಮೊದಲ ವಾರದಲ್ಲೇ ಡ್ಯಾಂಗೆ ಹಲಗೆ (ಗೇಟು) ಅಳವಡಿಸಲು ಯೋಜಿಸಲಾಗಿದೆ. ಪ್ರತಿ ವರ್ಷಕ್ಕಿಂತ ಹದಿನೈದು ದಿವಸ ಮೊದಲೇ ಈ ಬಾರಿ ನೀರು ಸಂಗ್ರಹಿಸಲು ತೀರ್ಮಾನಿಸಿದ್ದು, ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರಿರುವುದರಿಂದ ಈ ಕ್ರಮ ಅನಿವಾರ್ಯವೆನಿಸಿದೆ.
ನೀರಿನ ಮಟ್ಟ ಇಳಿಮುಖ
ಎರಡು ವರ್ಷಗಳಿಂದ ಕುಮಾರಧಾರಾ, ನೇತ್ರಾವತಿ ನದಿಗಳು ಮೇ ಸುಮಾರಿಗೆ ಬರಿದಾಗಿದ್ದವು. ನೀರಿಗಾಗಿ ನದಿ ಭಾಗವನ್ನೇ ಆಶ್ರಯಿಸುವ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಈಡಾಗಿದ್ದವು. ಕೊಳವೆಬಾವಿ ಕೊರೆಯಲು ನಿಷೇಧ ಹೇರಿದ್ದ ಪರಿಣಾಮ ಪರದಾಟ ಮತ್ತಷ್ಟು ತೀವ್ರವಾಗಿತ್ತು. ಈ ಬಾರಿ ಡಿಸೆಂಬರ್ ನಿಂದಲೇ ನದಿ, ತೋಡು ಬತ್ತುತ್ತಿವೆ. ಅದೇ ಸ್ಥಿತಿ ಮುಂದುವರಿಯುವ ಲಕ್ಷಣಗಳು ನದಿ ತಟದಲ್ಲಿ ಗೋಚರಿಸುತ್ತಿವೆ.
ನಗರದ ನೀರಿನ ಮೂಲ
ಕುಮಾರಧಾರಾ ಡ್ಯಾಂನಿಂದ ನೆಕ್ಕಿಲಾಡಿ ಮೂಲಕ ಪುತ್ತೂರಿಗೆ ನೀರು ಪೂರೈಕೆ ಆಗುತ್ತಿದೆ. ಇಲ್ಲಿನ ನೀರಿನ ಮೂಲವೇ ಡ್ಯಾಂ. 1991ರ ಜನಗಣತಿ ಪ್ರಕಾರ ನಗರದಲ್ಲಿ 35,879 ಇದ್ದ ಜನಸಂಖ್ಯೆ 2001ರ ಜನಗಣತಿಯಲ್ಲಿ 48,070ಕ್ಕೆ ಏರಿಕೆ ಕಂಡಿತ್ತು. 2011ರಲ್ಲಿ ಅದು 53,061ರಷ್ಟಿತ್ತು. ಆಮೇಲಿನ ಆರು ವರ್ಷಗಳಲ್ಲಿ ಒಟ್ಟು ಪ್ರಮಾಣ 60 ಸಾವಿರ ದಾಟಿರಬಹುದು. ಪುತ್ತೂರು ನಗರಕ್ಕೆ ನಿತ್ಯ 75 ಲಕ್ಷ ಲೀಟರ್ ನೀರು ಬೇಕು. ಈ ಪೈಕಿ 60 ಲಕ್ಷ ಲೀ. ನೀರು ಕುಮಾರಧಾರಾ ನದಿಯಿಂದ ಪೂರೈಕೆ ಆಗುತ್ತದೆ. ಪ್ರಮುಖ ಜಲಮೂಲವೇ ಬತ್ತುತ್ತಿರುವ ಹಿನ್ನೆಲೆ ಹಾಹಾಕಾರ ಉಂಟಾದೀತೆಂದು ನಿರೀಕ್ಷಿಸಲಾಗಿದೆ.
ನೀರಿನ ಪ್ರಮಾಣ
ಕುಮಾರಧಾರಾ ಕಿಂಡಿ ಅಣೆಕಟ್ಟಿನಲ್ಲಿ ನವೆಂಬರ್ ತಿಂಗಳಲ್ಲಿ ಹಲಗೆ ಹಾಕಿದರೆ 330 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಂಗ್ರಹವಾಗುವ ಸಾಮರ್ಥ್ಯವಿದೆ. 2014 ಮೇ 15ರ ವೇಳೆಗೆ ಅಣೆಕಟ್ಟಿನಲ್ಲಿ ಇದ್ದ ನೀರಿನ ಪ್ರಮಾಣ 2015 ಎಪ್ರಿಲ್ ನಲ್ಲಿ ಇತ್ತು. ಕಳೆದ ಬಾರಿ ಎಪ್ರಿಲ್ ತಿಂಗಳಲ್ಲಿ ಕುಮಾರಧಾರೆ ತಳ ಕಂಡಿತ್ತು. ಈ ಸಲ ಅದು ಜನವರಿ ತಿಂಗಳಲ್ಲೇ ಕಾಣುವ ಭೀತಿ ಎದುರಾಗಿದೆ.
ಮಂಗಳೂರಿಗೂ ಹೊಡೆತ
ತುಂಬೆ ಡ್ಯಾಂನಿಂದ ಮಂಗಳೂರು ನಗರಕ್ಕೆ ನೀರಿನ ಪೂರೈಕೆ ಆಗುತ್ತದೆ. ಉಪ್ಪಿನಂಗಡಿಯಲ್ಲಿ ಕುಮಾರ ಧಾರೆಯ ಸಂಗಮ ವಾಗಿ ಹರಿಯುವ ನೇತ್ರಾವತಿ ನದಿಗೆ ತುಂಬೆಯಲ್ಲಿ ಕಟ್ಟ ಲಾದ ಡ್ಯಾಂಗೂ ಇದೇ ಆಧಾರ. ಕುಮಾರಧಾರೆ, ನೇತ್ರಾ ವತಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದರೆ, ಮಂಗಳೂರಿಗೂ ನೀರಿನ ಬರಕಾದಿದೆ ಎಂದೇ ಅರ್ಥ.
ಹತ್ತು ದಿನಗಳಲ್ಲಿ ಜೋಡಣೆ
ಹರಿವಿನ ಮಟ್ಟ ಕಡಿಮೆ ಆಗಿದ್ದು ಗಮನಕ್ಕೆ ಬಂದ ತತ್‌ಕ್ಷಣ ಡ್ಯಾಂ ಗೇಟು ಹಾಕಲಾಗುವುದು. ಇನ್ನು ಹತ್ತು ದಿವಸಗಳಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
– ರೂಪಾ ಶೆಟ್ಟಿ
ಪೌರಾಯುಕ್ತೆ, ನಗರಸಭೆ, ಪುತ್ತೂರು
ಎಂ.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.