ಅ. 14; ಮಂಗಳೂರು ದಸರಾ ಸಿಎಂ ಉದ್ಘಾಟನೆ: ಪೂಜಾರಿ
Team Udayavani, Oct 6, 2018, 9:55 AM IST
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಅ. 10ರಿಂದ 20ರವರೆಗೆ ನಡೆಯಲಿದೆ. ವೈಭವದ “ಮಂಗಳೂರು ದಸರಾ’ವನ್ನು ಅ. 14 ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದು, ಅ. 19ರಂದು ವೈಭವದ ಮಂಗಳೂರು ದಸರಾ ಮೆರವಣಿಗೆ ಸಂಪನ್ನ ಗೊಳ್ಳಲಿದೆ ಎಂದು ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಕುದ್ರೋಳಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 10ರಂದು ಬೆಳಗ್ಗೆ 9 ಗಂಟೆಗೆ ಉತ್ಸವ ಆರಂಭವಾಗಲಿದೆ. 11.50ಕ್ಕೆ ನವದುರ್ಗೆ ಮತ್ತು ಶಾರದೆ ಪ್ರತಿಷ್ಠಾಪನೆ ನಡೆಯಲಿದ್ದು, ಇದರ ಉದ್ಘಾ ಟನೆಯನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರು ನೆರವೇರಿ ಸು ವರು. ಅನಂತರ ಪ್ರತಿ ದಿನವೂ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 19ರಂದು ಸಂಜೆ 4ಕ್ಕೆ ಶೋಭಾ ಯಾತ್ರೆ ನಡೆಯಲಿದೆ ಎಂದರು.
ದಸರಾ ಉದ್ಘಾಟನೆಯ ಸಂದರ್ಭ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕ ರಾದ ವೇದವ್ಯಾಸ ಕಾಮತ್, ಭೋಜೇ ಗೌಡ, ಹರೀಶ್ ಕುಮಾರ್, ಮೇಯರ್ ಭಾಸ್ಕರ್, ಬಿಲ್ಲವ ಮಹಾಮಂಡಲ ಅಧ್ಯಕ್ಷ ಜಯ ಸಿ. ಸುವರ್ಣ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿ ರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್, ರವಿಶಂಕರ ಮಿಜಾರ್, ದೇವೇಂದ್ರ ಪೂಜಾರಿ, ಡಾ| ಬಿ.ಜಿ. ಸುವರ್ಣ, ಡಾ| ಅನಸೂಯಾ, ಬಿ.ವಿ. ಕಟ್ಟೆಮಾರ್, ಶ್ರೀಕರ ಪೂಜಾರಿ, ಚಿತ್ತರಂಜನ್ ಉಪಸ್ಥಿತರಿದ್ದರು.
“ಏನೋ ಹೇಳಬೇಕು’ ಎಂದವರು ಸುಮ್ಮನಾದರು!
ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ಪೂಜಾರಿ ಅವರು, “ನಾನು ನಿಮಗೊಂದು ವಿಷಯ ಹೇಳಬೇಕು ಎಂದುಕೊಂಡಿ¨ªೇನೆ. ಹೇಳಬಾರದು ಎಂದಿದ್ದೆ… ಹೇಳಬೇಕೋ… ಬೇಡವೋ?’ ಎಂದು ಕೇಳಿದರು. “ಹೇಳಿ ಸರ್’ ಎಂದು ಸುದ್ದಿಗಾರರು ವಿನಂತಿಸಿದರು. ಮೈಕ್ ಕೈಗೆತ್ತಿಕೊಂಡ ಪೂಜಾರಿ ಅವರು ಒಂದು ಕ್ಷಣ ಏನೋ ಯೋಚಿಸಿ, “ಬೇಡ… ಬೇಡ… ಹೇಳುವುದಿಲ್ಲ’ ಎಂದು ಸುಮ್ಮನಾದರು. “ಹೇಳಿ’ ಎಂದು ಸುದ್ದಿಗಾರರು ಒತ್ತಾಯಿಸಿದರೂ ಪೂಜಾರಿಯವರು ಹೇಳಬೇಕಾದ ವಿಷಯವನ್ನು ಹೇಳದೆ ಮೌನ ವಹಿಸಿರುವುದು ಕುತೂಹಲ ಸೃಷ್ಟಿಸಿದೆ.
ಪ್ರತಿ ಜಿಲ್ಲೆಯಿಂದ ಕಲಾತಂಡ
ಮಂಗಳೂರು ದಸರಾ ಮೆರವಣಿಗೆ ಯಲ್ಲಿ ಈ ಬಾರಿ ಸ್ತಬ್ಧ ಚಿತ್ರಗಳ ಜತೆಗೆ ರಾಜ್ಯದ 30 ಜಿಲ್ಲೆಗಳಿಂದ ವಿವಿಧ ಕಲಾತಂಡಗಳು ಕೂಡ ಭಾಗವಹಿಸಲಿವೆ. ಈ ಮೂಲಕ ರಾಜ್ಯದ ಎಲ್ಲ ಕಲಾಪ್ರಕಾರಗಳು ದಸರಾ ಮೆರವಣಿಗೆಯಲ್ಲಿ ಸಂಗಮಿಸಲಿವೆ. ವೇದಕುಮಾರ್ ಮೆರವಣಿಗೆಯನ್ನು ಸಂಘಟಿಸ ಲಿದ್ದು, 75ಕ್ಕೂ ಅಧಿಕ ಕಲಾ ತಂಡಗಳು, ಸ್ತಬ್ಧಚಿತ್ರಗಳು ಇರಲಿವೆ. ನಗರವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸುವಂತೆ ವಿನಂತಿಸ ಲಾಗಿದ್ದು, ಸರ್ವರೂ ಸ್ಪಂದಿಸು ತ್ತಿದ್ದಾರೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.