ಕುಮ್ಕಿ ಹಕ್ಕು ಈಗಲೂ ಕೃಷಿಕರು ಅತಂತ್ರ

Team Udayavani, Jul 23, 2017, 8:45 AM IST

raita.jpg

ವಿಶೇಷ ವರದಿ

ಪುತ್ತೂರು: ಒಂದೂವರೆ ಶತಮಾನದಿಂದ ಅವಿಭಜಿತ ಜಿಲ್ಲೆಯ 4.38 ಲಕ್ಷ ಕೃಷಿಕರ ಅನುಭೋಗದಲ್ಲಿರುವ ಕುಮ್ಕಿ ಭೂಮಿಯ ಹಕ್ಕು ನೀಡುವ ಸಂಬಂಧ ಆ. 23ರೊಳಗೆ ಕೋರ್ಟ್‌ಗೆ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

ಅವಿಭಜಿತ ದ.ಕ.ದಲ್ಲಿ 4.38 ಲಕ್ಷ ಮಂದಿ 2.15 ಲಕ್ಷ ಎಕ್ರೆ ಕುಮ್ಕಿ ಭೂಮಿ ಹೊಂದಿ ದ್ದಾರೆ. 9.2 ಲಕ್ಷ ಪಹಣಿ ಪತ್ರಗಳಿವೆ ಎನ್ನು ತ್ತದೆ  ಅಂದಾಜು ಅಂಕಿ- ಅಂಶ. 2011ರಲ್ಲಿ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ದ.ಕ.ದಲ್ಲಿ 2.86 ಲಕ್ಷ ಕುಮ್ಕಿದಾರರಿದ್ದಾರೆ.

ಒಂದು ವೇಳೆ ಸರಕಾರ ಕುಮ್ಕಿ ಹಕ್ಕು ರೈತರಿಗೆ ನೀಡಿದರೆ ಅದರಿಂದ ಸರಕಾರಕ್ಕೂ ಆದಾಯವಿದೆ. ಕುಮ್ಕಿದಾ ರನಿಗೆ ತಲಾ 5 ಎಕ್ರೆ ಅಥವಾ 100 ಗಜ ಮಿತಿಯಲ್ಲಿ ಅದರ ಹಕ್ಕು ನೀಡಿದರೆ ಸರಕಾರಕ್ಕೆ ವಾರ್ಷಿಕ 1,400 ಕೋಟಿ ರೂ. ಹೆಚ್ಚುವರಿ ಭೂ ಕಂದಾಯ ಸಿಗುತ್ತದೆ. 5 ಎಕ್ರೆಗಿಂತ ಹೆಚ್ಚುವರಿ ಕುಮ್ಕಿ ಭೂಮಿ ನೀಡುವುದಾದರೆ, ಆತ ಕಟ್ಟುವ ವಾರ್ಷಿಕ ಭೂ ಕಂದಾಯದ 500 ಪಟ್ಟು ಹೆಚ್ಚು ದಂಡ ವಿಧಿಸಬಹುದು. ಆದರೂ ಸರಕಾರಗಳು ಆಸಕ್ತಿ ವಹಿಸುತ್ತಿಲ್ಲ ಎನ್ನುತಾರೆ ನಾಗರಿಕರು.

ಅವಿಭಜಿತ ಜಿಲ್ಲೆ ಭತ್ತ ಪ್ರಧಾನ ಪ್ರದೇಶವಾಗಿತ್ತು. ಕೃಷಿಗೆ ಬೇಕಾದ ಸೊಪ್ಪು ಕಡಿಯಲೆಂದೇ ಬ್ರಿಟಿಷ್‌ ಸರಕಾರ ವರ್ಗದ ಪಕ್ಕದಲ್ಲಿ ಕುಮ್ಕಿ ಸವಲತ್ತು ನೀಡಿತ್ತು. ಆದರೆ ಭೂಮಿ ಹಕ್ಕು ನೀಡಿರಲಿಲ್ಲ. 

1885 ರ ಮಾರ್ಚ್‌ 10ರಿಂದ ಕುಮ್ಕಿ ಹಕ್ಕು ಉಡುಪಿ, ದ.ಕ. ಭಾಗದಲ್ಲಿ ನೀಡಲಾ ಗಿದೆ. ವರ್ಗಕ್ಕೆ ಲಗ್ತಿàಕರಿಸಿದ ಕುಮ್ಕಿಯನ್ನು ಹಕ್ಕಾಗಿ ನೀಡಬೇಕೆಂಬುದು ಕುಮ್ಕಿ ಹಕ್ಕು ಪರ ಹೋರಾಟಗಾರರ ಆಗ್ರಹ. ಆದರೆ ಈ ವಾದಕ್ಕೆ ಸರಕಾರ ಇನ್ನೂ ಮನ್ನಣೆ ನೀಡಿಲ್ಲ. ಪರಿಣಾಮ ಹೋರಾಟಗಾರರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.

1905ರಲ್ಲಿ ಮೊದಲ ಬಾರಿಗೆ ಸಮಗ್ರ ಭೂಮಿ ಅಳತೆ ಪ್ರಕ್ರಿಯೆ ನಡೆದಿತ್ತು. ಸರಕಾರಿ, ಖಾಸಗಿ, ಅರಣ್ಯ, ಕುಮ್ಕಿ ಇತ್ಯಾದಿಗಳನ್ನು ವರ್ಗೀಕರಿಸಲಾಗಿತ್ತು. 1934ರಲ್ಲಿ ಎರಡನೇ ಸರ್ವೆ ನಡೆಯಿತು. ಪ್ರತೀ 30 ವರ್ಷಕ್ಕೊಮ್ಮೆ ಸರ್ವೆ ಮಾಡಬೇಕೆಂದು 1886ರ ಭೂ ಕಂದಾಯ ಕಾನೂನು ಹೇಳಿತ್ತಾದರೂ 1934ರ ಅನಂತರ ಆಗಿಲ್ಲ ಎನ್ನಲಾಗಿದೆ.

ನ್ಯಾಯಾಲಯಕ್ಕೆ ಮೊರೆ
2016ರ ಜನವರಿ 25ರಂದು ಭಾರತೀಯ ಕಿಸಾನ್‌ ಸಂಘ ಹೈಕೋರ್ಟ್‌ ನಲ್ಲಿ ಕುಮ್ಕಿದಾರರ ಪರ ದಾವೆ ಮಂಡಿಸಿತ್ತು. 2017ರ ಮೇ 25ರಂದು ಯಥಾಸ್ಥಿತಿ ಆದೇಶ ನೀಡಿ ರುವ ಕೋರ್ಟ್‌ ಸರಕಾರದ ಉತ್ತರ ಕೇಳಿತ್ತು. ಸರಕಾರಿ ನ್ಯಾಯವಾದಿಗಳು ಜೂ. 23ರಂದು 2 ತಿಂಗಳ ಸಮಯ ಕೇಳಿದ್ದರು. ಈಗಿನ ಸರಕಾರ ಕುಮ್ಕಿ ಹಕ್ಕು ನೀಡುವ ವಿಚಾರದಲ್ಲಿ ಯಾವ ನಿರ್ಧಾರ ತಳೆಯಲಿದೆ ಎಂಬುದು ಆಗಸ್ಟ್‌ 23ರೊಳಗೆ ಬಹಿರಂಗಗೊಳ್ಳಲಿದೆ.

ಈ ಮಧ್ಯೆ 1905ರಿಂದ 2004ರ ವರೆಗೆ ತೀರುವೆ ಕಟ್ಟಿದ ರಶೀದಿಗಳನ್ನು ಸುಳ್ಯದ 21 ಗ್ರಾಮಗಳ ರೈತರು ಹೈಕೋರ್ಟ್‌ಗೆ ದಾಖಲೆ ಸಲ್ಲಿಸಿದ್ದಾರೆ. ಇದು ನ್ಯಾಯಾಲಯದ ವಿಚಾರಣೆ ಸಂದರ್ಭ ಮಹತ್ವದ ದಾಖಲೆಯಾಗಬಹುದು ಎನ್ನಲಾಗಿದೆ.

ಟಾಪ್ ನ್ಯೂಸ್

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Dangerous Stunt: ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ರೀಲ್ಸ್…

Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

3-ptr

Puttur: ಪೆನ್‌ ಪಾಯಿಂಟ್‌ ಕ್ರಿಕೆಟ್‌: ಸತತ 2ನೇ ಬಾರಿ ಬ್ಲೂ ಹಂಟರ್ಸ್‌ ಚಾಂಪಿಯನ್ಸ್‌

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.