ಹಚ್ಚ ಹಸುರಿನಿಂದ ರೂಪುಗೊಂಡಿದೆ ವಿಶ್ರಾಂತಿ ತಾಣ
ಕುರುಂಜಿಗುಡ್ಡೆ ಉದ್ಯಾನ: ಹೊಸತನದೊಂದಿಗೆ ಆಕರ್ಷಣೀಯ
Team Udayavani, Feb 8, 2022, 5:42 PM IST
ವಿಶೇಷ ವರದಿ- ಸುಳ್ಯ: ಸುತ್ತಲಿನ ಹಚ್ಚ ಹಸುರಿನ ಪ್ರಕೃತಿಯ ರಮಣೀಯತೆ, ತೋಟಗಳ ಸೌಂದರ್ಯ ರಾಶಿ. ಜತೆಗೆ ನಗರದ ವಿಹಂ ಗಮ ನೋಟ ಹೊಂದಿರುವ ಸುಳ್ಯ ನಗರದ ಅತೀ ಎತ್ತರದ ಕುರುಂಜಿಗುಡ್ಡೆ ಉದ್ಯಾನ ಹೊಸತನದೊಂದಿಗೆ ಕಂಗೊ ಳಿಸುತ್ತಿದ್ದು, ಜನತೆಯನ್ನು ಕೈ ಬೀಸಿ ಕರೆಯುತ್ತಿದೆ.
ಸದಾ ಕೆಲಸಗಳ ಒತ್ತಡದ ಮಧ್ಯೆ ಮನಃಶಾಂತಿಗಾಗಿ ಪೇಟೆಯ ಜನತೆ ಪ್ರಕೃತಿ ಸೌಂದರ್ಯ ಸವಿಯಲು ಇಂತಹ ಪ್ರದೇಶಗಳನ್ನು ಅರಸುತ್ತಾ ಹೋಗುವುದು ಸಾಮಾನ್ಯ. ಇದೀಗ ಸುಳ್ಯದ ಜನತೆಗೂ ಇಂತಹ ಅವಕಾಶವನ್ನು ಸುಳ್ಯದ ಸ್ಥಳೀಯ ಆಡಳಿತ ಒದಗಿಸಿದೆ.
ದೂರವಾದ ಕೊರಗು:
ಸುಳ್ಯ ನಗರಕ್ಕೆ ಎಲ್ಲವೂ ಇದ್ದರೂ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಲು, ನಾಲ್ಕು ಹೆಜ್ಜೆ ನಡೆದಾಡಲು ಒಂದು ಒಳ್ಳೆಯ ಉದ್ಯಾನವನ ಇಲ್ಲ ಎಂಬ ಕೊರಗು ಹಲವು ವರ್ಷಗಳಿಂದ ಇಲ್ಲಿನ ಜನತೆಯನ್ನು ಕಾಡಿತ್ತು. ಹಲವು ವರ್ಷಗಳ ಯೋಚನೆ, ಯೋಜನೆಯ ಬಳಿಕ ಚೊಕ್ಕದಾದ ಉದ್ಯಾನವೊಂದು ಕುರುಂಜಿಗುಡ್ಡೆಯ ನೆತ್ತಿಯಲ್ಲಿ ತಲೆ ಎತ್ತಿದೆ.
ಸುಳ್ಯ ನಗರ ಪಂಚಾಯತ್ ವತಿಯಿಂದ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನ ರೂಪುಗೊಂಡಿದೆ. ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ಮರ, ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ.
ಹುಲ್ಲು ಹಾಸು, ಹಲವು ವಿಧದ ಗಿಡಗಳನ್ನು ಬೆಳೆಸಿ ಹಸುರು ಲೋಕ ಸೃಷ್ಟಿಸಲಾಗಿದೆ. ಪಾರ್ಕ್‌ನಲ್ಲಿ ಕುಳಿತುಕೊಳ್ಳಲು ಬೆಂಚ್‌ಗಳು, ನಡೆದಾಡಲು ಪಥ ಗಳನ್ನು ನಿರ್ಮಿಸಲಾಗಿದೆ. ರಕ್ಷಣಾ ಬೇಲಿಗಳನ್ನು ಅಳವಡಿಸಲಾಗಿದೆ.
ಪಾರ್ಕ್‌ನ ಮಧ್ಯೆ ಅಲ್ಲಲ್ಲಿ ಇಂಟರ್ ಲಾಕ್ ಅಳವಡಿಸಲಾಗಿದೆ. ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಮಕ್ಕಳಿಗಾಗಿ ಪ್ರತ್ಯೇಕ ಪಾರ್ಕ್ ಮಾಡಲಾಗಿದೆ. ಇಲ್ಲಿ ಉಯ್ನಾಲೆ, ಜಾರುಬಂಡಿ, ತಿರುಗು ಬಂಡಿ ಮತ್ತಿತರ ಆಡುವ ವ್ಯವಸ್ಥೆಗಳನ್ನು ಒದಗಿಸಲಾಗಿದೆ.
ಆಗಬೇಕಿದೆ ಅಭಿವೃದ್ಧಿ
ಪಾರ್ಕ್ ಪೂರ್ಣಗೊಳ್ಳಲು ಇನ್ನೂ ಕೆಲವು ಕಾಮಗಾರಿಗಳು ಆಗಬೇಕಾಗಿದ್ದು, ಪಾರ್ಕ್‌ಗೆ ಸೋಲಾರ್ ದೀಪ, ಒಳಾಂಗಣ ಕ್ರೀಡಾಂಗಣದ ಕೆಳಭಾಗಲ್ಲಿ ವಾಕಿಂಗ್ ಪಾತ್ ನಿರ್ಮಾಣ, ಪಾರ್ಕ್ ಮುಂಭಾಗದಲ್ಲಿ ಕಮಾನು ನಿರ್ಮಾಣ ಮತ್ತಿತರ ಕೆಲವು ಕಾಮಗಾರಿಗಳು ಆಗಬೇಕಿದೆ.
ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿಯೂ ಉತ್ತಮ ಪಾರ್ಕ್ ನಿರ್ಮಾಣವಾಗಲಿದ್ದು, ಸುತ್ತಲೂ ಬೆಂಚ್ ನಿರ್ಮಿಸಿ, ಹುಲ್ಲು ಹಾಸು ಹಾಕಿ ಪಾರ್ಕ್ ಮಾಡಿ ಮಧ್ಯದಲ್ಲಿ ಒಂದು ಚಿಮ್ಮುವ ಕಾರಂಜಿ ಮಾಡುವ ಬಗ್ಗೆ ಯೋಚನೆ ಇದೆ ಎಂದು ಆಡಳಿತ ಹೇಳಿದೆ.
ಸಿಬಂದಿ ನಿಯೋಜನೆ
ಕುರುಂಜಿಗುಡ್ಡೆ ಪಾರ್ಕ್ ವಿರಾಮದ ವೇಳೆ ಯನ್ನು ಕಳೆಯಲು, ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳ. ವಾಕಿಂಗ್ ಮಾಡುವವರಿಗೂ ಅನುಕೂಲವಾಗಲಿದೆ. ಕೆಲವು ಕೆಲಸಗಳು ಬಾಕಿ ಇದೆ. ಪಾರ್ಕ್ ಅನ್ನು ನಿರ್ವಹಣೆ ಮಾಡಲು ಸಿಬಂದಿ ನಿಯೋಜನೆ ಮಾಡಲಾಗುವುದು.
-ವಿನಯ ಕುಮಾರ್ ಕಂದಡ್ಕ,
ಅಧ್ಯಕ್ಷರು, ನಗರ ಪಂಚಾಯತ್ ಸುಳ್ಯ
ಅಭಿವೃದ್ಧಿ ಯೋಜನೆೆ
ಕುರುಂಜಿಗುಡ್ಡೆಯಲ್ಲಿ ಲಭ್ಯವಿರುವ ಸ್ಥಳವನ್ನು ಬಳಸಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಯೋಜನೆ ರೂಪಿಸಲಾಗುವುದು.
-ಶಿವಕುಮಾರ್,
ಇಂಜಿನಿಯರ್, ನಗರ ಪಂಚಾಯತ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.