ಕುಟ್ರಾಪ್ಪಾಡಿ ಪಂಚಾಯತ್ ವ್ಯಾಪ್ತಿ: ಅಗ್ನಿಶಾಮಕ ಠಾಣೆ ತೆರೆಯಲು ಆಗ್ರಹ
Team Udayavani, Feb 22, 2017, 2:54 PM IST
ಕುಟ್ರಾಪ್ಪಾಡಿ: ಕುಟ್ರಾಪ್ಪಾಡಿ ಹಾಗೂ ಬಲ್ಯ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಕುಟ್ರಾಪ್ಪಾಡಿ ಗ್ರಾ.ಪಂ.ನ ಗ್ರಾಮಸಭೆಯು ಹೊಸಮಠದಲ್ಲಿರುವ ಕುಟ್ರಾಪ್ಪಾಡಿ ಉನ್ನತ ಹಿ.ಪ್ರಾ. ಶಾಲೆಯ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರಗಿತು. ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ ಅವರು ಚರ್ಚಾ ನಿಯಂತ್ರಣಾಧಿಕಾರಿಯಾಗಿ ಪಾಲ್ಗೊಂಡರು.
ಅಗ್ನಿಶಾಮಕ ಠಾಣೆಗೆ ಒತ್ತಾಯ
ಈಗಾಗಲೇ ತಾಲೂಕು ಕೇಂದ್ರವಾಗಿ ಘೋಷಿಸಲ್ಪಟ್ಟಿರುವ ಕಡಬಕ್ಕೆ ಅಗ್ನಿಶಾಮಕ ಠಾಣೆ ಮಂಜೂರುಗೊಳಿಸಬೇಕೆಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು. ಕಡಬ ಪರಿಸರದಲ್ಲಿ ಬೆಂಕಿ ಆಕಸ್ಮಿಕ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ದೂರದ ಪುತ್ತೂರಿನಿಂದ ಆಗ್ನಿಶಾಮಕ ವಾಹನ ತಲುಪುವಾಗ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ ಎಂದ ಗ್ರಾಮಸ್ಥರು ಈ ಕುರಿತು ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಬಳಿಕ ಈ ಕುರಿತು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಹಕ್ಕುಪತ್ರಕ್ಕಾಗಿ ಅಲೆದಾಡಿಸದಿರಿ
ಕಂದಾಯ ಇಲಾಖಾ ಮಾಹಿತಿ ವೇಳೆ ಮಧ್ಯೆಪ್ರವೇಶಿಸಿ ಮಾತನಾಡಿದ ಗ್ರಾಮಸ್ಥರು 94 ಸಿ ಯೋಜನೆಯಡಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದವರನ್ನು ಕಂದಾಯ ಇಲಾಖೆಯವರು ವಿನಾ ಕಾರಣ ಅಲೆದಾಡಿಸುತ್ತಾರೆ ಎಂದು ದೂರಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯವರನ್ನು ಕರೆಸಿ ಒಂದೇ ದಿನ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆ ಮಾಡಿದರೆ ಸಮಸ್ಯೆ ತಪ್ಪಲಿದೆ ಎಂದರು.
ಜಾಗ ನೀಡುವುದಕ್ಕೆ ವಿರೋಧ
ಕುಟ್ರಾಪ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿನ ಗೋಮಾಳ ಜಾಗವನ್ನು ಕಡಬ ಹಾಲು ಉತ್ಪಾದಕರ ಸಂಘಕ್ಕೆ ನೀಡುವ ಕುರಿತು ಕಳೆದ ಗ್ರಾಮಸಭೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಅದು ಯಾವ ಹಂತದಲ್ಲಿದೆ ಎಂದು ಗ್ರಾ.ಪಂ.ಮಾಜಿ ಸದಸ್ಯೆ ಎಲ್ಸಿ ತೋಮಸ್ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪಿಡಿಒ ವಿಲ್ಫೆಡ್ ಲಾರೆನ್ಸ್ ರೋಡ್ರಿಗಸ್ ಅವರು, ಈ ಕುರಿತು ನಿರ್ಣಯ ಕೈಗೊಂಡು ಕಂದಾಯ ಇಲಾಖೆಗೆ ಬರೆಯಲಾಗಿದೆ ಎಂದು ಹೇಳಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಡಬ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ ಅವರು ಅಮೈ ಗೋಮಾಳ ಜಾಗ ಕುಟ್ರಾಪ್ಪಾಡಿ ಗ್ರಾಮದ ವ್ಯಾಪ್ತಿಯಲ್ಲಿದ್ದರೂ ಕೆಎಂಎಫ್ ಪ್ರಕಾರ ಕಡಬ ಹಾಲು ಸೊಸೈಟಿಯ ಕಾರ್ಯವ್ಯಾಪ್ತಿಗೆ ಬರುತ್ತದೆ. ನಾವು ಯಾವುದೇ ದುರುದ್ದೇಶದಿಂದ ಜಾಗ ಕೇಳುತ್ತಿಲ್ಲ. ಜಾನುವಾರುಗಳಿಗೆ ಹಸಿರುಮೇವು ಬೆಳೆಸಲು ಜಾಗ ಕೇಳುತ್ತಿರುವುದು ಎಂದು ಹೇಳಿದರು. ಬಳಿಕ ಜಯಚಂದ್ರ ರೈ ಅವರ ಆಗ್ರಹದಂತೆ ಬಲ್ಯ ಗ್ರಾಮದಲ್ಲಿ ಗೋಮಾಳ ಜಾಗವಿದ್ದರೆ ಅದನ್ನು ಗುರುತಿಸಿ ಗ್ರಾ.ಪಂ.ನ ವಶಕ್ಕೆ ಪಡೆದುಕೊಳ್ಳುವುದೆಂದು ನಿರ್ಣಯಿಸಲಾಯಿತು.
ಭೂಮಾಪನಾ ಇಲಾಖೆ ಸಹಕರಿಸುತ್ತಿಲ್ಲ
ಗ್ರಾ.ಪಂ. ವ್ಯಾಪ್ತಿಯಲ್ಲಿನ ರಸ್ತೆಗಳನ್ನು ಗುರುತಿಸಿ ಅಳತೆ ಮಾಡಿ ಗಡಿ ಗುರುತಿಸುವಂತೆ ಭೂ ಮಾಪನಾ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಭೆಯಲ್ಲಿ ಆರೋಪ ವ್ಯಕ್ತವಾಯಿತು. ರಸ್ತೆಗಳನ್ನು ಅಳತೆ ಮಾಡಿಕೊಡಲು ಪುನಃ ಭೂಮಾಪನಾ ಇಲಾಖೆಗೆ ಬರೆಯುವುದೆಂದು ನಿರ್ಣಯ ಕೈಗೊಳ್ಳಲಾಯಿತು.
ಶಾಲೆಗೆ ಸೇರಿಸುವಾಗ ಎಚ್ಚರ
ಶಿಕ್ಷಣ ಇಲಾಖೆಯ ವತಿಯಿಂದ ಮಾಹಿತಿ ನೀಡಿದ ಕಡಬ ಕ್ಲಸ್ಟರ್ ಮುಖ್ಯಸ್ಥ ಕುಮಾರ್ ಅವರು ಮಾತನಾಡಿ, ಜನರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವುದಾದರೆ 5 ವರ್ಷ 10 ತಿಂಗಳು ತುಂಬಿದ ಮೇಲೆಯೇ ಮಕ್ಕಳನ್ನು 1ನೇ ತರಗತಿ ದಾಖಲಿಸಿಕೊಳ್ಳುವಂತೆ ಸರಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ. ಹಾಗೆಯೇ ಎಲ್‌ಕೆಜಿಗೆ 3 ವರ್ಷ 10 ತಿಂಗಳು ಹಾಗೂ ಯುಕೆಜಿಗೆ ಸೇರಿಸಲು 4 ವರ್ಷ 10 ತಿಂಗಳು ಭರ್ತಿಯಾಗಿರಬೇಕು. ಗಮನಿಸದಿದ್ದರೆ ಸಮಸ್ಯೆಯಾಗಬಹುದು ಎಂದರು.
ಜನಪ್ರತಿನಿಧಿಗಳಿಗೆ ಬೆಲೆ ಇಲ್ಲ
ಕಂದಾಯ ಇಲಾಖೆಯಲ್ಲಿನ ಕೆಲಸಗಳಿಗಾಗಿ ಕಡಬ ವಿಶೇಷ ತಹಶೀಲ್ದಾರ್ ಕಚೇರಿಗೆ ಹೋದರೆ ಅಲ್ಲಿನ ಕೆಲವು ಸಿಬಂದಿಗಳು ಜನಪ್ರತಿನಿಧಿಗಳಿಗೆ ಸ್ವಲ್ಪವೂ ಗೌರವ ನೀಡುವುದಿಲ್ಲ. ನೀವು ಯಾರು ಎಂದು ಪ್ರಶ್ನಿಸುತ್ತಾರೆ ಎಂದು ತಾ.ಪಂ. ಸದಸ್ಯೆ ಕೆ.ಟಿ.ವಲ್ಸಮ್ಮ ಅವರು ಬೇಸರ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ತಮ್ಮ ಪರಿಚಯ ಮಾಡಿಕೊಂಡು ಮುಂದುವರಿದರೆ ಈ ಸಮಸ್ಯೆಯನ್ನು ತಡೆಯಬಹುದು ಎನ್ನುವ ಅಭಿಪ್ರಾಯ ಎಲ್ಲಾ ಸದಸ್ಯರಿಂದಲೂ ವ್ಯಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.