ಕುವೆಟ್ಟು: ರಸ್ತೆ ಬದಿಗಳಲ್ಲೇ ಕೋಳಿ ತ್ಯಾಜ್ಯ; ಸ್ಥಳೀಯರ ಆತಂಕ
Team Udayavani, Apr 27, 2019, 6:00 AM IST
ಬೆಳ್ತಂಗಡಿ: ಗುರುವಾಯನಕೆರೆ ಸಹಿತ ಕುವೆಟ್ಟು ಗ್ರಾಮದ ಕೆಲವು ಪ್ರದೇಶದ ರಸ್ತೆ ಬದಿಗಳಲ್ಲಿ ಕಿಡಿಗೇಡಿಗಳು ಕೋಳಿ ತ್ಯಾಜ್ಯಗಳನ್ನು ಎಸೆಯುತ್ತಿದ್ದು, ಅದು ದುರ್ನಾತ ಬೀರುವ ಜತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ಸ್ಥಳೀಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾಯನಕೆರೆ ಪೇಟೆಯ ಸೇತುವೆ ಕೆಳಗೆ ಕೋಳಿ ತ್ಯಾಜ್ಯವನ್ನು ರಾತ್ರಿ ಸಮಯದಲ್ಲಿ ತಂದು ಹಾಕಲಾಗುತ್ತಿದೆ. ಪಿಲಿಚಾಮುಂಡಿಕಲ್ಲು, ವರಕಬೆ, ಮದ್ದಡ್ಕ ಸಮೀಪದ ಸುಂಟಾನ್‌ಗುರಿ, ಸಬರಬೈಲು ಶಾಲಾ ಬಲಿ ಮತ್ತು ಮದ್ದಡ್ಕ ಅಲಂದಿಲ-ಸಬರಬೈಲು ಸಂಪರ್ಕ ರಸ್ತೆಯ ಬದಿಯಲ್ಲಿ ದಿನನಿತ್ಯ ತ್ಯಾಜ್ಯ ಎಸೆಯಲಾಗುತ್ತಿದೆ ಎಂಬ ಆರೋಪವಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ತೆರಳುವ ವಾಹನದವರು, ಪಾದಚಾರಿಗಳು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಕೋಳಿ ಫಾರ್ಮ್ಗಳನ್ನು ನಡೆಸುತ್ತಿರುವವರು ಹಾಗೂ ಮಾರಾಟ ಅಂಗಡಿಗಳನ್ನು ಹೊಂದಿರುವವರು ತ್ಯಾಜ್ಯವನ್ನು ಸೂಕ್ತವಾಗಿ ಸ್ವಂತ ಜಾಗದಲ್ಲಿ ವಿಲೇ ಮಾಡಬೇಕು ಎಂಬ ನಿಯಮವಿದ್ದರೂ ಕೆಲವರು ಅದನ್ನು ಗಾಳಿಗೆ ತೂರುತ್ತಿದ್ದಾರೆ ಎಂಬ ಆರೋಪವಿದೆ.
ಈ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾ.ಪಂ. ಕ್ರಮ ಕೈಗೊಂಡು ಇಂತಹ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.