ಕೆವಿಜಿ ಸುಳ್ಯ ಹಬ್ಬ ಸಮಾರೋಪ
Team Udayavani, Dec 28, 2017, 5:01 PM IST
ಸುಳ್ಯ: ಸುಳ್ಯದ ಆಧುನಿಕ ನಿರ್ಮಾತೃ ಡಾ| ಕುರುಂಜಿ ವೆಂಕಟ್ರಮಣ ಗೌಡರ 89ನೇ ಜಯಂತ್ಯುತ್ಸವ ಪ್ರಯುಕ್ತ ಜರಗಿದ ಕೆವಿಜಿ ಸುಳ್ಯ ಹಬ್ಬದ ಸಮಾರೋಪ ಜರಗಿತು. ಧಾರವಾಡ ಕಾನೂನು ವಿವಿಯ ನಿವೃತ್ತ ಉಪಕುಲಪತಿ ಡಾ| ಟಿ.ಆರ್. ಸುಬ್ರಹ್ಮಣ್ಯ ಹಾಗೂ ಖ್ಯಾತ ಸಾಹಿತಿ, ಅಂಕಣಕಾರ ಮತ್ತು ಶಿಕ್ಷಣ ತಜ್ಞ ಪ್ರೊ| ಡಾ| ರೆ. ಫಾ.ಪ್ರಶಾಂತ್ ಮಾಡ್ತ ಅವರಿಗೆ ‘ಕೆವಿಜಿ ಸಾಧನಾ ಶ್ರೀ’ ಪ್ರಶಸ್ತಿ ಪ್ರದಾನಿಸಲಾಯಿತು.
ತೃಪ್ತಿ, ಮಾನವೀಯ ಗುಣ ಅಗತ್ಯ: ಹೆಗ್ಡೆ
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಇಂದು ಸಾಂವಿಧಾನಿಕ ಅಂಗಗಳು ಮತ್ತು ಮಾಧ್ಯಮ ಸಂ¤ಭ ದುರ್ಬಲವಾಗಿವೆ. ಸಮಾಜ ಬದಲಾವಣೆ ಕ್ರಾಂತಿಯಿಂದಲ್ಲ, ಶಾಂತಿ ಮಾರ್ಗದ ಮೂಲಕ ನಡೆಯಬೇಕು. ಕ್ರಾಂತಿಯಿಂದ ಮದ್ಯಮ ವರ್ಗಕ್ಕೆ ಹೊಡೆತ ಬೀಳುವುದು. ಅದಕ್ಕಾಗಿ ಯುವಜನತೆಯಲ್ಲಿ ತೃಪ್ತಿ ಮತ್ತು ಮಾನವೀಯ ಗುಣವನ್ನು ಬೆಳೆಸಬೇಕಾಗಿದೆ ಎಂದರು. ಪ್ರಾಮಾಣಿಕರ ಬಗ್ಗೆ ನಂಬಿಕೆ ಇಲ್ಲವಾಗಿದೆ. ಓದು, ಶ್ರೀಮಂತ ಎಂಬ ಹಲವಾರು ಬಯಕೆಗಳು ತಪ್ಪಲ್ಲ. ಶ್ರೀಮಂತಿಕೆಯೂ ಕಾನೂನು ಚೌಕಟ್ಟಿನೊಳಗಿರಬೇಕು. ಅನ್ಯರ ಹೊಟ್ಟೆ, ಜೇಬಿಗೆ ಕೈಹಾಕಿ ಕಿತ್ತುಕೊಳ್ಳುವುದು ನಿಜವಾದ ಸಂಪತ್ತಲ್ಲ ಎಂದರು.
ಸಮಾಜ ಕಲ್ಯಾಣ ಇಲಾಖಾಧಿಕಾರಿ ಚಂದ್ರಶೇಖರ ಪೇರಾಲು ಕೆವಿಜಿ ಸಂಸ್ಮರಣ ಭಾಷಣ ಮಾಡಿದರು. ಹಬ್ಟಾ ಚರಣೆ ಸಮಿತಿಯ ಗೌರವಾಧ್ಯಕ್ಷ ಡಾ| ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಚಾಲಕ ಸಂತೋಷ ಮಡ್ತಿಲ, ಕೆ.ವಿ. ಹೇಮನಾಥ, ಪುರುಷೋತ್ತಮ ಕಿರ್ಲಾಯ, ಮೀನಾಕ್ಷಿ ಗೌಡ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಕೆ.ಆರ್. ಗಂಗಾಧರ ಸ್ವಾಗತಿಸಿದರು. ಪ್ರದೀಪ್‌ಕುಮಾರ್ ಪನ್ನೆ ನಿರೂಪಿಸಿದರು. ಪೂರ್ಣಿಮಾ ಮಡಪ್ಪಾಡಿ ಪ್ರಾರ್ಥಿಸಿದರು. ವಕೀಲರಾದ ನಳಿನ್‌ಕುಮಾರ್ ಕೋಡ್ತುಗುಳಿ ಹಾಗೂ ದಿನೇಶ್ ಮಡಪ್ಪಾಡಿ ಅವರು ಸಮ್ಮಾನ ಪತ್ರ ವಾಚಿಸಿದರು. ಬಳಿಕ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.
ಕುರುಂಜಿ ಕೊಡುಗೆ ಅಪಾರ
ಆಶೀರ್ವಚನ ನೀಡಿದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಮಾತನಾಡಿ, ದುರ್ಜನರ ಸಕ್ರಿಯತೆ ಮತ್ತು ಸಜ್ಜನರ ನಿಷ್ಕ್ರಿಯತೆ ಸಮಾಜಕ್ಕೆ ಎರಡೂ ಅಪಾಯಕಾರಿ. ಸಜ್ಜನರು ಸಕ್ರಿಯರಾಗಿ ಕಾರ್ಯಪ್ರವೃತ್ತರಾದಾಗ ಡಾ| ಕುರುಂಜಿ ಅವರಂತಹ ಸಾಧನೆ ಸಾಧ್ಯವಿದೆ. ಕುರುಂಜಿ ಅವರಿಗೆ ಸಮಾಜಮುಖಿ ಚಿಂತನೆ ಇದ್ದುದರಿಂದಲೇ ಬೃಹತ್ ಮಟ್ಟ ದಲ್ಲಿ ಅಭಿವೃದ್ಧಿಯ ಸಾಧನೆಗಳಾದವು. ಅವರು ಸುಳ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರಲ್ಲಿ ಸಮಾಜದ ಎಲ್ಲರನ್ನೂ ಪ್ರೋತ್ಸಾಹಿಸಿ ಬೆಳೆಸುವ ಗುಣವಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…
Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.