ಕಿನ್ಯಾ: ಸಾಂತ್ಯದಲ್ಲಿ ಅಭಿವೃದ್ಧಿ ಮರೀಚಿಕೆ 


Team Udayavani, Aug 19, 2021, 3:50 AM IST

ಕಿನ್ಯಾ: ಸಾಂತ್ಯದಲ್ಲಿ ಅಭಿವೃದ್ಧಿ ಮರೀಚಿಕೆ 

ಸಾಂತ್ಯ ಸಂಪರ್ಕಿಸುವ ರಸ್ತೆಗೆ ಸೇತುವೆ ನಿರ್ಮಾಣವಾದರೆ ಇಡೀ ಗ್ರಾಮ ಅಭಿವೃದ್ಧಿಯಾದಂತಾಗುತ್ತದೆ. ಗ್ರಾಮದಲ್ಲಿ ನೀರಿನ ಸಮಸ್ಯೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ಇದ್ದು, ಇದನ್ನು ಪರಿಹರಿಸಬೇಕಿದೆ. ಈ ಬಗ್ಗೆ ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಸಂಬಂಧಪಟ್ಟವರನ್ನು ಗಮನಸೆಳೆಯಲು ಪ್ರಯತ್ನಿಸಲಾಗಿದೆ.

ಕಿನ್ಯಾ: ಕೃಷಿ ಪ್ರಧಾನ ಕಿನ್ಯಾ ಗ್ರಾಮವು ಕೇರಳಗಡಿ ಪ್ರದೇಶದೊಂದಿಗೆ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಸರಹದ್ದನ್ನು ಹೊಂದಿದೆ. ಕೋಟೆಕಾರು, ತಲಪಾಡಿ, ಮಂಜನಾಡಿ, ಕೊಣಾಜೆ ಗ್ರಾಮಗಳ ಗಡಿಯನ್ನು ಹೊಂದಿದೆ. ಶೇ. 70ರಷ್ಟು ಕೃಷಿ ಭೂಮಿಯನ್ನು ಹೊಂದಿರುವ ಕಿನ್ಯಾ ಗ್ರಾಮದ ಅಭಿವೃದ್ಧಿ ಮುಖ್ಯ ರಸ್ತೆ ಮತ್ತು ಅದಕ್ಕೆ ತಾಗಿಕೊಂಡಿರುವ ಒಳರಸ್ತೆಗಳಿಗೆ ಮಾತ್ರ ಸೀಮಿತವಾಗಿದೆ. ಗ್ರಾಮದಲ್ಲಿ ಈವರೆಗೆ ಅಭಿವೃದ್ಧಿ ಕಾಣದಿರುವ ಪ್ರದೇಶ ಇದ್ದರೆ ಸಾಂತ್ಯ ಮಾತ್ರ.

ಅತ್ಯಧಿಕ ಕೃಷಿಕರನ್ನು ಹೊಂದಿರುವ ಸಾಂತ್ಯದ ಜನರು ಬೇಸಗೆಯಲ್ಲಿ ತಾವೇ ನಿರ್ಮಿಸಿರುವ ಕಚ್ಛಾರಸ್ತೆಯಲ್ಲಿ ಸಂಚರಿಸುವ ಅನಿವಾರ್ಯ ಇದ್ದರೆ, ಮಳೆಗಾಲದಲ್ಲಿ ತಲಪಾಡಿ ಹೊಳೆ ಹರಿಯುವುದರಿಂದ ಈ ರಸ್ತೆ ಸಂಪೂರ್ಣ ಕೃತಕ ನೆರೆಗೆ ಒಳಗಾಗಿ ದ್ವೀಪದಲ್ಲಿ (ನಡುಗುಡ್ಡೆ) ವಾಸಿಸುವ ಭಾಗ್ಯ ಇಲ್ಲಿನ ಜನರದ್ದು.

10 ವರ್ಷಗಳಲ್ಲಿ ಕಿನ್ಯಾ ಗ್ರಾ.ಪಂ.ಹಲವಾರು ಕೋಟಿ ರೂ.ಗಳನ್ನು ವ್ಯಯಿಸಿ ಮೂಲ ಸೌಕರ್ಯ ಅಭಿವೃದ್ಧಿ ಕಂಡರೂ ಗ್ರಾಮದ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಮಾಧವಪುರದಿಂದ ಸಾಂತ್ಯ ಮಾರ್ಗವಾಗಿ ಕೇರಳ ಗಡಿಪ್ರದೇಶವಾದ ನೆತ್ತಿಲಪದವು ಸಂಪರ್ಕಿಸುವ ರಸ್ತೆಯನ್ನು ಸ್ಥಳೀಯ ಕೃಷಿಕರು ತಮ್ಮ ಸ್ವಂತ ಜಾಗವನ್ನು ಬಿಟ್ಟುಕೊಟ್ಟು ಕಚ್ಛಾ ರಸ್ತೆ ನಿರ್ಮಾಣ ಮಾಡಿ ಐದು ವರ್ಷಗಳಿಂದ ಸಾಂತ್ಯ ಬಳಿ ಹೊಳೆಗೆ ಸೇತುವೆ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿಗೆ ಬೇಡಿಕೆ ಇಟ್ಟರೂ ಈವರೆಗೆ ಈಡೇರಿಲ್ಲ.

ರಸ್ತೆ ನಿರ್ಮಾಣ ಅಗತ್ಯ

ಸಾಂತ್ಯ ಪ್ರದೇಶದ ಸುಮಾರು 250 ಕುಟುಂಬಗಳಿಗೆ ಅಭಿವೃದ್ಧಿ ಮರೀಚಿಕೆಯಾಗಿದೆ. ಮಳೆಗಾಲ ದಲ್ಲಿ ವಿದ್ಯಾರ್ಥಿಗಳು, ಆರೋಗ್ಯ, ಪೋಸ್ಟ್‌ ಆಫೀಸ್‌ ಸಹಿತ ದೈನಂದಿನ ಕಾರ್ಯಗಳಿಗೆ ವಾಹನ ಇಲ್ಲದವರು ಕೆಸರು ತುಂಬಿದ ನೀರಿನಲ್ಲಿ ಸಂಚರಿಸಿ ಮುಖ್ಯ ರಸ್ತೆ ತಲುಪುವ ಸ್ಥಿತಿಯಿದ್ದರೆ.

ವಾಹನವಿದ್ದವರು ಮೂರು ಕಿ.ಮೀ. ಬದಲು ನೆತ್ತಿಲಪದವು ಮಂಜೇಶ್ವರ ಗೇರುಕಟ್ಟೆ ರಸ್ತೆಯಾಗಿ 15 ಕಿ.ಮೀ. ಕ್ರಮಿಸಿ ಮಂಗಳೂರು ತಲುಪುವ ಸ್ಥಿತಿಯಿದೆ. ಸಾಂತ್ಯ ಭಾಗದ

ಹೆಚ್ಚಿನ ಕೃಷಿಕರು ವಲಸೆ ಹೋಗಿ ಮುಖ್ಯರಸ್ತೆ ಸಂಪರ್ಕಿಸುವ ಪ್ರದೇಶದಲ್ಲಿ ಮನೆ ಕಟ್ಟಿ ವಾಸಮಾ ಡುತ್ತಿದ್ದರೆ, ಬಡ ಕೃಷಿಕರು ಮಾತ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೆತ್ತಿಲಪದವು ಸಂಪರ್ಕಿಸುವ ಪಂಚಾಯತ್‌ ಹಿಂಭಾಗದ ರಹಮತ್‌ನಗರದಿಂದ ಕುರಿಯ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೂ ಬೇಡಿಕೆಯಿದ್ದು, ನಡುಪಡೆ ಬಳಿ ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆದಿದ್ದು, ಈ ವ್ಯಾಪ್ತಿಯಲ್ಲಿ ಒಂದು ಕಿ.ಮೀ. ರಸ್ತೆ ನಿರ್ಮಾಣವಾಗಬೇಕಾಗಿದೆ.

ಇತರ ಸಮಸ್ಯೆಗಳೇನು? :

  • ಕಿನ್ಯಾದ ಸಾಂತ್ಯ ಸಹಿತ ಅಷ್ಟೇ ಒಳರಸ್ತೆಗಳು ಅಭಿವೃದ್ಧಿಯಾಗಬೇಕಾಗಿದೆ.
  • ಕಿನ್ಯಾದಲ್ಲಿರುವ ಉಪ ಆರೋಗ್ಯ ಕೇಂದ್ರ ವಾರಕ್ಕೊಮ್ಮೆ ಜನರಿಗೆ ಸೇವೆ ನೀಡುತ್ತಿತ್ತು. ಕೋವಿಡ್‌ ಬಳಿಕ ಸಂಪೂರ್ಣ ಬಾಗಿಲು ಹಾಕಿದ್ದು ಜನರು ದೂರದ ಕೋಟೆಕಾರು ಅಥವಾ ನಾಟೆಕಲ್‌ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾಗಿದೆ.
  • ಗ್ರಾಮದಲ್ಲಿ ಎರಡು ಕಿರಿಯ, ಎರಡು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಪ್ರೌಢಶಾಲೆ, ಪದವಿಪೂರ್ವ ಶಾಲೆಗಳಿಗೆ ಬೇಡಿಕೆಯಿದೆ.

ಜ ಗ್ರಾಮದ ಅರ್ಧದಷ್ಟು ಪ್ರದೇಶದಲ್ಲಿ ಖಾಸಗಿಯಾಗಿ ಕಸ ವಿಲೇವಾರಿ ನಡೆದರೆ, ಉಳಿದ ಪ್ರದೇಶದಲ್ಲಿ ಕಸವಿಲೇವಾರಿ ಸಮಸ್ಯೆಯಿದೆ. ಈಗಾಗಲೇ ಕಸವಿಲೇವಾರಿಗೆ ಉಕ್ಕುಡ ಸಮೀಪದ ವಾದಿತೈಬಾ ಬಳಿ 50 ಸೆಂಟ್ಸ್‌ ಜಾಗ ಮೀಸಲಿಡಲಾಗದೆ. ಇಲ್ಲಿ ಅಂತಾರಾಜ್ಯ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಕಸ ಎಸೆಯುವ ಸಮಸ್ಯೆ ಇದ್ದರೆ ವಾದಿತೈಬಾ ಬಳಿ ನಿರ್ಜನ ಪ್ರದೇಶದಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಂಡರೂ ರಸ್ತೆ ಬದಿ ತ್ಯಾಜ್ಯ ಎಸೆಯುವವರ ಸಮಸ್ಯೆ ಮುಂದುವರಿದಿದೆ.

ಜ  ಈ ಪ್ರದೇಶದಲ್ಲಿ ಭಾಗಶಃ ಕುಡಿಯುವ ನೀರಿನ ಸಮಸ್ಯೆಯಿದ್ದು, ಮುಖ್ಯವಾಗಿ ನೆತ್ತಿಲ, ಮಿತ್ತಡದಲ್ಲಿ ಸಮಸ್ಯೆಯಿದೆ. ಜಲಜೀವನ್‌ ಮಿಷನ್‌ನಡಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಮೀಸಲಿಟ್ಟಿದ್ದು, ಮಂಗಳೂರು ವಿಧಾನಸಭೆ ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಈ ಗ್ರಾಮದಲ್ಲಿ ಟ್ಯಾಂಕ್‌ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ.

 

-ವಸಂತ ಎನ್‌. ಕೊಣಾಜೆ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.