ಪಿಲಿಕುಲ ನಿಸರ್ಗಧಾಮಕ್ಕೆ ಸಮರ್ಥ ನಿರ್ವಹಣೆಯ ಕೊರತೆ!
Team Udayavani, Mar 20, 2021, 4:40 AM IST
ಪಿಲಿಕುಳ: ಪ್ರವಾಸಿ ಗರನ್ನು ಆಕರ್ಷಿಸುವ ಕರಾವಳಿ ಭಾಗದಲ್ಲಿ ರುವ ಏಕೈಕ ಪಿಲಿಕುಲ ನಿಸರ್ಗಧಾಮವು ಇದೀಗ ನಿರ್ವ ಹಣೆಯ ಕೊರತೆ ಎದುರಿ ಸುತ್ತಿದ್ದು, ಸಂಬಂಧಪಟ್ಟ ಇಲಾಖೆಯು ಈ ದಿಕ್ಕಿನತ್ತ ಗಮನಹರಿಸಬೇಕಿದೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶುಕ್ರವಾರ ಪತ್ರ ಕರ್ತರು ಪಿಲಿಕುಳದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭ ನಿಸರ್ಗ ಧಾಮದಲ್ಲಿ ಕೆಲವೊಂದು ಕೊರತೆ ಇರುವುದು ಗಮನಕ್ಕೆ ಬಂದಿದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿರುವ ಪಿಲಿಕುಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾ ಸಿಗರು ರಾಜ್ಯದೆಲ್ಲೆಡೆಯಿಂದ ಬಂದು ಹೋಗುತ್ತಿದ್ದಾರೆ. ಎಪ್ರಿಲ್‌ನಿಂದ ಪಿಲಿ ಕುಳ ನಿಸರ್ಗಧಾಮದ ಆಡಳಿತ, ನಿರ್ವ ಹಣೆ ಹೊಣೆಯು ಅಧಿಕೃತವಾಗಿ ಪ್ರಾಧಿ ಕಾರದ ಕಡೆಯಿಂದ ನಡೆಯಲಿದ್ದು, ಅದಕ್ಕೆ ಬೇಕಾದ ಸಿದ್ಧತೆ ಕೂಡ ನಡೆಯುತ್ತಿದೆ.
ಮಂಗಳೂರಿನ ಹೃದಯ ಭಾಗದಿಂದ 10 ಕಿ.ಮೀ. ದೂರ 356 ಎಕರೆ ವಿಸ್ತೃತ ಪ್ರದೇಶದಲ್ಲಿ ಈ ನಿಸರ್ಗಧಾಮ ಇದ್ದು, ಇಲ್ಲಿರುವ ಜೈವಿಕ ಉದ್ಯಾನವನ (ಮೃಗಾಲಯ), ಸಸ್ಯ ಕಾಶಿ, ಪ್ರಾದೇಶಿಕ ವಿಜ್ಞಾನ ಕೇಂದ್ರ, 3 ಡಿ ತಾರಾಲಯ, ಮತ್ಸಾ Âಲಯ, ಸಂಸ್ಕೃತಿ ಗ್ರಾಮ, ಕುಶಲ ಕರ್ಮಿಗಳ ಗ್ರಾಮ, ಆಯುರ್ವೇದ ಚಿಕಿತ್ಸಾ ಕೇಂದ್ರ, ಪ್ರವಾಸಿ ಕುಟೀರ, ಗಾಲ್ಫ್ ಕ್ಲಬ್, ಮಾನಸ ವಾಟರ್ ಪಾರ್ಕ್, ದೋಣಿ ವಿಹಾರ ಕೇಂದ್ರ, ಗುತ್ತು ಮನೆ, ಅರ್ಬನ್ ಹಾಥ್ ಮತ್ತು ಜಿಲ್ಲಾ ವ್ಯಾಪಾರ ಮಳಿಗೆ, ಹಬೇìರಿಯಂ, ಬೊಟ್ಯಾನಿಕಲ್ ಮ್ಯೂಸಿಯಂ, ಟ್ರೀ ಪಾರ್ಕ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರಸ್ತುತ ಇಲ್ಲಿ ಅರ್ಬನ್ ಇಕೋ ಪಾರ್ಕ್, ಅನ್ವೇಷಣೆ ಕೇಂದ್ರದ ಕೆಲಸಗಳು ಪ್ರಗತಿಯಲ್ಲಿವೆ. ಇಷ್ಟೆಲ್ಲಾ ಇದ್ದರೂ ಸಮರ್ಪಕ ನಿರ್ವಹಣೆಯ ಕೊರತೆಯೂ ಇದೆ.
ನಿಸರ್ಗಧಾಮದೊಳಗೆ ಖಾಸಗಿ ವಾಹನ ಗಳಿಗೆ ಪ್ರವೇಶ ಇಲ್ಲ; ಆದರೆ ಪ್ರಸ್ತುತ ಒಳಗಡೆ ಸುತ್ತಾಡಲು, ಮೃಗಾಲಯ ದೊಳಗೆ ಅಗತ್ಯವಿರುವವರಿಗೆ ಸುತ್ತಾಡಲು 20ಕ್ಕೂ ಅಧಿ ಕ ಬಗ್ಗೀಸ್‌ಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಬಗ್ಗೀಸ್‌ಗಳ ಚಾಲಕರು ಮಹಿಳೆಯರೇ ಆಗಿರುವುದು ಇಲ್ಲಿನ ವಿಶೇಷತೆ. ಬಗ್ಗೀಸ್‌ನ ಚಾಲಕರು ಪ್ರಾಣಿ ಪಕ್ಷಿಗಳ ಪರಿಚಯ, ಮಾಹಿತಿ ನೀಡುತ್ತಾ, ಮೃಗಾಲಯವನ್ನು ಸುತ್ತಾಡಿಸುತ್ತಾರೆ. ಹೊರಗಡೆ ಬಗ್ಗೀಸ್‌ಗಳು ದೋಣಿ ವಿಹಾರ ಕೇಂದ್ರ, ಗುತ್ತಿನ ಮನೆಯವರೆಗೆ ಸಾಗಿಸುತ್ತವೆ.
ಕಾಯಕಲ್ಪದ ಅಗತ್ಯ
ವಾರದ ದಿನಗಳಲ್ಲಿ ನೂರಾರು ಮಂದಿ, ವೀಕೆಂಡ್‌ಗಳಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಸುತ್ತಾಡಲು ಸೂಕ್ತ ಮಾಹಿತಿ ಯನ್ನು ನೀಡುವ ಗೈಡ್‌ಗಳಿಲ್ಲ;
ಪ್ರಾಧಿಕಾರದಿಂದ ಹೆಚ್ಚಿನ ಅನುಕೂಲ
“ಸದ್ಯ ನಿಸರ್ಗಧಾಮದಲ್ಲಿ 80 ಮಂದಿ ಸಿಬಂದಿ ನೇರ ನೇಮಕಾತಿ, 75 ಮಂದಿ ಹೊರ ಗುತ್ತಿಗೆಯಡಿ (ಭದ್ರತೆ, ಹೌಸ್ ಕೀಪಿಂಗ್ ಸೇರಿದಂತೆ) ಕಾರ್ಯನಿರ್ವಹಿಸುತ್ತಿದ್ದಾರೆ. ತಿಂಗಳಿಗೆ ಸುಮಾರು 45 ಲಕ್ಷ ರೂ. ನಂತೆ ವಾರ್ಷಿಕ 5 ಕೋ.ರೂ. ಖರ್ಚು ತಗಲು ತ್ತಿದೆ. ಭೇಟಿ ನೀಡುವವರಿಂದ ಟಿಕೆಟ್ ರೂಪದಲ್ಲಿ ವಾರ್ಷಿಕ 3.5 ಕೋ.ರೂ. ಸಂಗ್ರಹವಾಗುತ್ತಿದೆ. ಕೊರೊನಾ ಸಂದರ್ಭ ಸುಮಾರು 8 ತಿಂಗಳುಗಳ ಕಾಲ ನಿಸರ್ಗ ಧಾಮ ಸಾರ್ವಜನಿಕರ ವೀಕ್ಷಣೆಗೆ ಬಂದ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ಆಹಾರದ ಖರ್ಚು ವೆಚ್ಚ ತೂಗಿಸಲು ಕಷ್ಟವಾಗಿತ್ತು.
ಎಂಆರ್‌ಪಿಎಲ್ ಸಂಸ್ಥೆ ಪ್ರಾಣಿಗಳನ್ನು ದತ್ತು ಪಡೆದ ಕಾರಣ ಸ್ವಲ್ಪ ಮಟ್ಟಿಗೆ ಖರ್ಚನ್ನು ಸುಧಾರಿಸಲಾಯಿತು. ಎಪ್ರಿಲ್‌ನಿಂದ ಪ್ರಾ ಧಿಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಿಸರ್ಗಧಾಮ ಮತ್ತಷ್ಟು ಹೊಸತನ ದೊಂದಿಗೆ ಕಾರ್ಯ ನಿರ್ವಹಿಸುವ ನಿರೀಕ್ಷೆ ಇದೆ.
-ಗೋಕುಲ್‌ದಾಸ್ ನಾಯಕ್, ಕಾರ್ಯನಿರ್ವಾಹಕ ನಿರ್ದೇಶಕರು,
ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.