ಸೌಕರ್ಯ ಕೊರತೆ: ಆರಕ್ಷಕ ಠಾಣೆಗೇ ಇಲ್ಲ ರಕ್ಷಣೆ

Team Udayavani, Oct 17, 2018, 9:59 AM IST

17-october-1.gif

ಬೆಳ್ಳಾರೆ: ಇಲ್ಲಿನ ಪೊಲೀಸ್‌ ಠಾಣೆ ಉದ್ಘಾಟನೆಗೊಂಡು ಎರಡು ವರ್ಷಗಳೇ ಕಳೆದವು. ಪೋಲೀಸರ ಕೆಲಸಗಳು ಅತ್ಯುತ್ತಮವಿದ್ದರೂ ಅವರಿಗೆ ಸಾಕಷ್ಟು ಸೌಕರ್ಯಗಳಿಲ್ಲ. ಗರಿಷ್ಠ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ಇದರಿಂದ ತೊಡಕಾಗುತ್ತಿದೆ. ಅಧಿಕಾರಿಗಳ ಭರವಸೆ ಬಾಯಿ ಮಾತಿಗಷ್ಟೇ ಸೀಮಿತವಾಗಿದ್ದು, ಕಾರ್ಯಾನುಷ್ಠಾನ ಆಗುತ್ತಿಲ್ಲ.

ಸುಳ್ಯ ತಾಲೂಕಿನ 3ನೇ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 16ನೇ ಪೊಲೀಸ್‌ ಠಾಣೆಯಾಗಿ 2016ರ ಸ್ವಾತಂತ್ರ್ಯ ದಿನದಂದು ಬೆಳ್ಳಾರೆಯಲ್ಲಿ ಪೂರ್ಣಪ್ರಮಾಣದ ಪೊಲೀಸ್‌ ಠಾಣೆ ಕಾರ್ಯಾರಂಭ ಮಾಡಿತು. ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹೊರಠಾಣೆಯನ್ನು ಪೂರ್ಣಪ್ರಮಾಣದ ಪೋಲೀಸ್‌ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಕೆಲವೇ ಕೆಲವು ತಿಂಗಳಿನಲ್ಲಿ ಠಾಣೆಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುವುದಾಗಿ ನೀಡಿದ್ದ ಅಧಿಕಾರಿ ವರ್ಗದ ಭರವಸೆ ಮರಿಚಿಕೆಯಾಗಿದೆ.

ಕಟ್ಟಡ ಮಂಜೂರಾಗಿಲ್ಲ
ಕೇವಲ ಎರಡು ಚಿಕ್ಕ ಕೊಠಡಿ ಹಾಗೂ ಒಂದು ಹಾಲ್‌ ಇರುವ ಹೊರಠಾಣೆ ಕಟ್ಟಡವನ್ನೇ ಪೂರ್ಣ ಪ್ರಮಾಣದ ಠಾಣೆಗೆ ಮೇಲ್ದರ್ಜೆ ನೀಡಿ ಪರಿವರ್ತಿಸಲಾಗಿದೆ. ಸ್ಥಳದ ಕೊರತೆಯೇ ಠಾಣೆಯ ಬಹುದೊಡ್ಡ ಸಮಸ್ಯೆ. ಈ ಹಿಂದೆ ಐದು ಮಂದಿಗೆಂದು ನಿರ್ಮಿಸಲಾದ ಹೊರಠಾಣೆಯ ಕಟ್ಟಡದಲ್ಲಿ ಇದೀಗ ಬರೋಬ್ಬರಿ 31 ಮಂದಿ ಇರಬೇಕಾದ ಅನಿವಾರ್ಯತೆ. ಪೊಲೀಸ್‌ ಅಧಿಕಾರಿ ಹಾಗೂ ಸಿಬಂದಿ ಕುಳಿತುಕೊಳ್ಳಲು ಬಿಡಿ, ನೆಟ್ಟಗೆ ನಿಲ್ಲಲೂ ಠಾಣೆಯಲ್ಲಿ ಜಾಗವಿಲ್ಲ. ಕೆಲಸ – ಕಾರ್ಯಗಳಿಗೆಂದು ಬರುವ ಸಾರ್ವಜನಿಕರಿಗೂ ಸ್ಥಳಾವಕಾಶವಿಲ್ಲ. ಹೀಗಾಗಿ, ಬೆಳ್ಳಾರೆ ಠಾಣೆ ಮಿನಿ ಸಂತೆಯಂತೆ ಗೋಚರಿಸುತ್ತಿದೆ. ಕಂಪ್ಯೂಟರ್‌ ಸಹಿತ ಪೀಠೊಪಕರಣಗಳನ್ನು ಜೋಡಿಸಿ ಇಡುವುದು ಹೇಗೆ ಎಂಬ ಚಿಂತೆ ಸಿಬಂದೆ. ಶಸ್ತ್ರಾಸ್ತ್ರಗಳನ್ನು ಭದ್ರವಾಗಿಡಲು ಸಾಧ್ಯವಿಲ್ಲದಷ್ಟು ಇಕ್ಕಟ್ಟಾಗಿದೆ ಠಾಣೆಯ ಕಟ್ಟಡ. ಪೊಲೀಸ್‌ ಠಾಣೆ ನಿರ್ಮಿಸಲೆಂದು 70 ಸೆಂಟ್ಸ್‌ ಜಾಗವನ್ನು ಈ ಹಿಂದೆಯೇ ಕಾದಿರಿಸಲಾಗಿದ್ದು, ಆದರೆ ಇದುವರೆಗೂ ಕಟ್ಟಡ ಮಾತ್ರ ಮಂಜೂರುಗೊಂಡಿಲ್ಲ.

ಪದೇ ಪದೇ ಕೆಡುವ ಸರಕಾರಿ ವಾಹನ
ಠಾಣೆಯನ್ನು ಮೇಲ್ದರ್ಜೆಗೆ ಏರಿ ಸಿದ್ದ ಸಂದರ್ಭದಲ್ಲಿ ಸರಕಾರದಿಂದ ನೀಡಲಾಗಿದ್ದ ವಾಹನ ಆಗಾಗ ಕೆಟ್ಟು ನಿಲ್ಲುತ್ತಿದ್ದು, ಬಹುಪಾಲು ಗ್ಯಾರೇಜಿನಲ್ಲೇ ಇರುವಂತಾಗಿದೆ. ತುರ್ತು ಸಂದರ್ಭದಲ್ಲಿ, ರೌಂಡ್ಸ್‌ ಸಮಯದಲ್ಲಿ ತೊಂದರೆಯಾಗುತ್ತಿದೆ. ಠಾಣೆಗೆ ಹೊಸ ವಾಹನ ಒದಗಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

ಪೋಲೀಸರಿಗಿನ್ನೂ ದೊರೆತಿಲ್ಲ ವಸತಿ ಭಾಗ್ಯ
ಒಬ್ಬ ಎಸ್‌ಐ, 5 ಎಎಸ್‌ಐ, 9 ಹೆಡ್‌ ಕಾನ್‌ಸ್ಟೆàಬಲ್‌, 21 ಕಾನ್‌ಸ್ಟೇಬಲ್‌ ಸಹಿತ ಬೆಳ್ಳಾರೆ ಠಾಣೆಯಲ್ಲಿ ಇರುವ ಹುದ್ದೆಗಳ ಸಂಖ್ಯೆ 36. ಐದು ಪಿಸಿಗಳ ಹುದ್ದೆಗನ್ನು ಹೊರತುಪಡಿಸಿ ಉಳಿದೆಲ್ಲವೂ ಭರ್ತಿಯಾಗಿವೆ. ಹಾವೇರಿ, ವಿಜಯಪುರ, ದಾವಣಗೆರೆ, ಬೆಳಗಾವಿ ಹೀಗೆ ದೂರದ ಊರುಗಳಿಂದ ನಿಯೋಜನೆಗೊಂಡ ಸಿಬಂದಿಯೇ ಜಾಸ್ತಿ ಇದ್ದಾರೆ. ಅವರಿಗೆ ಬೆಳ್ಳಾರೆ ಆಸುಪಾಸಿನಲ್ಲಿ ಹೆಚ್ಚಿನ ಬಾಡಿಗೆ ಮನೆ, ಸರಕಾರಿ ವಸತಿಗಳು ಲಭ್ಯವಿಲ್ಲದ ಕಾರಣ ಸುಬ್ರಹ್ಮಣ್ಯ, ಪುತ್ತೂರು, ಸುಳ್ಯದಂತಹ ದೂರದ ಊರುಗಳಲ್ಲಿ ಉಳಿದುಕೊಂಡು ನಿತ್ಯವೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಠಾಣೆಯಲ್ಲಿ ಸರಿಯಾದ ಶೌಚಾಲಯವಿಲ್ಲ, ವಿಶ್ರಾಂತಿ ಕೊಠಡಿಯಿಲ್ಲ. ಇರುವ ಕೊಠಡಿಯಲ್ಲೇ ಆಹಾರ ತಯಾರಿಸುವ ಪರಿಸ್ಥಿತಿ ಇಲ್ಲಿದೆ. ಪೋಲೀಸರ ವಸತಿಗೃಹಕ್ಕಾಗಿ ಅನೇಕ ಮನವಿಗಳನ್ನು ಇಟ್ಟಿದ್ದರೂ ಕಡತಗಳು ವಿಲೇವಾರಿಯಾಗಲೂ ಮೀನ-ಮೇಷ ಎಣಿಸಲಾಗುತ್ತಿದೆ.

ಲಾಕಪ್‌ ಇಲ್ಲದ ಠಾಣೆ 
ಎಲ್ಲ ಕಡೆಯೂ ಪೊಲೀಸ್‌ ಠಾಣೆಗಳಲ್ಲಿ ಲಾಕಪ್‌ ಇದ್ದೇ ಇರುತ್ತದೆ. ಆದರೆ, ಬೆಳ್ಳಾರೆ ಠಾಣೆಯಲ್ಲಿ ಆ ವ್ಯವಸ್ಥೆ ಇಲ್ಲ. ಲಾಕಪ್‌ ಗಳಿಗಾಗಿ ಬೇರೆ ಠಾಣೆಗಳನ್ನು ಅವಲಂಬಿಸಬೇಕಾಗಿದೆ. ಬೇರೆ ಠಾಣೆಗಳಲ್ಲಿ ಲಾಕಪ್‌ಗ್ಳು ಖಾಲಿ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಸಾಕ್ಷ್ಯದ ವಸ್ತುಗಳು, ಅಪಘಾತಗೊಂಡ ವಾಹನಗಳು ಹಾಗೂ ಸಿಬಂದಿಯ ವಾಹನಗಳನ್ನ ಠಾಣೆಯ ಆವರಣದಲ್ಲಿ ಇಡಲೂ ಜಾಗವಿಲ್ಲದಂತಾಗಿದೆ.

 ಬಾಲಚಂದ್ರ ಕೋಟೆ 

ಟಾಪ್ ನ್ಯೂಸ್

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

ಲಿವ್ ಇನ್ ಸಂಗಾತಿಯನ್ನು ಕೊಂದು ದೇಹವನ್ನು 6 ತಿಂಗಳು ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆರೋಪಿ

Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.