ಜಿಲ್ಲೆಯ ಎರಡನೇ ಮಹಿಳಾ ಪದವಿ ಕಾಲೇಜಿಗೆ ಸ್ವಂತ ಕಟ್ಟಡದ ಕೊರತೆ !
Team Udayavani, Aug 17, 2017, 8:20 AM IST
ಪುತ್ತೂರು : ಜಿಲ್ಲೆಯ ಎರಡನೇ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿರುವ ಇಲ್ಲಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದಿರುವುದೇ ದೊಡ್ಡ ಸಮಸ್ಯೆ-ಸವಾಲು..!
2014-15 ನೇ ಸಾಲಿನಲ್ಲಿ ಮಂಜೂರಾದ ಈ ಕಾಲೇಜು ಸದ್ಯಕ್ಕೆ ನಗರದ ಹಳೆ ಜೈಲಿನ ನಾಲ್ಕು ಕೊಠಡಿ ಹಾಗೂ ಅಲ್ಲಿಂದ 200 ಮೀ. ದೂರದ ಪುರಸಭೆಯ ಹಳೆ ಕಟ್ಟಡದ ಎರಡು ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಬಿ.ಎ., ಬಿ.ಕಾಂ ವಿಭಾಗ ಇಲ್ಲಿದ್ದು, ಒಟ್ಟು 10 ಕೊಠಡಿ ಗಳಲ್ಲಿ ತರಗತಿ ನಡೆಯುತ್ತಿವೆ. ಒಂದರಲ್ಲಿ ಆರು ತರಗತಿ ಹಾಗೂ ಇನ್ನೊಂದರಲ್ಲಿ 4 ತರಗತಿಗಳಿವೆ. ಬರೋಬ್ಬರಿ 620 ವಿದ್ಯಾರ್ಥಿನಿಯರನ್ನು ಹೊಂದಿದ ಕಾಲೇಜಿನಲ್ಲಿ ಸುಸಜ್ಜಿತ ಕೊಠಡಿಗಳ ಕೊರತೆ ಇದೆ. ಉಪನ್ಯಾಸಕರು, ವಿದ್ಯಾರ್ಥಿ ಗಳು ದಿನಂಪ್ರತಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಅಲೆದಾಡುವ ಪರಿಸ್ಥಿತಿ ಸದ್ಯದ್ದು. ಇದರಿಂದ ತರಗತಿ ನಡೆಯಲೂ ಕಷ್ಟವಾಗುತ್ತಿದೆ. ಉಳಿದಂತೆ ಬಹಳ ದೊಡ್ಡ ಸಮಸ್ಯೆ ಇಲ್ಲ.
ಹೊಸ ಕಟ್ಟಡಕ್ಕೆ ಸ್ಥಳ ಮೀಸಲು
ನಗರದಿಂದ 3 ಕಿ.ಮೀ. ದೂರದ ಬೊಳುವಾರು – ಉಪ್ಪಿನಂಗಡಿ ರಸ್ತೆಯ ಆನೆಮಜಲಿನಲ್ಲಿ 4.70 ಎಕ್ರೆ ಜಮೀನು ಕಾದಿರಿಸಲಾಗಿದೆ. ಕಾಲೇಜು ಶಿಕ್ಷಣ ಆಯುಕ್ತರ ಹೆಸರಿನಲ್ಲಿ ಪಹಣಿಪತ್ರವೂ ಆಗಿದೆ. ನೂತನ ಕಟ್ಟಡಕ್ಕೆ 8 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಎಸ್‌ಸಿ ಕೋರ್ಸ್ ಗಮನದಲ್ಲಿ ಇಟ್ಟುಕೊಂಡು 25 ಕೊಠಡಿ, ಪ್ರಿನ್ಸಿಪಾಲ್ ಕೊಠಡಿ, ಉಪನ್ಯಾಸಕರ ಕೊಠಡಿ, ರೆಸ್ಟ್ ರೂಂ, ಗ್ರಂಥಾಲಯ, ಶೌಚಾಲಯ, ಆಟದ ಮೈದಾನ ಮೊದಲಾದ ಮೂಲ ಬೇಡಿಕೆ ಸೇರಿಸಲಾಗಿದೆ.
ಹಳೆ ಜೈಲಿನಲ್ಲಿ ಕಾಲೇಜು..!
ಬ್ರಿಟಿಷ್ ಕಾಲದ ಕಟ್ಟಡ ಆರಂಭದಲ್ಲಿ ಹಳೆ ಜೈಲು, ಅನಂತರ ಹಳೆ ತಾಲೂಕು ಕಚೇರಿ ಆಗಿ ಬದಲಾಗಿತ್ತು. ಈಗ ಇರುವ ಮಹಿಳಾ ಕಾಲೇಜಿಗೆ ಸ್ಥಳಾವಕಾಶ ಕೊರತೆ ಕಾಡಿತ್ತು. ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪುತ್ತೂರು ಪುರಸಭೆಯ ಹಳೆಯ ಕಟ್ಟಡದ ಕೆಲವೊಂದು ಕೋಣೆಗಳನ್ನು ಬಳಸಲಾಯಿತು.
ಪುರಸಭಾ ಕಟ್ಟಡ ತೆರವು..!
ಪುರಸಭೆಯ ಹಳೆ ಕಟ್ಟಡ ತೆರವಾಗುವ ಮುನ್ಸೂಚನೆ ಸಿಕ್ಕಿದ್ದು, ಅಲ್ಲಿಂದ ತರಗತಿಯನ್ನು ಶಿಫ್ಟ್ ಮಾಡಬೇಕಿದೆ. ಅದಕ್ಕಾಗಿ 4 ಲಕ್ಷ.ರೂ.ವೆಚ್ಚದಲ್ಲಿ ಜೈಲು ಕಟ್ಟಡದ ಆವರಣದಲ್ಲಿ 4 ತಾತ್ಕಾಲಿಕ ಕೊಠಡಿ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದಾಗುವವರೆಗೆ ತಾತ್ಕಾಲಿಕ ಶೆಡ್ ಅನಿವಾರ್ಯ.
ರೆಕಾರ್ಡ್ ರೂಂ..!
ಜೈಲು ಕಟ್ಟಡದಲ್ಲಿದ್ದ ತಾಲೂಕು ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಗೊಂಡಿತ್ತಾದರೂ ಸ್ಥಳ ಅಭಾವದಿಂದ ವಾಪಸಾಯಿತು. ಕಂದಾಯ ದಾಖಲೆಗಳ ರೆಕಾರ್ಡ್ ರೂಂ ಅಲ್ಲೇ ಇದೆ.
ಉಪನ್ಯಾಸಕರ ಕೊರತೆ ಕಡಿಮೆ
ಮಂಜೂರಾತಿ ಹುದ್ದೆ 12 ರಲ್ಲಿ 9 ಉಪನ್ಯಾಸಕರು ಕರ್ತವ್ಯದಲ್ಲಿದ್ದಾರೆ. 28 ಅತಿಥಿ ಉಪನ್ಯಾಸಕರ ಪೈಕಿ ಹೊಸ ನಿಯಮದಿಂದ 22 ಮಂದಿ ಹಾಜರಾಗಿದ್ದಾರೆ. ಇಲ್ಲಿನ ವಿದ್ಯಾರ್ಥಿ ಬಲಕ್ಕೆ ಅನುಗುಣವಾಗಿ 12 ಹೆಚ್ಚುವರಿ ಉಪನ್ಯಾಸಕರು ಅಗತ್ಯವಿದೆ. ಮಂಜೂರಾದ ಪೈಕಿ ಇತಿಹಾಸ, ಇಂಗ್ಲೀಷ್ ಮತ್ತು ವಾಣಿಜ್ಯ ಉಪನ್ಯಾಸಕರ ಹುದ್ದೆ ಖಾಲಿ ಇವೆ. ಬಿ.ಎ ವಿಭಾಗದ ಮೊದಲೆರಡು ವರ್ಷದಲ್ಲಿ 1ಸೆಕ್ಷನ್ ಇದ್ದು, ಅಂತಿಮ ಬಿ.ಎಯಲ್ಲಿ 2 ಸೆಕ್ಷನ್ ಇದೆ. ಬಿ.ಕಾಂನಲ್ಲಿ ಎಲ್ಲ ತರಗತಿಗಳಿಗೂ 2 ಸೆಕ್ಷನ್ ಇದೆ. ಬಿ.ಎ ವಿಭಾಗದಲ್ಲಿ 220, ಬಿ.ಕಾಂ ವಿಭಾಗದಲ್ಲಿ 400 ಮಂದಿ ಇದ್ದಾರೆ.
- ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.