ಒಳರೋಗಿಗಳ ದಾಖಲು ಸಾಮರ್ಥ್ಯ ಇನ್ನೂ ಏರಿಕೆಯಾಗಿಲ್ಲ
ನಗರದ ಲೇಡಿಗೋಶನ್ ಆಸ್ಪತ್ರೆ:ಸೌಲಭ್ಯಗಳ ಉನ್ನತೀಕರಣ
Team Udayavani, May 5, 2019, 6:00 AM IST
ಲೇಡಿಗೋಶನ್ ಆಸ್ಪತ್ರೆ
ಮಹಾನಗರ: ದಕ್ಷಿಣ ಕನ್ನಡ, ಸುತ್ತಮುತ್ತಲ ಸುಮಾರು 8 ಜಿಲ್ಲೆಗಳ ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಿರುವ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ನೂತನ ಕಟ್ಟಡ ಸಹಿತ ಮೂಲಸೌಕರ್ಯಗಳು, ಚಿಕಿತ್ಸಾ ಸೌಲಭ್ಯಗಳು ಉನ್ನತೀಕ ರಣಗೊಂಡರೂ ಒಳರೋಗಿಗಳ ದಾಖ ಲು ಸಾಮ ರ್ಥ್ಯವನ್ನು 272ರಿಂದ 500 ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.
ದ.ಕ., ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಮುಂತಾದ ಜಿಲ್ಲೆಗಳಿಂದ ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಆಗಮಿ ಸುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಪ್ರಾದೇಶಿಕ ಆಸ್ಪತ್ರೆ ಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ ಸರಕಾ ರ ದಿಂದ ಮಂಜೂರುಗೊಂಡಂತೆ ರೋಗಿ ಗಳ ದಾಖಲು ಮಾಡಿಕೊಳ್ಳಲು ಇರುವ ಅವಕಾಶ 272.
ದಿನವೊಂದಕ್ಕೆ ಸುಮಾರು 130ರಿಂದ 140 ಒಳರೋ ಗಿಗಳು ದಾಖಲಾಗುತ್ತಿದ್ದು, ವಾರ್ಷಿಕ ಸುಮಾರು 15,000ದ ವರೆಗೆ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ವಾರ್ಷಿ ಕವಾಗಿ ಸುಮಾರು 7,000 ವರೆಗೆ ಹೆರಿಗೆ ಗಳಾಗುತ್ತಿವೆ.
50,000ಕ್ಕಿಂತಲೂ ಅಧಿಕ ಮಂದಿ ವಾರ್ಷಿಕ ಹೊರರೋಗಿಗಳಾಗಿ ಆಸ್ಪತ್ರೆಗೆ ಬಂದು ಹೋಗುತ್ತಾರೆ. ತಜ್ಞ ವೈದ್ಯರು, ಉತ್ತಮ ಸೌಲಭ್ಯಗಳು ಇರುವುದರಿಂದ ಬಡ, ಕೆಳಮಧ್ಯಮ ವರ್ಗದ ಮಹಿಳೆಯರು ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯ ಆವರಣದಲ್ಲೇ ರೆಡ್‌ಕ್ರಾಸ್ ಸಂಸ್ಥೆಯ ಬ್ಲಿಡ್ ಬ್ಯಾಂಕ್ ಇದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಸುಮಾರು 8 ಜಿಲ್ಲೆಗಳಿಂದ ರೋಗಿಗಳು ಅಲ್ಲಿ ಜಿಲ್ಲಾ ಆಸ್ಪತ್ರೆಗಳಿದ್ದರೂ ಲೇಡಿಗೋಶನ್ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಸುಮಾರು ದಿನಂಪ್ರತಿ ಒಳರೋಗಿಗಳ ಸಂಖ್ಯೆ 300 ದಾಟುತ್ತದೆ. ಹಾಸಿಗೆ ಸಾಮರ್ಥ್ಯವನ್ನು 500ಕ್ಕೇರಿಸಬೇಕು ಎಂಬ ಬೇಡಿಕೆ ಯನ್ನು ಸರಕಾರಕ್ಕೆ ಈ ಹಿಂದೆಯೇ ಸಲ್ಲಿಸಲ್ಲಿಗಿದೆ. ಏರಿಕೆಯಾದರೆ ಬಡರೋಗಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ. ಪ್ರಸ್ತುತ ಇಲ್ಲಿ ರೋಗಿಗಳ ಸಂಖ್ಯೆ ಜಾಸ್ತಿಯಾದಾಗ ಹಾಸಿಗೆಗಳನ್ನು ಹೊಂದಿಸುವ ಸಮಸ್ಯೆ ಎದುರಾಗುತ್ತದೆ.
500 ಬೆಡ್‌ಗೆ ಸ್ಥಳಾವಕಾಶ ಸಾಧ್ಯ
ಲೇಡಿಗೋಶನ್ ಆಸ್ಪತ್ರೆಗೆ ಒಎನ್‌ಜಿಸಿ- ಎಂಆರ್‌ಪಿಎಲ್ ಒಟ್ಟು 28.9 ಕೋ.ರೂ. ವೆಚ್ಚದಲ್ಲಿ ನೂತನ ಕಟ್ಟಡ, ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಹೊಸ ಕಟ್ಟಡ ಈ ವರ್ಷದ ಮಾ. 2ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತ್ತು. ಈಗ ಇರುವ ಹಳೆ ಕಟ್ಟಡದಲ್ಲಿ, ಹೊಸ ದಾಗಿ ನಿರ್ಮಾಣವಾಗಿರುವ ಮತ್ತು ನಿರ್ಮಾಣ ವಾಗುತ್ತಿರುವ ಎಂಸಿಎಚ್ ಕಟ್ಟಡ ದಲ್ಲಿ 500 ಹಾಸಿಗೆಗಳನ್ನು ಅಳವ ಡಿಸ ಬಹುದು. ಹೊಸ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಕೂಡ ಅಳವಡಿಕೆಯಾಗುತ್ತಿವೆ. ಆದುದರಿಂದ 500 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರ ಕಾ ರಕ್ಕೆ ಹೆಚ್ಚಿನ ಹೊರೆಯಾಗದು. ಆದರೆ ರಾಜ್ಯ ಸರಕಾರದ ಆರೋಗ್ಯ ಇಲಾಖೆ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸಲು ಹಿಂದೇಟು ಹಾಕುತ್ತಿದೆ.
60 ಹಾಸಿಗೆಗಳ ಎಂಸಿಎಚ್ ಬ್ಲಾಕ್ ನಿರ್ಮಾಣ
ಪ್ರಸ್ತುತ ಲೇಡಿಗೊಶನ್ ಆಸ್ಪತ್ರೆಯ ಆವರಣದಲ್ಲಿ ಎಂಸಿಎಚ್ ಬ್ಲಾಕ್ ನಿರ್ಮಾಣವಾಗುತ್ತಿದೆ. ಇದು ಹಾಸಿಗೆಗಳ ಕೊರತೆ ನಿವಾರಣೆಯಲ್ಲಿ ಒಂದಷ್ಟು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕೇಂದ್ರ ಸರಕಾರದ ಎನ್‌ಆರ್‌ಎಚ್‌ಎಂ ಯೋಜನೆಯಡಿ 10.46 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎಂಸಿಎಚ್ (ತಾಯಿ ಮತ್ತು ಮಗು ಆರೋಗ್ಯ ) ವಿಭಾಗ 60 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಲರ್, ನೆಲಮಹಡಿ, ಒಂದನೇ ಮಹಡಿಯನ್ನು ಒಳಗೊಂಡಿದ್ದು ಒಟ್ಟು 3,989 ಚ.ಮೀ. ಸ್ಥಳಾವಕಾಶವನ್ನು ಹೊಂದಿದೆ. ಸೆಲ್ಲರ್‌ನಲ್ಲಿ ಅಡುಗೆ ಕೋಣೆ , ಔಷಧ ಮಳಿಗೆಯನ್ನು ಹೊಂದಿದ್ದು , 756 ಚದರ ಮೀ. ವಿಸ್ತೀರ್ಣವಿದೆ. ನೆಲಮಹಡಿ, ಮೊದಲ ಮಹಡಿಯಲ್ಲಿ ವಾರ್ಡ್, ಒಪಿಡಿ, ಶಸ್ತ್ರಚಿಕಿತ್ಸಾ ಕೊಠಡಿ, ಕನ್ಸಲ್ಟೆನ್ಸಿ ವಿಭಾಗಗಳಿರುತ್ತವೆ. ನಿರ್ಮಾಣಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ಪೂರ್ಣಗೊಂಡು ಸೇವೆಗೆ ಲಭಿಸಲಿದೆ.
ಪ್ರತಿದಿನ 300 ರೋಗಿಗಳಿಗೆ ಚಿಕಿತ್ಸೆ
ಲೇಡಿಗೋಶನ್ ಆಸ್ಪತ್ರೆಯಲ್ಲಿ ಪ್ರಸ್ತುತ ರೋಗಿಗಳ ದಾಖಲು ಸಾಮರ್ಥ್ಯ 272. ಸುಮಾರು 8 ಜಿಲ್ಲೆಗಳಿಂದ ಇಲ್ಲಿಗೆ ರೋಗಿಗಳು ಚಿಕಿತ್ಸೆ ಆಗಮಿಸುತ್ತಿದ್ದು ಮಕ್ಕಳು ಸಹಿತ ಸರಾಸರಿ 300 ರೋಗಿಗಳು ಪ್ರತಿದಿನ ಚಿಕಿತ್ಸೆ ಪಡೆಯುತ್ತಾರೆ. ಆಸ್ಪತ್ರೆಯ ಪಕ್ಕದಲ್ಲೇ 60 ಬೆಡ್‌ಗಳ ಸಾಮರ್ಥ್ಯದ ಎಂಸಿಎಚ್ ( ತಾಯಿ ಮತ್ತು ಮಗು
ಆರೋಗ್ಯ ) ವಿಭಾಗ ನಿರ್ಮಾಣವಾಗುತ್ತಿದೆ.
– ಡಾ| ಸವಿತಾ,
ವೈದ್ಯಕೀಯ ಅಧೀಕ್ಷಕರು, ಲೇಡಿಗೋಶನ್ ಆಸ್ಪತ್ರೆ
-ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.