ಬೆಳ್ತಂಗಡಿ: ಮರಳಿ ಮನೆ ಸೇರಿದ ಸಿಯೋನ್ ಆಶ್ರಮದಲ್ಲಿದ್ದ ಮಹಿಳೆ
Team Udayavani, Dec 11, 2018, 1:10 AM IST
ಬೆಳ್ತಂಗಡಿ: ಮಾನಸಿಕ ಅಸ್ವಸ್ಥರಾಗಿ ಧರ್ಮಸ್ಥಳ ಪೊಲೀಸರ ಮೂಲಕ ಗಂಡಿಬಾಗಿಲು ಸಿಯೋನ್ ಆಶ್ರಮ ಸೇರಿದ್ದ ಮಹಿಳೆಯೊಬ್ಬರು ಆಶ್ರಮದಲ್ಲಿ ಚೇತರಿಸಿಕೊಂಡು ತಮ್ಮ ವಿಳಾಸ ಹೇಳಿದ ಪರಿಣಾಮ ಇದೀಗ ಮನೆ ಸೇರಿದ್ದಾರೆ. ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ಆತ್ಮಹತ್ಯೆ ಮಾಡಲು ಯತ್ನಿಸುತ್ತಿದ್ದ ಸುಮಾರು 45 ವರ್ಷ ಪ್ರಾಯದ ಸುಶೀಲಾ ಎಂಬ ಮಹಿಳೆಯನ್ನು ನ. 29ರಂದು ಧರ್ಮಸ್ಥಳ ಪಿ.ಎಸ್.ಐ. ಅವರು ಸಿಯೋನ್ ಆಶ್ರಮಕ್ಕೆ ಕರೆದುಕೊಂಡು ಬಂದು ದಾಖಲಿಸಿದ್ದರು. ಆ ಸಂದರ್ಭ ಮಹಿಳೆ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡು ತನ್ನ ಪರಿಚಯ ಹೇಳಲಾಗದಷ್ಟು ಕ್ಷೀಣ ಸ್ಥಿತಿಯಲ್ಲಿದ್ದರು. ಬಳಿಕ ಅವರಿಗೆ ಸಿಯೋನ್ ಆಶ್ರಯದಲ್ಲಿ ಆರೈಕೆ ನೀಡಿಲಾಗಿದ್ದು, ಸುಶೀಲಾ ಅವರು ಮಾನಸಿಕವಾಗಿ ಚೇತರಿಸಿಕೊಳ್ಳುತ್ತಿದ್ದಂತೆ ತನ್ನ ತವರೂರು ಹೆಬ್ರಿಯ ಪೇತ್ರಿ ಹತ್ತಿರದ ಕೊಕ್ರಾಣಿ ಎಂದು ಅಲ್ಪಸ್ವಲ್ಪ ಹೇಳಲಾರಂಭಿಸಿದ್ದರು. ಬಳಿಕ ಬ್ರಹ್ಮಾವರ ಪೊಲೀಸರ ಮೂಲಕ ಮಹಿಳೆಯ ವಿಳಾಸ ಪತ್ತೆಹಚ್ಚಿ ಮನೆಯವರಿಗೆ ತಿಳಿಸಲಾಯಿತು.
ಮೂಲತಃ ಉತ್ತರ ಕನ್ನಡದವರಾದ ಇವರ ಕುಟುಂಬ ಹೆಬ್ರಿಯಲ್ಲಿ ನೆಲೆಸಿದ್ದು, ಸುಶೀಲಾ ಅವರು ಬ್ರಹ್ಮಾವರದಿಂದ ತಪ್ಪಿಸಿಕೊಂಡಿದ್ದು, ಈ ಕುರಿತು ಪುತ್ರ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಆದರೆ ಸುಶೀಲಾ ಅವರ ಪತ್ತೆಯಾಗಿರಲಿಲ್ಲ. ಡಿ. 8ರಂದು ಆಶ್ರಮಕ್ಕೆ ಬಂದ ಪುತ್ರ ನಾಗರಾಜು ಹಾಗೂ ಸಾವಿತ್ರಿ ಅವರು ಧರ್ಮಸ್ಥಳ ಪೊಲೀಸರ ಅನುಮತಿ ಪಡೆದು, ಸುಶೀಲಾ ಅವರನ್ನು ಸಿಯೋನ್ ಆಶ್ರಮದಿಂದ ಉ.ಕ. ಜಿಲ್ಲೆಯ ಮುಂಡುಗೋಡು ತಾಲೂಕಿನ ಚೌಡೇಹಳ್ಳಿ ಗ್ರಾಮಕ್ಕೆ ಕರೆದುಕೊಂಡು ಹೋಗಿರುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.