ಪಿವಿಎಸ್‌ನಿಂದ ಲೇಡಿಹಿಲ್ ರಸ್ತೆ ಮೇಲ್ದರ್ಜೆಗೆ: ಮೇಯರ್
Team Udayavani, Oct 27, 2017, 10:06 AM IST
ಬಂದರ್: ಪಿವಿಎಸ್‌ನಿಂದ ಲೇಡಿಹಿಲ್‌ವರೆಗೆ ರಸ್ತೆಯನ್ನು ಸುಮಾರು 6.50 ಕೋ.ರೂ. ವೆಚ್ಚದಲ್ಲಿ ಸ್ಮಾರ್ಟ್ ರಸ್ತೆ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸಲು ಪಾಲಿಕೆ ಮುಂದಾಗಿದ್ದು, ಮುಂದಿನ ತಿಂಗಳಿ ನಲ್ಲಿ ಶಿಲಾನ್ಯಾಸ ನೆರವೇರಲಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಆಶ್ರಯದಲ್ಲಿ ಗುರುವಾರ ಜರಗಿದ ‘ಮಂಗಳೂರು ನಗರಾಭಿವೃದ್ದಿ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಸ್ಮಾರ್ಟ್ ರಸ್ತೆಯ ಮಾದರಿಯಲ್ಲಿ ಈ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ರಸ್ತೆಯಲ್ಲಿ ಈಗ ಇರುವ ಎಲ್ಲ ರೀತಿಯ ಕೇಬಲ್‌ಗಳನ್ನು ಅಂಡರ್‌ಗ್ರೌಂಡ್ ಮಾಡುವುದು, ಸುಸಜ್ಜಿತವಾಗಿ ಫುಟ್‌ಪಾತ್ ಹಾಗೂ ಚರಂಡಿ ಕಾಮಗಾರಿ ಸಹಿತ ವಿವಿಧ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಲಾಲ್‌ಬಾಗ್‌ನಿಂದ ಲೇಡಿಹಿಲ್‌ವರೆಗಿನ ರಸ್ತೆಯನ್ನು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಿ, ಆ ಬಳಿಕ ಎರಡನೇ ಹಂತದಲ್ಲಿ ಲಾಲ್‌ಬಾಗ್‌ನಿಂದ ಪಿವಿಎಸ್‌ವರೆಗೆ ಅಭಿವೃದ್ಧಿಪಡಿಸಲಾಗುವುದು ಎಂದರು.
ದೂರದೂರಿನವರಿಗೆ ಮಾಹಿತಿ ನೀಡುವ ಹಾಗೂ ನಗರದೊಳಗಿನ ರಸ್ತೆಯಲ್ಲಿ ದಾರಿ ಸೂಚಕಗಳು ಮತ್ತು ಸ್ಥಳನಾಮಗಳ ಬೋರ್ಡ್ ಅಳವಡಿಸಲು 1.50 ಕೋ.ರೂ ಮೀಸಲಿರಿಸಲಾಗಿದೆ ಎಂದರು.
ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಹಂಪನಕಟೆಯಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಗಳನ್ನು ಆದಷ್ಟು ಶೀಘ್ರದಲ್ಲಿ ಅನುಷ್ಠಾನಕ್ಕೆ ಒತ್ತು ನೀಡಲಾಗುತ್ತದೆ. ಈಗಾಗಲೇ ಈ ಎರಡೂ ಯೋಜನೆಗಳಿಗೆ ಒಂದು ಹಂತದ ಸಿದ್ಧತೆ ಪೂರ್ಣಗೊಳಿಸಲಾಗಿದ್ದು, ವರ್ಷಾಂತ್ಯದೊಳಗೆ ಎರಡೂ ಕಾಮಗಾರಿಗಳು ಆರಂಭವಾಗುವ ನಿರೀಕ್ಷೆ ಇದೆ ಎಂದರು.
ನಗರದೊಳಗಿನ ವಿವಿಧ ಕಡೆಗಳಲ್ಲಿ ಫುಟ್‌ಪಾತ್ ಸಮಸ್ಯೆ ಇರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಬಹುಮುಖ್ಯ ಸ್ಥಳದಲ್ಲಿ ಆಗಬೇಕಾದ ಫುಟ್‌ಪಾತ್ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆದು ಕಾಮಗಾರಿಯನ್ನೂ ಕೆಲವೆಡೆ ಆರಂಭಿಸಲಾಗಿದೆ. ಮುಂದೆ ಇದು ಮುಂದುವರಿಸಲಾಗುವುದು. ನಗರದ 5 ಕಡೆಗಳಲ್ಲಿ ಇ-ಟಾಯ್ಲೆಟ್ ಗಳನ್ನು ಆರಂಭಿಸಲಾಗಿದ್ದು, ಇದನ್ನು ಇನ್ನಷ್ಟು ಕಂಪೆನಿಗಳ ಸಹಕಾರದಿಂದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು ಎಂದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಅಧ್ಯಕ್ಷೆ ವತಿಕಾ ಪೈ ಅಧ್ಯಕ್ಷತೆ ವಹಿಸಿದ್ದರು. ಶಶಿಧರ ಪೈ ಮಾರೂರು, ಐಸಾಕ್ ವಾಸ್, ಪ್ರಶಾಂತ್ ಸಿ.ಜಿ, ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.
ಕೇಳಿ ಬಂದ ಆಗ್ರಹಗಳು
- ಕೆಪಿಟಿ ಜಂಕ್ಷನ್‌ನ ಅವ್ಯವಸ್ಥೆ ಸರಿಪಡಿಸಬೇಕು.
- ರಸ್ತೆ ಅಗೆದು ಕೇಬಲ್ ಅಳವಡಿಕೆಗೆ ಕಡಿವಾಣ ಅಗತ್ಯ.
- ದೂರು ವಿಲೇವಾರಿ ಪ್ರಧಾನಿ ಕಚೇರಿಯ ವ್ಯವಸ್ಥೆಯಂತೆ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆ ಆಗಲಿ.
- ಸ್ಟೇಟ್‌ಬ್ಯಾಂಕ್-ಪಂಪ್‌ವೆಲ್ ರಸ್ತೆಯಲ್ಲಿ ಒಂದು ಬದಿಯಲ್ಲಿ ಪಾರ್ಕಿಂಗ್ ನಿಷೇಧವಾಗಲಿ.
ಸಾರ್ಟ್ ಸಿಟಿ; ಸಮಗ್ರ ಮಂಗಳೂರು ಅಭಿವೃದ್ಧಿ
ಮಂಗಳೂರಿನ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಈಗಾಗಲೇ ಘೋಷಣೆಯಾದ ಸ್ಮಾರ್ಟ್ ಸಿಟಿ ಯೋಜನೆಯನ್ನು ಹಂತ
ಹಂತವಾಗಿ ಅನುಷ್ಠಾನಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಉನ್ನತ ಮಟ್ಟದ ಸಮಿತಿ ಇದ್ದು, ಅದರ ನೆಲೆಯಲ್ಲಿ ಸ್ಮಾರ್ಟ್ ರಸ್ತೆ ಹಾಗೂ ಕಾರ್ ಪಾರ್ಕಿಂಗ್ ಯೋಜನೆ ಟೆಂಡರ್ ಹಂತದಲ್ಲಿದೆ. ಮೀನುಗಾರಿಕೆ ಹಾಗೂ ಬಂದರು ಪ್ರದೇಶ ವ್ಯಾಪ್ತಿಯನ್ನು ಅತ್ಯಂತ ವಿನೂತನ ರೀತಿಯಲ್ಲಿ ಬದಲಾವಣೆಗೊಳಿಸುವ ಸ್ಮಾರ್ಟ್ ಸಿಟಿ ಪೂರ್ಣ ರೀತಿಯಲ್ಲಿ ಅನುಷ್ಠಾನವಾದರೆ ಮಂಗಳೂರಿನ ಚಿತ್ರಣ ಬದಲಾಗಲಿದೆ ಎಂದು ಮೇಯರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ
Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.