“ಪ್ರಕೃತಿ ಸಂರಕ್ಷಣೆಗಾಗಿ ಗ್ರೀನ್ ಸ್ಕಿಲ್’
Team Udayavani, Nov 23, 2018, 10:07 AM IST
ಮೂಡಬಿದಿರೆ: ನಗರೀಕರಣ ಹಾಗೂ ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಪ್ರಕೃತಿ ಸಂರಕ್ಷಣೆಗಾಗಿ “ಗ್ರೀನ್ ಸ್ಕಿಲ್’ ಯೋಜನೆಯನ್ನು ರೂಪಿಸಲಾಗಿದೆ. ಅದರಡಿ ಯುವಜನರಿಗೆ ಪರಿಸರ ಉಳಿಸಿ, ಬೆಳೆಸುವ ಕೌಶಲಗಳನ್ನು ಬೋಧಿಸಲಾಗುವುದು. ಅದಕ್ಕೆ ದೇಶದ 87 ಸ್ಥಳಗಳಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 2021ರೊಳಗೆ 70 ಲಕ್ಷ ಯುವಶಕ್ತಿಯನ್ನು ತಲುಪುವ ಗುರಿ ಇದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಂರಕ್ಷಣ ಸಚಿವಾಲಯದ ಪ್ರಧಾನ ಸಲಹೆಗಾರ್ತಿ ಡಾ| ಆನಂದಿ ಸುಬ್ರಮಣಿಯನ್ ತಿಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಎನರ್ಜಿ ಆ್ಯಂಡ್ ವೆಟ್‌ಲ್ಯಾಂಡ್ಸ್ ರಿಸರ್ಚ್ ಗ್ರೂಪ್, ಸೆಂಟರ್ ಫಾರ್ ಇಕಾಲಜಿಕಲ್ ಸೈನ್ಸಸ್, ಭಾರತೀಯ ವಿಜ್ಞಾನ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ವಿದ್ಯಾಗಿರಿಯಲ್ಲಿ ನಡೆದ 11ನೇ ದ್ವೈವಾರ್ಷಿಕ ಲೇಕ್ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರಗಳ ಹೆಚ್ಚಳದಿಂದ ಸಸ್ಯವರ್ಗ ಹಾಗೂ ಜಲ ಮೂಲಗಳು ಕ್ಷೀಣಿಸುತ್ತಿವೆ. ಹವಾಮಾನ ಬದಲಾ ವಣೆಯ ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅವರು ವಿಷಾದಿಸಿದರು.
ಹಿರಿಯ ವಿಜ್ಞಾನಿ ಡಾ| ಟಿ.ವಿ. ರಾಮಚಂದ್ರನ್ ಮಾತನಾಡಿ, ಪ್ರಕೃತಿಯಲ್ಲಿ ತ್ಯಾಜ್ಯ ಎಂಬುದಿಲ್ಲ. ಪ್ರತಿಯೊಂದಕ್ಕೂ ಅದರದೇ ಆದ ಉಪಯೋಗವಿರು ತ್ತದೆ. ಡಾ| ಕಲಾಂ ಹೇಳಿದಂತೆ ನಮ್ಮ ಪರಿಸರದಲ್ಲಿ ನಮ್ಮ ಅಗತ್ಯಗಳನ್ನು ಪೂರೈಸುವ ಎಲ್ಲ ಸಂಪ ನ್ಮೂಲಗಳಿವೆ. ಆದರೆ ನಮ್ಮ ದುರಾಸೆಗಳನ್ನಲ್ಲ ಎಂದರು.
“ಬೀಟ್ ಪ್ಲಾಸ್ಟಿಕ್’
ಪರಿಸರ ದಿನದಂದು “ಬೀಟ್ ಪ್ಲಾಸ್ಟಿಕ್’ ಎಂದು ಘೋಷಿಸಲಾಯಿತಾದರೂ ಅದರ ಬಳಕೆ ತಗ್ಗಿಲ್ಲ. ನದಿ ಗಳನ್ನು ಸೇರುವ ಪ್ಲಾಸ್ಟಿಕ್ ಅಲ್ಲಿನ ಜೀವವೈವಿಧ್ಯವನ್ನೇ ಹಾಳುಗೆಡವುತ್ತಿದೆ. ಇಂಥ ನೀರಿನಲ್ಲಿ ಬೆಳೆಯುವ ಮೀನು, ಪ್ಲಾಸ್ಟಿಕ್ ಬಾಟಲಿ ನೀರು ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಜೀವವೈವಿಧ್ಯದ ಆಧಾರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದೇವೆ. ಇವನ್ನು ರಕ್ಷಿಸಿ ದರೆ ಪರಿಸರ ರಕ್ಷಣೆ ಖಂಡಿತ. ಈ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರದ ಕೊಡುಗೆ ಯಾಗಿ ನೀಡಬಹುದು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್, ಪರಿಸರ ಸಂರಕ್ಷಣೆಯಂಥ ದೂರಗಾಮಿ ಚಿಂತನೆ ನಮ್ಮಂಥ ರಾಜಕಾರಣಿಗಳಿಂದ ಸಾಧ್ಯವಿಲ್ಲ; ಅದನ್ನು ಯುವಕರು ನಡೆಸಲು ಮುಂದಾಗಬೇಕು ಎಂದರು.
ಸಮ್ಮೇಳನದ ಭಾಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳ ನೈಸರ್ಗಿಕ ಸಂಪನ್ಮೂಲಗಳ ನಕ್ಷೆಯಿರುವ ಭಿತ್ತಿಚಿತ್ರ, ಪೂರ್ಣ ಮಾಹಿತಿ ಹೊಂದಿರುವ ಹೊತ್ತಗೆ ಹಾಗೂ ಅದರ ಡಿಜಿಟಲ್ ರೂಪಾಂತರವನ್ನು ಬಿಡುಗಡೆಗೊಳಿಸಲಾಯಿತು.
ಸಮ್ಮಾನ
ಜೀವ ವೈವಿಧ್ಯ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆ ಸಲ್ಲಿಸಿದ ಬೆಂಗಳೂರಿನ ಉಮಾ ಮೋಹನ್, ಶ್ರೀವಿದ್ಯಾ, ಕೆನಡಾದ ರಾಜಶೇಖರ ಮೂರ್ತಿ ಹಾಗೂ ಹೈದರಾಬಾದ್‌ನ ನರೇಂದ್ರ ಪ್ರಸಾದ್ ಅವರನ್ನು ಸಮ್ಮಾನಿಸಲಾಯಿತು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್, ವಾಗೆªàವಿ ವಿಲಾಸ್ ಇನ್‌ಸ್ಟಿಟ್ಯೂಶನ್‌ನ ಅಧ್ಯಕ್ಷ ಡಾ| ಹರೀಶ್ ಕೃಷ್ಣಮೂರ್ತಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಂರಕ್ಷಣ ಸಚಿವಾಲಯದ ಕುಮಾರ್ ರಜನೀಶ್, ರಾಜ್ಯ ಆರೋಗ್ಯ ಆಯುಕ್ತ ಪಂಕಜ್ ಪಾಂಡೆ, ವರ್ತೂರು ಕೆ.ಕೆ. ಪ್ರೌಢಶಾಲೆಯ ಪ್ರಾಂಶುಪಾಲ ಎಂ.ಎ. ಖಾನ್ ಉಪಸ್ಥಿತರಿದ್ದರು.
ಅನಂತಕುಮಾರ್, ಹರೀಶ್ ಭಟ್‌ಗೆ ಅರ್ಪಣೆ
ಸಮ್ಮೇಳನಕ್ಕೆ ಮೂಲ ಶಕ್ತಿಯಾಗಿದ್ದ ವಿಜ್ಞಾನಿ ಹರೀಶ್ ಭಟ್ ಹಾಗೂ ಸದಾ ಬೆನ್ನೆಲುಬಾಗಿ ಪ್ರೋತ್ಸಾಹಿಸುತ್ತಿದ್ದ ಕೇಂದ್ರ ಸಚಿವ ಅನಂತ್‌ಕುಮಾರ್ ಅವರಿಗೆ ಈ ಬಾರಿಯ ಲೇಕ್ ಸಮ್ಮೇಳನವನ್ನು ಸಮರ್ಪಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.