ಬತ್ತಿ ಹೋಯಿತು ಕೋಡಿಂಬಾಳದ ಓಂತ್ರಡ್ಕ ಕಾಲನಿ ಕೆರೆ
ಈ ಬಾರಿ ತಟ್ಟಿತು ಕುಡಿಯುವ ನೀರಿನ ಬಿಸಿ
Team Udayavani, May 18, 2019, 5:50 AM IST
ಕಡಬ: ಕೋಡಿಂಬಾಳದ ಓಂತ್ರಡ್ಕ ಕಾಲನಿಯ ಜನರಿಗೆ ಇದುವರೆಗೆ ಬಿರು ಬೇಸಗೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಟ್ಟಿರಲಿಲ್ಲ. ಕಾಲನಿಯಲ್ಲಿದ್ದ ಕೆರೆಯೊಂದು ಕಾಲನಿ ನಿವಾಸಿಗಳಿಗೆ ನೀರಿನ ಸಮಸ್ಯೆ ಕಾಡದಂತೆ ಬೇಸಗೆಯಲ್ಲಿಯೂ ಭರಪೂರ ನೀರುಣಿಸುತ್ತಿತ್ತು. ಆದರೆ ಈ ಬಾರಿ ಮಾತ್ರ ಕೆರೆ ಬತ್ತಿ ಹೋಗಿ ತಳ ಕಾಣುತ್ತಿದೆ. ಪಂಚಾಯತ್ನ ನಳ್ಳಿ ನೀರು ಕೂಡ ಇಲ್ಲದೇ ಕಳೆದ ಒಂದು ವಾರದಿಂದ ಕಾಲನಿಯ ಜನರಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ.
ಕಾಲನಿಯ ಕೆರೆಯಲ್ಲಿ ಈವರೆಗೆ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತೇ ಹೊರತು ತಳಮುಟ್ಟುವ ಹಂತಕ್ಕೆ ತಲುಪುತ್ತಿರಲಿಲ್ಲ. ಈ ಕೆರೆ ಇಲ್ಲಿನ 15 ಮನೆಗಳಿಗೆ ನೀರುಣಿಸುವ ಮೂಲವಾಗಿತ್ತು. ಕಾಲನಿ ನಿವಾಸಿ ಕಮಲಾ ಅವರಿಗೆ ಸೇರಿದ ಈ ಕೆರೆಯ ನೀರನ್ನು ಕಾಲನಿ ನಿವಾಸಿಗಳೆಲ್ಲರೂ ಬಳಸುತ್ತಿದ್ದರು. ಮನೆ ಬಳಕೆ, ಸ್ನಾನ, ಬಟ್ಟೆ ತೊಳೆಯುವುದಕ್ಕೆ ಎಲ್ಲದಕ್ಕೂ ಈ ಕೆರೆಯ ನೀರೇ ಬಳಕೆಯಾಗುತ್ತಿತ್ತು.
ನೀರಿನ ಆಶ್ರಯ
ಇತ್ತೀಚಿನ ವರ್ಷದಲ್ಲಿ ಕಾಲನಿಗೆ ಕಡಬ ಗ್ರಾಮ ಪಂಚಾಯತ್ ವತಿಯಿಂದ ನಳ್ಳಿ ನೀರಿನ ಸಂಪರ್ಕ ನೀಡಿದ್ದರೂ ಕುಡಿಯುವುದಕ್ಕೆ ಹಾಗೂ ಅಡುಗೆಗೆ ಈ ಕೆರೆಯ ನೀರನ್ನೇ ಆಶ್ರಯಿಸಲಾಗುತ್ತಿತ್ತು. ಇತ್ತ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ಪಂಚಾಯತ್ನ ಕುಡಿಯುವ ನೀರಿನ ಸ್ಥಾವರದ ನೀರೆತ್ತುವ ವಿದ್ಯುತ್ ಚಾಲಿತ ಪಂಪು ಕೆಟ್ಟು ಹೋಗಿದೆ. ಕಾಲನಿಯ ಜನತೆಗೆ ಅತ್ತ ಕೆರೆ ನೀರೂ ಇಲ್ಲ, ಇತ್ತ ನಳ್ಳಿ ನೀರೂ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಪಂಚಾಯತ್ನವರು ಪಂಪ್ ದುರಸ್ತಿ ಮಾಡಿಸಿದರೂ ವಿದ್ಯುತ್ ಸಮಸ್ಯೆಯಿಂದ ಪಂಪ್ ಚಾಲೂ ಆಗದೆ ಸಮಸ್ಯೆ ಮುಂದುವರಿದಿದೆ.
ಪ್ರಸ್ತುತ ಕಾಲನಿಯಲ್ಲಿ ಒಂದು ಮನೆಗೆ 2 ಕೊಡ ನೀರು ಎನ್ನುವ ಪರಿಸ್ಥಿತಿ ಇದೆ. ಕೆರೆಯ ಮಾಲಕಿ ಕಮಲಾ ಅವರು ಬೆಳಗ್ಗೆ ಕೆರೆಯಲ್ಲಿ ಸಿಗುವ ಒಂದಷ್ಟು ನೀರನ್ನು ಪಂಪಿನ ಮೂಲಕ ಮೇಲೆತ್ತಿ ಟ್ಯಾಂಕ್ನಲ್ಲಿ ಶೇಖರಿಸಿ ಅದನ್ನು ಕಾಲನಿಯ ಮನೆಗಳಿಗೆ ತಲಾ ಎರಡು ಕೊಡಪಾನದಂತೆ ಹಂಚುತ್ತಾರೆ. ಇದೇ ಕೆರೆಯ ನೀರನ್ನು ನಂಬಿದ್ದ ಕಮಲಾ ಅವರ ಕುಟುಂಬ ಮಾತ್ರ ಪಂಚಾಯತ್ ನಳ್ಳಿ ನೀರಿನ ಸಂಪರ್ಕವನ್ನೂ ಪಡೆಯದೆ ಸಮಸ್ಯೆ ಎದುರಿಸುವಂತಾಗಿದೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಕೆರೆ ಸಂಪೂರ್ಣ ಬತ್ತಿ ಹೋಗುವ ಭೀತಿ ಇದೆ.
– ಚೆನ್ನಪ್ಪ ಗೌಡ ಕಜೆಮೂಲೆ ಕಡಬ ಗ್ರಾ.ಪಂ. ಪಿಡಿಒ
– ಕಮಲಾ ಓಂತ್ರಡ್ಕ ಕಾಲನಿ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.