ಎರಡು ಸಾವಿರ ಅರ್ಜಿ ಬಾಕಿ, ಕೃಷಿಕರಿಗೆ ಸಿಕ್ಕಿಲ್ಲ ಹಕ್ಕುಪತ್ರ


Team Udayavani, Mar 21, 2018, 3:25 PM IST

21-March-7.jpg

ವಿಟ್ಲ : ವಿಟ್ಲ ಕಸಬಾ ಗ್ರಾಮದಲ್ಲಿ 50/53 ಜಮೀನು ಮಂಜೂರಾತಿ ಸಂಬಂಧ 2000ಕ್ಕೂ ಅಧಿಕ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಜಿಲ್ಲಾಧಿಕಾರಿಯವರ ಆದೇಶಪತ್ರದಲ್ಲಿ ನಿಯಮಾನುಸಾರ ಎಂಬ ಪದ ಬಂಟ್ವಾಳ ತಹಶೀಲ್ದಾರ್‌ ಅವರನ್ನು ಅಧೀರರನ್ನಾಗಿಸಿದ್ದೇ ಇದಕ್ಕೆ ಕಾರಣವಾಗಿದೆ. 

ಸಮಸ್ಯೆ ಏನು?
ವಿಟ್ಲ ಗ್ರಾಮ ಪಂಚಾಯತ್‌ ಅಸ್ತಿತ್ವದಲ್ಲಿದ್ದ ಕಾಲದಲ್ಲಿ 2000ಕ್ಕೂ ಅಧಿಕ ಕೃಷಿಕರು ಅಕ್ರಮ ಸಕ್ರಮ ಕಾನೂನಿನನ್ವಯ ಸರಕಾರಿ ಸ್ಥಳದಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿ ಆ ಜಮೀನಿನ ಮಂಜೂರಾತಿ ಕೋರಿ 50/53 ಅಧಿನಿಯಮಾನುಸಾರ ಅರ್ಜಿ ಸಲ್ಲಿಸಿದ್ದರು. 50/91-92ರಲ್ಲಿ ಮತ್ತು 53/99-2000 ದಲ್ಲಿ ಇವುಗಳೆಲ್ಲ ಸಲ್ಲಿಕೆಯಾಗಿವೆ. ಈ ಮಧ್ಯೆ 2015ರ ಜೂ. 22 ರಂದು ಸರಕಾರದ ಅಧಿ ಸೂಚನೆಯಂತೆ ವಿಟ್ಲ ಗ್ರಾ.ಪಂ.ನ್ನು ಪ.ಪಂ. ಆಗಿ ಮೇಲ್ದರ್ಜೆಗೇರಿಸಲಾಯಿತು. ಪ.ಪಂ. ಘೋಷಣೆಯಾದಂದಿನಿಂದ ಸಾಗುವಳಿ ಮಾಡಿ ಮಂಜೂರಾತಿ ಕೋರಿ ಸಲ್ಲಿಸಿದ ಕೃಷಿಕರ ಅರ್ಜಿಗಳನ್ನು ಕಂದಾಯ ಇಲಾಖೆ ವಿಲೇವಾರಿ ಮಾಡಲಿಲ್ಲ. ಪರಿಣಾಮ, ಕೃಷಿಕರ ಸ್ಥಿತಿ ಅತಂತ್ರವಾಯಿತು.

94ಸಿ ಅಡ್ಡಿಯಾಗಲಿಲ್ಲ
2014ನೇ ಸಾಲಿನವರೆಗೆ 94ಸಿ ಮೂಲಕ ಅರ್ಜಿ ಸಲ್ಲಿಸಿದವರಿಗೂ ಕಂದಾಯ ಇಲಾಖೆ ಆಕ್ಷೇಪಿಸಿತ್ತು. ಬಳಿಕ ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ 2015ರ ಜೂ. 22ರೊಳಗೆ ಅರ್ಜಿ ಸಲ್ಲಿಸಿದವರಿಗೆ 94ಸಿ ಮೂಲಕ ಅರ್ಜಿ ವಿಲೇವಾರಿ ಮಾಡಿತ್ತು. ಆಮೇಲಿನ ಅರ್ಜಿಗಳನ್ನು 94ಸಿಸಿ ಮೂಲಕ ಇತ್ಯರ್ಥಗೊಳಿಸಿತು. ವಿಟ್ಲ ಕಸಬಾ ಗ್ರಾಮದಲ್ಲಿ 94ಸಿ ಮೂಲಕ ಮತ್ತು 94ಸಿಸಿ ಮೂಲಕ 1000 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.

ಈ ಆದೇಶ ಏಕೆ ಪರಿಗಣಿಸುವುದಿಲ್ಲ?
94ಸಿ ನಿಯಮಕ್ಕೆ ಅನ್ವಯಿಸಿದಂತೆ 50/53 ರಲ್ಲಿಯೂ ಅನ್ವಯವಾಗಬೇಕಲ್ಲವೇ? ವಿಟ್ಲ ಗ್ರಾ.ಪಂ. ಅವಧಿಯಲ್ಲೇ ಅರ್ಜಿ ಸಲ್ಲಿಸಲಾಗಿದ್ದು, ಸಾಗುವಳಿ ಚೀಟಿ ಮಂಜೂರು ಮಾಡುವುದಕ್ಕೆ ಮೀನ ಮೇಷ ಎಣಿಸುವುದು ಏಕೆ? ಬಂಟ್ವಾಳ ತಹಶೀಲ್ದಾರರು ಜಿಲ್ಲಾಧಿಕಾರಿಗಳ ಆದೇಶದಲ್ಲಿರುವ ನಿಯಮಾನುಸಾರ ಎಂಬ ಪದವನ್ನು ಬಳಸಿ, ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಏಕೆ? ವಿಟ್ಲ ಕಸಬಾ ಗ್ರಾಮದ ನಾಗರಿಕರಾಗಿರುವ ನಮ್ಮ ಈ ಸಮಸ್ಯೆಯನ್ನು ಬಗೆಹರಿಸುವವರಾರು? ಎಂಬ ಪ್ರಶ್ನೆ ಕೃಷಿಕರದ್ದು.

ವಿಟ್ಲದ ಕೃಷಿಕರಿಗೆ ಮಾತ್ರ ಅನ್ಯಾಯ
ವಿಟ್ಲ ಅತಿಥಿಗೃಹದಲ್ಲಿ ವಿಟ್ಲ ಕಸಬಾ ಗ್ರಾಮದವರನ್ನು ಬಿಟ್ಟು, ವಿಟ್ಲ ಹೋಬಳಿಯ ಉಳಿದೆಲ್ಲ ಗ್ರಾಮಗಳ ಕೃಷಿಕರಿಗೆ ಜಮೀನು ಮಂಜೂರಾತಿ ಆಗುತ್ತಿದೆ. ಶಾಸಕರ ಉಪಸ್ಥಿತಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಕ್ಕುಪತ್ರ ನೀಡುತ್ತಿದ್ದಾರೆ. ಆದರೆ, ನಮಗೆ ಮಾತ್ರ ಅನ್ಯಾಯವಾಗಿದೆ. ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದ್ದು, ನಮ್ಮ ಪಾಲಿಗೆ ಶೂನ್ಯ ಪರಿಣಾಮವನ್ನುಂಟು ಮಾಡಿತು ಎಂದು ವಿಟ್ಲ ಕಸಬಾ ಗ್ರಾಮದ ಕೃಷಿಕರು ಅಲವತ್ತುಕೊಂಡಿದ್ದಾರೆ.

ನಿಯಮಾನುಸಾರ ಕೊಡಿ
ತಹಶೀಲ್ದಾರರು ಜಿಲ್ಲಾಧಿಕಾರಿಗಳ ಆದೇಶದಲ್ಲಿದ್ದಂತೆ ಹಿಂದಿನ ನಿಯಮಾನುಸಾರವೇ ಸಾಗುವಳಿ ಚೀಟಿ ಅಥವಾ ಹಕ್ಕುಪತ್ರವನ್ನು ನೀಡಲಿ. ನಾವೇನೂ ಅಕ್ರಮ ಮಾಡಬೇಕೆನ್ನುತ್ತಿಲ್ಲ. ನಮ್ಮ ಭೂಮಿ, ನಮಗೆ ಹಕ್ಕುಪತ್ರ ಕೊಡಿ ಎಂದು ಆಗ್ರಹಿಸುತ್ತೇವೆ.
ಸೀತಾರಾಮ ಶೆಟ್ಟಿ ಒಕ್ಕೆತ್ತೂರು
ವಿಟ್ಲ ಕಸಬಾ ಗ್ರಾಮದ ಕೃಷಿಕರು

ಸ್ಪಷ್ಟ ಆದೇಶವಿಲ್ಲ
ಜಿಲ್ಲಾಧಿಕಾರಿಗಳು ಆದೇಶದಲ್ಲಿ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಹಕ್ಕುಪತ್ರವನ್ನು ನೀಡಲು ನಿರ್ದೇಶಿಸಿದ್ದಾರೆ. ಆ ಪ್ರಕಾರ ನಾವು ವಿಟ್ಲ ಕಸಬಾ ಗ್ರಾಮದ ಕೃಷಿಕರಿಗೆ ಭೂಮಿ ಮಂಜೂರುಗೊಳಿಸಿದ ಬಗ್ಗೆ ಸಮಸ್ಯೆ ಉಂಟಾದಲ್ಲಿ ಜಿಲ್ಲಾಧಿಕಾರಿಗಳು ನಮ್ಮನ್ನು ಪ್ರಶ್ನಿಸುತ್ತಾರೆ. ಆದೇಶ ಪತ್ರವನ್ನು ನೋಡಿ ಕ್ರಮ ಕೈಗೊಳ್ಳಬೇಕಿತ್ತು ಎನ್ನುತ್ತಾರೆ. ಆಗ ಅಕ್ರಮಗಳಿಗೆ ನಾವು ಕಾರಣರಾಗುತ್ತೇವೆ. ನನಗೆ ಆ ಬಗ್ಗೆ ಸ್ಪಷ್ಟ ಆದೇಶವಿಲ್ಲ. ಆದುದರಿಂದ ಕ್ರಮ ಕೈಗೊಳ್ಳಲಾಗುವುದಿಲ್ಲ.
 – ಪುರಂದರ ಹೆಗ್ಡೆ
    ತಹಶೀಲ್ದಾರರು

ಉದಯಶಂಕರ್‌ ನೀರ್ಪಾಜೆ 

ಟಾಪ್ ನ್ಯೂಸ್

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.