ಜಮೀನು ವಿಭಾಗ ಪತ್ರ ನೋಂದಣಿಗೆ ಲಾಕ್‌ಡೌನ್‌ ಕುತ್ತು

ಸರ್ವೇ ಇಲಾಖೆಯಿಂದ ಅವೈಜ್ಞಾನಿಕ ವಿನಾಯಿತಿ ಅವಧಿ ನಿಗದಿ ; ಪರಿಷ್ಕರಣೆಗೆ ಒತ್ತಡ

Team Udayavani, Jul 1, 2020, 6:43 AM IST

ಜಮೀನು ವಿಭಾಗ ಪತ್ರ ನೋಂದಣಿಗೆ ಲಾಕ್‌ಡೌನ್‌ ಕುತ್ತು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಳ್ತಂಗಡಿ: ರೈತರು ತಮ್ಮ ಜಮೀನಿನ ವಿಭಾಗ ಪತ್ರ ನೋಂದಣಿಗೆ ಸರ್ವೇ ಇಲಾಖೆಯಿಂದ ಪಡೆದ 11 ಇ ನಕ್ಷೆಗಳ ಕಾಲಮಿತಿ ಮುಗಿದುದರಿಂದ ಅವರು ದುಬಾರಿ ಶುಲ್ಕ ಪಾವತಿಸಿ ಮತ್ತೂಮ್ಮೆ ಅಳತೆ ಮಾಡಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸತತ ಎರಡು ತಿಂಗಳು ಲಾಕ್‌ ಡೌನ್‌ ಇದ್ದುದರಿಂದ ಸರಕಾರಿ ಕೆಲಸಗಳು ಮಂದಗತಿಯಲ್ಲಿವೆ. ಈ ನಡುವೆ ಭೂ ಪರಭಾರೆಗೆ ಪಡೆದ 11ಇ ನಕ್ಷೆ ನೋಂದಣಿಗೆ ಸರ್ವೇ ಇಲಾಖೆ ಕೇವಲ 1 ತಿಂಗಳ ವಿನಾಯಿತಿ ನೀಡಿತ್ತು.

ಈ ಅವಧಿಯಲ್ಲಿ ಇದಕ್ಕಾಗಿ ಸರ್ವೇ ಇಲಾಖೆ ಟೋಕನ್‌ ವ್ಯವಸ್ಥೆ ಆರಂಭಿಸಿತ್ತು. ಹೆಚ್ಚಿನ ಮಂದಿ ದೂರದೂರಿನಲ್ಲಿ ಸಿಲುಕಿದ್ದು, ವಿನಾಯಿತಿ ಅವಧಿ ವಿಸ್ತರಿಸುವುದು ಅಗತ್ಯವಾಗಿತ್ತು.

ಪ್ರತೀ ಸರ್ವೇ ನಂ.ಗೆ 1,200 ರೂ.
ಈ ಮಧ್ಯೆ ಸರ್ವರ್‌ ಸಮಸ್ಯೆ ಮತ್ತಿತರ ತೊಂದರೆ ಎದುರಾದ್ದರಿಂದ ಈಗಾಗಲೇ ಅರ್ಜಿ ಸಲ್ಲಿಸಿದವರ ಕಾಲಮಿತಿ ಮುಗಿದಿದೆ. ವಿನಾಯಿತಿ ಅವಧಿ ವಿಸ್ತರಿಸದೆ ಇರುವುದರಿಂದ ಕಾಲಮಿತಿ ಮುಗಿದಿರುವ ರೈತರು ಒಂದು ಸರ್ವೇ ನಂಬರಿಗೆ 1,200 ರೂ.ಗಳಂತೆ ಪಾವತಿಸಿ ಮತ್ತೂಮ್ಮೆ ಅಳತೆಗೊಳಪಡಿಸಿ ಹೊಸ ನಕ್ಷೆ ತಯಾರಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

ನೋಂದಣಿ ಮೇಯಲ್ಲಿ ಆರಂಭಗೊಂಡರೂ ವೇಗವಾಗಿ ಆಗುತ್ತಿಲ್ಲ. ಪ್ರಸ್ತುತ ಜನರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ನೋಂದಣಿ ಕಚೇರಿಗೆ ಸ್ಕಾ éನ್‌ ಮಾಡಿದ ದಸ್ತಾವೇಜು ಪ್ರತಿ ಇಮೇಲ್‌ ಮಾಡಿ, ಬಳಿಕ ಉಪನೋಂದಣಾಧಿಕಾರಿಗಳು ನಿಗದಿಪಡಿಸಿದ ದಿನ ಕಡತ ಹಾಜರುಪಡಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೆಗೆ ಕನಿಷ್ಠ ಎರಡು ವಾರ ತಗಲುತ್ತದೆ.

ತಮ್ಮದಲ್ಲದ ತಪ್ಪಿನಿಂದ ಜನರಿಗೆ ಸಂಕಷ್ಟ
ಸರಕಾರವು ಎಲ್ಲ  ಕ್ಷೇತ್ರಗಳಲ್ಲಿ  ಕನಿಷ್ಠ 3 ತಿಂಗಳ ವಿನಾಯಿತಿ ಘೋಷಿಸಿದ್ದರೂ ಸರ್ವೇ ಇಲಾಖೆ ವ್ಯಾಪ್ತಿಗೆ ಕೇವಲ ಒಂದು ತಿಂಗಳು ಮಿತಿಗೊಳಿಸಿದೆ. ವಿನಾಯಿತಿ 3 ತಿಂಗಳು ಇದ್ದರೂ ಕೆಲವು ಕಡತಗಳಿಗೆ ಒಂದು ತಿಂಗಳ ಅವಧಿ ಸೂಚಿಸುತ್ತಿದೆ. ಈ ಕುರಿತು ಉಪನೋಂದಣಾಧಿಕಾರಿಗಳಿಗೂ ಸಮರ್ಪಕ ಮಾಹಿತಿ ಇಲ್ಲ.

ಇಲಾಖೆ ಈ ಬಗ್ಗೆ  ಸಾರ್ವಜನಿಕ ಪ್ರಕಟನೆ ನೀಡದಿರುವುದರಿಂದ ರೈತರಿಗೆ ಮಾಹಿತಿ ಲಭಿಸಿಲ್ಲ. ಇಲಾಖೆಯ ಈ ಕ್ರಮದಿಂದ 11ಇ ನಕ್ಷೆ ಪಡೆದು ಲಾಕ್‌ ಡೌನ್‌ನಿಂದಾಗಿ ನೋಂದಣಿಗೆ ಬಾಕಿಯಾಗಿರುವ ಎಲ್ಲ ಕಡತಗಳ ವಿಚಾರದಲ್ಲಿ ಜನರು ತಮ್ಮದಲ್ಲದ ತಪ್ಪಿಗೆ ದುಬಾರಿ ಮೊತ್ತ ತೆತ್ತು ಮತ್ತೆ ಅಳತೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದ ಬ್ಯಾಂಕ್‌ ವ್ಯವಹಾರ, ಜಮೀನು ವಿಭಾಗ ಪರಭಾರೆಗೂ ಹೊಡೆತ ಬಿದ್ದಿದೆ.

ಆರಂಭದಲ್ಲಿ  11ಇ ನಕ್ಷೆ ಪಡೆದು ನೋಂದಣಿಗೆ 6 ತಿಂಗಳ ಅವಧಿ ನೀಡಲಾಗಿತ್ತು. ಕೋವಿಡ್‌ ಕಾರಣದಿಂದ ಮೂರು ತಿಂಗಳ ಹೆಚ್ಚುವರಿ ಅವಧಿ ನೀಡಲಾಗಿದೆ. ಈ ಮಧ್ಯೆಯೂ ತಾಂತ್ರಿಕ ದೋಷದಿಂದ ನೋಂದಣಿಗೆ ಬಾಕಿ ಉಳಿದಿರುವ ಕಡತಗಳಿದ್ದಲ್ಲಿ  ಮತ್ತೂಮ್ಮೆ  ಪರಿಶೀಲಿಸಲು ಉಪನೋಂದಣಾಧಿಕಾರಿಗಳಿಗೆ ಸೂಚಿಸುತ್ತೇನೆ.
– ಶ್ರೀಧರ್‌ ಹೆಚ್ಚುವರಿ ನಿರ್ದೇಶಕರು, ಸರ್ವೇ ಇಲಾಖೆ, ಬೆಂಗಳೂರು

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.