ಒಂದೇ ಗ್ರಾಮದಲ್ಲಿ ಕುಸಿತ ಪುನರಾವರ್ತನೆ
Team Udayavani, Aug 11, 2018, 10:02 AM IST
ಬೆಳ್ತಂಗಡಿ: ನೆರಿಯ ಗ್ರಾಮದ ಪಿಲತ್ತಡಿಯಲ್ಲಿ ಗುರುವಾರ ಸಂಭವಿಸಿದ ಹಠಾತ್ ಗುಡ್ಡ ಕುಸಿತ ಹತ್ತು ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ನಡೆದ ಇಟ್ಟಾಡಿ ದುರಂತವನ್ನು ನೆನಪಿಸಿದೆ. ಪಿಲತ್ತಡಿಯ ಕುಸಿತ ಆ. 9ರಂದು ಸಂಭವಿಸಿದರೆ, ಇಟ್ಟಾಡಿ ಘಟನೆ 2008ರ ಆ. 12ರಂದು ನಡೆದಿತ್ತು. ಪ್ರಸ್ತುತ ಘಟನೆಯಿಂದ ಒಂದು ಕುಟುಂಬ ಸಂತ್ರಸ್ತವಾಗಿದೆ. ಅಂದು ಸುಮಾರು 35 ಕುಟುಂಬಗಳು ಸಮಸ್ಯೆಗೀಡಾಗಿದ್ದವು.
ರಾತ್ರಿ ಕುಸಿದ ಗುಡ್ಡ: ಇಟ್ಟಾಡಿ ಘಟನೆಯು ಮಧ್ಯರಾತ್ರಿ 12ರ ಸುಮಾರಿಗೆ ಸಂಭವಿಸಿತ್ತು. ಭೂಕಂಪವಾದಂತೆ ಭೀಕರ ಶಬ್ದ ಉಂಟಾಗಿ ಸುಮಾರು 1.5 ಕಿ.ಮೀ. ದೂರದಿಂದ ಇಡೀ ಗುಡ್ಡವೇ ಕುಸಿದು ಎಕರೆಗಟ್ಟಲೆ ಕೃಷಿ ಭೂಮಿಯನ್ನು ನಾಶ ಮಾಡಿತ್ತು. ಕುಸಿತದ ಭಯಾನಕ ಸದ್ದು ಸುಮಾರು ಒಂದೂವರೆ ತಾಸು ಮುಂದುವರಿದಿತ್ತು.
ಕುಸಿದ ಮಣ್ಣಿನಡಿ ಐದು ಮನೆಗಳು ಹೂತು ಹೋಗಿದ್ದವು. 3,500ದಷ್ಟು ಅಡಿಕೆ ಮರಗಳು, 150ಕ್ಕೂ ಹೆಚ್ಚು ತೆಂಗಿನ ಮರಗಳು ನಾಶವಾಗಿದ್ದವು. ಧರ್ಮಸ್ಥಳ ಸಂಪರ್ಕ ರಸ್ತೆ ನಾಶವಾಗಿತ್ತು. ಆಸುಪಾಸಿನ ಪ್ರದೇಶಗಳ ಮಂದಿಯೂ ಭಯಭೀತರಾಗಿ ಇಡೀ ರಾತ್ರಿ ಮನೆ ಹೊರಗೇ ಇದ್ದರು. ಗುಡ್ಡ ಕುಸಿತದಿಂದ ಮಣ್ಣಿನ ಜತೆಗೆ, ಕೆಸರು ನೀರು ಕೂಡ ಮನೆಗಳಿಗೆ ನುಗ್ಗಿತ್ತು. ಯಾವ ಕಾರಣದಿಂದ ಗುಡ್ಡ ಕುಸಿಯಿತು ಎಂದು ಯಾರಿಗೂ ಗೊತ್ತಾಗಿರಲಿಲ್ಲ. ಅದು ನಿಧಿ, ಬಳಿಕ ಅದು ಸಮುದ್ರ ಸೇರಿದೆ ಎಂದೆಲ್ಲ ಘಟನೆ ನಡೆದ ಬಳಿಕ ವದಂತಿ ಹಬ್ಬಿತ್ತು.
ಹೆಚ್ಚಿನ ಮಳೆ ಕಾರಣ
ಭೂಮಿಯ ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಳೆ ನೀರು ಹರಿದರೆ ಈ ರೀತಿ ಗುಡ್ಡ ಕುಸಿತ ಉಂಟಾಗುತ್ತದೆ ಎನ್ನಲಾಗಿದೆ. ಗುಡ್ಡದ ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗಿ ಅದರ ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರು ನಿರಂತರ ಹರಿಯುವುದರಿಂದ ಮಣ್ಣಿನ ಒಳಪದರ ಮೃದುವಾಗಿ, ಈ ರೀತಿ ಕುಸಿಯುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಗುಡ್ಡ ಭಾಗದ ಮರಗಳು ನಾಶವಾದರೆ ಮಣ್ಣಿನ ಹಿಡಿದಿಟ್ಟುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ಅಂತಹ ಮಣ್ಣು ಮೃದುವಾಗಿ ಒಮ್ಮೆಲೆ ಕುಸಿಯುತ್ತದೆ ಎನ್ನುವ ಅಭಿಪ್ರಾಯವೂ ಇದೆ. ಆದರೆ ಅಲ್ಲಿನ ಪರಿಸರ, ಘಟ್ಟದ ಸಾಲು, ಭೂಪದರ ಪರಿಶೀಲಿಸದೆ ನೋಡದೆ ಇದೇ ಕಾರಣಕ್ಕೆ ಗುಡ್ಡ ಕುಸಿದಿದೆ ಎಂದು ಹೇಳುವಂತಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.