Land Trades Builders: ಭಾರತ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನ ಆಚರಣೆ

Team Udayavani, Oct 1, 2024, 11:49 PM IST

Land Trades Builders: ಭಾರತ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನ ಆಚರಣೆ

ಮಂಗಳೂರು: ನಗರದ ಲ್ಯಾಂಡ್‌ ಟ್ರೇಡ್ಸ್‌ ಬಿಲ್ಡರ್ ಮತ್ತು ಡೆವಲಪರ್ ವತಿಯಿಂದ ಬಂಟ್ವಾಳ ತಾಲೂಕಿನ ಕನ್ಯಾನದಲ್ಲಿರುವ ಭಾರತ್‌ ಸೇವಾಶ್ರಮದ ಹಿರಿಯ ನಿವಾಸಿಗಳ ಜತೆ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು.

10 ಸೆಂಟ್ಸ್‌ ಜಾಗದಲ್ಲಿ 1964ರಲ್ಲಿ ಐವರು ಅನಾಥರೊಂದಿಗೆ ಸೇವಾ ಶ್ರಮವನ್ನು ಆರಂಭಿಸಿದ ಸ್ಥಾಪಕ ಧಿರೇಂದ್ರನಾಥ್‌ ಭಟ್ಟಾಚಾರ್ಯ ಅವರ ಭಾವಚಿತ್ರದ ಮುಂದೆ ದೀಪ ಬೆಳಗಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಈ ವೇಳೆ ಲ್ಯಾಂಡ್‌ ಟ್ರೇಡ್ಸ್‌ ಮಾಲಕ ಕೆ.ಶ್ರೀನಾಥ ಹೆಬ್ಟಾರ್‌ ಮಾತನಾಡಿ, ಭಾರತ ಸೇವಾಶ್ರಮವು ಸಮಾಜಕ್ಕೆ ನೀಡುತ್ತಿರುವ ಮಾನವೀಯ ಸೇವೆ ಗಳನ್ನು ಸ್ಮರಿಸಿ ಸ್ಥಾಪಕರನ್ನು ಶ್ಲಾಘಿಸಿದರು.

ಧಿರೇಂದ್ರನಾಥ್‌ ಅವರು ಬಾಂಗ್ಲಾದಿಂದ ನಿರಾಶ್ರಿತರಾಗಿ ಇಲ್ಲಿಗೆ ಬಂದವರು, ತಮಗೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಸಾವಿರಾರು ಮಹಿಳೆಯರು, ಮಕ್ಕಳು ಹಾಗೂ ಮಾನಸಿಕ ಆರೋಗ್ಯ ಸವಾಲೆದುರಿಸುತ್ತಿರುವ ವರನ್ನು ಸಲಹಿದ್ದಾರೆ ಎಂದು ನೆನಪಿಸಿಕೊಂಡರು.

ಸ್ಥಾಪಕರ ಪತ್ನಿ ಸರೋಜಿನಿ ಅಮ್ಮ ಅವರನ್ನು ಹೆಬ್ಟಾರ್‌ ಇದೇ ಸಂದರ್ಭ ಸಮ್ಮಾನಿಸಿದರು. ಕಾರ್ಯದರ್ಶಿ ಈಶ್ವರ ಭಟ್‌ ಹಾಗೂ ಅವರ ಪತ್ನಿ, ಪರಶುರಾಮ್‌ ಅವರನ್ನು ಕೂಡ ಗೌರವಿಸಲಾಯಿತು.

ಈ ವೇಳೆ ಈಶ್ವರ ಭಟ್‌ ಮಾತನಾಡಿ, ಲ್ಯಾಂಡ್‌ಟ್ರೇಡ್ಸ್‌ ಸಂಸ್ಥೆಯವರು ಹಲವು ವರ್ಷಗಳಿಂದ ಸೇವಾಶ್ರಮಕ್ಕೆ ನೀಡುತ್ತಿರುವ ಸಹಕಾರ ಮತ್ತು ಕೊಡುಗೆಗಳನ್ನು ಸ್ಮರಿಸಿದರು. ಧಿರೇಂದ್ರನಾಥ್‌ ಅವರು ಸಾವಿರಾರು ಜನರ ಬದುಕನ್ನು ಬದಲಾಯಿಸಿದವರು, ಆರಂಭದ ಐವರು ಅನಾಥರಲ್ಲಿ ಒಬ್ಬರು ಬ್ಯಾಂಕ್‌ ಮ್ಯಾನೇಜರ್‌ ಆಗಿ ನಿವೃತ್ತರಾದರೆ ಉಳಿದವರು ಕೂಡ ತಮ್ಮ ಯಶಸ್ವಿ ಜೀವನ ಕಂಡಿದ್ದಾರೆ, ಇದುವರೆಗೆ 13 ಮಂದಿ ಸೈನಿಕರಾಗಿದ್ದಾರೆ, ಇಬ್ಬರು ಸಾಫ್ಟ್‌ ವೇರ್‌ ಎಂಜಿನಿಯರ್‌ಗಳಾಗಿ ಯುಎಸ್‌ಎನಲ್ಲಿದ್ದಾರೆ, ಅನೇಕ ಮಹಿಳೆಯರು ಅನಾಥರಾಗಿ ಬಂದವರು ಶಿಕ್ಷಣ ಪಡೆದು ಬದುಕಿನಲ್ಲಿ ಸಾರ್ಥಕತೆ ಕಂಡಿದ್ದಾರೆ ಎಂದು ಹೇಳಿದರು.

ಆಶ್ರಮವಾಸಿಗಳಿಗೆ ಪೂರಕವಾದ ಕಾಣಿಕೆ, ಹೊದಿಕೆ,ಬೆಚ್ಚಗಿನ ಬಟ್ಟೆ, ವೈದ್ಯಕೀಯ ಉಪಕರಣ ಇತ್ಯಾದಿಗಳನ್ನು
ವಿತರಿಸಲಾಯಿತು. ಪ್ರಸ್ತುತ ಸೇವಾಶ್ರಮದಲ್ಲಿ 130 ಹಿರಿಯ ನಾಗರಿಕರು, 20 ಅನಾಥರು ಆಶ್ರಯ ಪಡೆದಿದ್ದಾರೆ.

ಲ್ಯಾಂಡ್‌ಟ್ರೇಡ್ಸ್‌ ಸಿಇಒ ರಮೀತ್‌ ಕುಮಾರ್‌ ಸಿದ್ದಕಟ್ಟೆ ನಿರೂಪಿಸಿದರು. ಎಚ್‌ಆರ್‌ ಹಾಗೂ ಅಡ್ಮಿನ್‌ ಪದ್ಮನಾಭ ಶೆಟ್ಟಿ, ಮಾರ್ಕೆಟಿಂಗ್‌ ಮುಖ್ಯಸ್ಥ ದರ್ಶನ್‌ ಪಿ.ವಿ. ಸಂಯೋಜಿಸಿದರು. ವಿದ್ಯಾಲಕ್ಷ್ಮಿ ಹಾಗೂ ನಿಯತ ಭಟ್‌ ಸಹಕಾರವಿತ್ತರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ

Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ

R.Ashok

MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ: ಅಶೋಕ್‌

Karkala: ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು

Karkala: ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Uppinangady: ಕಾರು ಢಿಕ್ಕಿ; ವಿದ್ಯಾರ್ಥಿ ಸಾವು

Uppinangady: ಕಾರು ಢಿಕ್ಕಿ; ವಿದ್ಯಾರ್ಥಿ ಸಾವು

Road Mishap: ಬೈಕ್‌ ಸವಾರನ ಕೈ ಮೇಲೆ ಹರಿದ ಬಸ್ಸಿನ ಚಕ್ರ; ಗಂಭೀರ ಗಾಯ

Road Mishap: ಬೈಕ್‌ ಸವಾರನ ಕೈ ಮೇಲೆ ಹರಿದ ಬಸ್ಸಿನ ಚಕ್ರ; ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

D.K.,ಜಿಲ್ಲಾ ನಿ.ಸ.ನೌಕರರ ವೇದಿಕೆಯಿಂದ ಪ್ರತಿಭಟನೆ: ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲು ಆಗ್ರಹ

D.K.,ಜಿಲ್ಲಾ ನಿ.ಸ.ನೌಕರರ ವೇದಿಕೆಯಿಂದ ಪ್ರತಿಭಟನೆ: ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲು ಆಗ್ರಹ

Moodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆMoodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

Moodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

Mangaluru: ಹೈಕೋರ್ಟ್‌ ಪೀಠ: ಹೋರಾಟಕ್ಕೆ ಸಿದ್ಧತೆ

Mangaluru: ಹೈಕೋರ್ಟ್‌ ಪೀಠ: ಹೋರಾಟಕ್ಕೆ ಸಿದ್ಧತೆ

Brijesh Chowta: ಕರಾವಳಿಯ ಐಟಿ ಕ್ಷೇತ್ರ ಸುಧಾರಣೆಗೆ ಕಾರ್ಯಪಡೆ

Brijesh Chowta: ಕರಾವಳಿಯ ಐಟಿ ಕ್ಷೇತ್ರ ಸುಧಾರಣೆಗೆ ಕಾರ್ಯಪಡೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ

Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ

R.Ashok

MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ: ಅಶೋಕ್‌

Karkala: ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು

Karkala: ರಾಷ್ಟ್ರಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.