ಸಿರಿಬಾಗಿಲು: ಹಳಿಗೆ ಕುಸಿದ ಗುಡ್ಡ
Team Udayavani, Jul 4, 2018, 4:10 AM IST
ಸಕಲೇಶಪುರ/ ಸುಬ್ರಹ್ಮಣ್ಯ: ಮಂಗಳೂರು-ಹಾಸನ ರೈಲು ಮಾರ್ಗದ ಎಡಕುಮೇರಿ-ಕಡಗರಹಳ್ಳಿ ನಿಲ್ದಾಣದ ನಡುವೆ 85ನೇ ಮೈಲು ಎಡಕುಮೇರಿ ಬಳಿ ಮಂಗಳವಾರ ಗುಡ್ಡ ಜರಿದು ಮಣ್ಣು, ಮರಗಳು ಹಳಿಗಳ ಮೇಲೆ ಬಿದ್ದಿವೆ. ಪರಿಣಾಮ ಸುಬ್ರಹ್ಮಣ್ಯ ರಸ್ತೆ – ಸಕಲೇಶಪುರ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಸಂಚರಿಸಬೇಕಿದ್ದ ಮಂಗಳೂರು – ಬೆಂಗಳೂರು ರೈಲನ್ನು ಎಡಕುಮೇರಿಯಿಂದ ವಾಪಸು ಮಂಗಳೂರಿಗೆ ಕರೆಸಿಕೊಳ್ಳಲಾಗಿದೆ.
ಪುತ್ತೂರಿನಿಂದ ಮಧ್ಯಾಹ್ನ 1.20ಕ್ಕೆ ಹೊರಟ ರೈಲು ಸಂಜೆ 5.30ಕ್ಕೆ ಪುತ್ತೂರಿಗೆ ಮರಳಿದೆ. ರಾತ್ರಿ 8 ಗಂಟೆವರೆಗೆ ಪ್ರಯಾಣಿಕರು ರೈಲು ನಿಲ್ದಾಣದ ಆವರಣದಲ್ಲೇ ದಿಕ್ಕು ತೋಚದೆ ಕುಳಿತಿದ್ದರು. ಮಕ್ಕಳ ಅಳು, ದೊಡ್ಡವರ ಜಗಳ, ಕೆಲಸಕ್ಕೆಂದು ಹೊರಟು ನಿಂತವರ ತೊಳಲಾಟ ಕಂಡುಬಂತು. ಬಳಿಕ 9 ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕಳುಹಿಸಲಾಯಿತು. ಕೆಲವು ಪ್ರಯಾಣಿಕರು ಟಿಕೆಟ್ ಹಣ ಹಿಂದಕ್ಕೆ ಪಡೆದುಕೊಂಡಿದ್ದಾರೆ. ರೈಲು ಘಾಟಿ ಏರಲಿರುವುದರಿಂದ ಸುಬ್ರಹ್ಮಣ್ಯದಲ್ಲಿ ಹಿಂಬದಿಗೂ ಎಂಜಿನ್ ಒಂದನ್ನು ಜೋಡಿಸಲಾಗುತ್ತದೆ. ಆ ಕಾರಣದಿಂದಾಗಿ ರೈಲು ಎಡಕುಮೇರಿ ತಲುಪಿದ್ದರೂ ಹಿಂದಕ್ಕೆ ಮರಳಿ ಬರಲು ಸಾಧ್ಯವಾಯಿತು.
ರೈಲು ಸಂಚಾರ ಯಥಾಸ್ಥಿತಿಗೆ
ರಾತ್ರಿ ಬೆಂಗಳೂರಿಗೆ ತೆರಳುವ ರೈಲು ಯಥಾ ಪ್ರಕಾರ 9 ಗಂಟೆಗೆ ಮಂಗಳೂರಿನಿಂದ ಹೊರಟಿದೆ ಎಂದು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಶನ್‌ನ ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ ಕಿಶನ್ ಕುಮಾರ್ ತಿಳಿಸಿದ್ದಾರೆ.
ಪಾರಾದ ರೈಲು
ಯಶವಂತಪುರ – ಮಂಗಳೂರು ರೈಲು ಪೂರ್ವಾಹ್ನ 11.30ಕ್ಕೆ ಸಕಲೇಶಪುರ ನಿಲ್ದಾಣದಿಂದ ಹೊರಟಿದ್ದು, ಸಿರಿ ಬಾಗಿಲನ್ನು ದಾಟಿ 20 ನಿಮಿಷಗಳಲ್ಲಿ ಹಳಿಯ ಮೇಲೆ ಗುಡ್ಡ ಕುಸಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.