ಲಾೖಲ: ಸಮಾನತೆಗಾಗಿ ದಲಿತರೊಂದಿಗೆ ಸಹಪಂಕ್ತಿ ಭೋಜನ
Team Udayavani, Jan 26, 2020, 5:16 AM IST
ಬೆಳ್ತಂಗಡಿ: ಸಮಾಜದಲ್ಲಿ ಸಾಕು ಪ್ರಾಣಿಗಳಿಗಿಂತಲೂ ಮನುಷ್ಯನನ್ನು ಕಡೆಗಣಿಸಿರುವುದೇ ಇಂದು ದಲಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗು ತ್ತಿಲ್ಲ ಎಂದು ತುಮಕೂರು ತುರ್ವೇಕೆರೆ ಬೀಕಲ್‌ಕೆರೆ ಅಲ್ಲಮಪ್ರಭು ಮಠದ ಶ್ರೀ ತಿಪ್ಪೇರುದ್ರ ಸ್ವಾಮೀಜಿ ವಿಷಾದಿಸಿದರು.
ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ಹಾಗೂ ಶ್ರಮಶಕ್ತಿ ಸ್ವ ಸಹಾಯ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ರವಿವಾರ ಲಾೖಲ ಅಂಬೇಡ್ಕರ್ ರಸ್ತೆಯ ಪುತ್ರಬೈಲು ಎಂಬಲ್ಲಿ ದಲಿತರೊಂದಿಗೆ ಸಹಪಂಕ್ತಿ ಭೋಜನ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜವನ್ನು ಒಗ್ಗೂಡಿಸಲು, ಸಮಾ ನತೆಗಾಗಿ ಹೋರಾಟ ಅನಿವಾರ್ಯ ಎಂದು ಜಾತಿ ತಾರತಮ್ಯ ವಿರುದ್ಧ ಮತ್ತು ಸಂವಿಧಾನ ರಕ್ಷಣೆಗಾಗಿ ಗಣರಾಜ್ಯೋತ್ಸವ ಸಂದರ್ಭ ನಡೆದ ಸಹಪಂಕ್ತಿ ಭೋಜನ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಸಮಾಜದ ಮುಖ್ಯ ವಾಹಿನಿಗೆ ಬರುವ ಅವಕಾಶಗಳನ್ನು ಸರಕಾರ ಪ್ರತಿಯೊಬ್ಬರಿಗೂ ರೂಪಿಸಿದೆ. ನಾವು ಹಿಂದುಳಿದವರು ಎಂಬ ಭಾವನೆ ಬಿಟ್ಟು ಸಮಾಜದಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುನ್ನೆಲೆಗೆ ಬರಬೇಕು. ಹಿಂದುಳಿದ ಸಮಾಜಕ್ಕೆ ಶಿಕ್ಷಣ ಕಲ್ಪಿಸುವ ಮೂಲಕ ದೌರ್ಜನ್ಯದಿಂದ ಹೊರ ಬರಬರಲು ಸಾಧ್ಯ ಎಂದು ಹೇಳಿದರು.
ಪೂಂಜಾಲಕಟ್ಟೆ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಸುಜೀತ್ ಮಾತನಾಡಿ, ಸಂವಿ ಧಾನ ರಚನೆ ಮಾಡಿಕೊಟ್ಟ ದಿನದಂದು ಆಯೋಜಿಸಿದ ಸಹಪಂಕ್ತಿ ಭೋಜನ ಅರ್ಥಪೂರ್ಣ ಎಂದು ಹೇಳಿದರು.
ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಂ. ಶುಭಕೋರಿದರು.ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಎಲ್. ಸ್ವಾಗತಿಸಿ ವಂದಿಸಿದರು.
ಸಮಾನತೆಯ ಸಂದೇಶ
ದಲಿತ ಕೊರಗಪ್ಪ ಅವರ ಮನೆ ಯಲ್ಲಿ ಶ್ರೀ ತಿಪ್ಪೇರುದ್ರ ಸ್ವಾಮೀಜಿ, ತಹಶೀಲ್ದಾರ್ ಸಹಿತ ಅತಿಥಿಗಳು ಸಹಪಂಕ್ತಿ ಭೋಜನ ಸವಿದು ಸಮಾನತೆಯ ಸಂದೇಶ ಸಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.