Mangaluru: ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ಕೃಷಿಕರಿಗೆ ನೆರವು: ಕೇಂದ್ರಕ್ಕೆ ಮನವಿ


Team Udayavani, Nov 8, 2024, 10:55 AM IST

Mangaluru: ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ಕೃಷಿಕರಿಗೆ ನೆರವು: ಕೇಂದ್ರಕ್ಕೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗ ಬಾಧೆಯಿಂದ ತೀವ್ರವಾಗಿ ತತ್ತರಿಸಿದ್ದು ಕೇಂದ್ರ ಸರಕಾರ ತತ್‌ಕ್ಷಣವೇ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ಗೆ ಮನವಿ ಮಾಡಿದ್ದಾರೆ.

ಈ ಬಾರಿ ದಕ್ಷಿಣ ಕನ್ನಡದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಕಾಡುತ್ತಿದ್ದು, ಅಡಿಕೆ ಬೆಳೆಯನ್ನೇ ನಂಬಿರುವ ಲಕ್ಷಾಂತರ ಕೃಷಿಕರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ರೋಗಬಾಧೆಯಿಂದ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕಾದರೆ ಕೇಂದ್ರ ಸರಕಾರ ಕೂಡಲೇ ಎಲೆ ಚುಕ್ಕಿ ರೋಗವನ್ನು ಗಂಭೀರವಾಗಿ ಪರಿಗಣಿಸಿ ಈ ರೋಗದ ಬಗ್ಗೆ ರೈತರು ಹಾಗೂ ಕೃಷಿ ವಿಸ್ತರಣೆ ವಲಯದವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಬೇಕು. ಆ ಮೂಲಕ ಎಲೆ ಚುಕ್ಕಿ ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ಕೀಟನಾಶಕ ಸಿಂಪಡಣೆ, ಜಾಗೃತಿ ಮತ್ತು ಇತರ ಕಾರ್ಯ-ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು. ಇದರಿಂದ ಕರಾವಳಿ ಭಾಗದ ಅಡಿಕೆ ಕೃಷಿಕರು ಹಾಗೂ ಅಡಿಕೆ ಉದ್ಯಮವನ್ನು ಎಲೆ ಚುಕ್ಕಿ ರೋಗಬಾಧೆ ಸಮಸ್ಯೆಯಿಂದ ಪಾರು ಮಾಡಬಹುದು ಎಂದು ಸಂಸದರು ಸಲಹೆ ನೀಡಿದ್ದಾರೆ.

ಕಾಫಿ ಬೆಳೆಗೆ ಉತ್ತೇಜನಕ್ಕೂ ಮನವಿ
ದಕ್ಷಿಣ ಕನ್ನಡದಲ್ಲಿ ಕಾಫಿ ಬೆಳೆಗೆ ಪೂರಕ ವಾತವಾರಣವಿದ್ದು, ಕಾಫಿ ಬೆಳೆಯನ್ನು ಸಾಂಪ್ರದಾಯಿಕ ಬೆಳೆಯಾಗಿ ಪ್ರೋತ್ಸಾಹಿಸುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಫಿ ಬೋರ್ಡ್‌ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಸಂಸದರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪಿಯುಷ್‌ ಗೋಯೆಲ್‌ಗ‌ೂ ಪ್ರತ್ಯೇಕ ಪತ್ರ ಬರೆದಿದ್ದಾರೆ.

ದ.ಕ.ದಲ್ಲಿ ಅಡಿಕೆಗೆ ಪರ್ಯಾಯ ವಾಣಿಜ್ಯ ಬೆಳೆಯಾಗಿ ಕಾಫಿ ಬೆಳೆಯಲು ಪೂರಕ ಹವಾಗುಣ ಇದೆ. ಚಿಕ್ಕಮಗಳೂರು, ಕೊಡಗು ಸಹಿತ ಮಲೆನಾಡಿನಂತೆ ದ.ಕ.ದಲ್ಲೂ ಕಾಫಿಯನ್ನು ಸಾಂಪ್ರದಾಯಿಕ ಬೆಳೆಯಾಗಿ ಬೆಳೆಯುವುದಕ್ಕೆ ಪೂರಕ ಪರಿಸರ ವ್ಯವಸ್ಥೆ ಇದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕಾಫಿ ಮಂಡಳಿ ಮೂಲಕ ಕಾಫಿ ಬೆಳೆಗಾರರಿಗೆ ತಾಂತ್ರಿಕ ನೆರವು, ತರಬೇತಿ ಹಾಗೂ ಮಾರುಕಟ್ಟೆ ಲಭ್ಯತೆಗೆ ಬೇಕಾಗುವ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಟಾಪ್ ನ್ಯೂಸ್

Arrest

Ballari: ಮಕ್ಕಳ ತಜ್ಞ ವೈದ್ಯ ಅಪಹರಣ ಪ್ರಕರಣ: ಎ1 ಆರೋಪಿಯನ್ನೂ ಬಂಧಿಸಿದ ಪೊಲೀಸರು

vijayendra-3

BJP; ಘೋಷಣೆಯಾಗಿರುವ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ವಿಜಯೇಂದ್ರ

Aravind-Kejri–MLA-resign

Delhi Election: ಚುನಾವಣೆಗೂ ಮೊದಲೇ ಕೇಜ್ರಿವಾಲ್‌ಗೆ ಆಘಾತ; ಆಪ್‌ ತೊರೆದ 7 ಶಾಸಕರು!

1-wqewq

Maha Kumbh; ಪ್ರಯಾಗ್ ರಾಜ್ ನಲ್ಲಿ ಯಾತ್ರಿಕರಿಗೆ ಈಗ ನಡೆಯುವುದೇ ಸವಾಲು..!!

CTD-Nagasadhu-Died

Stampede: ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಾಸಾಧು ಮೃತ್ಯು!

Shivaraj-Tandadagi

ED ಬಿಜೆಪಿಯ ಒಬ್ಬರಿಗೂ ನೋಟಿಸ್ ಕೊಟ್ಟಿಲ್ಲ: ಸಚಿವ ತಂಗಡಗಿ

ವಿಶೇಷ ಚೇತನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 5 ವರ್ಷ ಕಾರಾಗೃಹ ಶಿಕ್ಷೆ

Dharwad: ವಿಶೇಷ ಚೇತನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 5 ವರ್ಷ ಕಾರಾಗೃಹ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಮೇಲೆ ಮತ್ತೊಂದು ಗಂಭೀರ ಆರೋಪ

Mangaluru: ರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಮೇಲೆ ಮತ್ತೊಂದು ಗಂಭೀರ ಆರೋಪ

6

Mulki ರೈಲು ನಿಲ್ದಾಣಕ್ಕೆ ಸಿಗಲಿದೆ ಹೊಸ ರೂಪ

5

Moodubidire ಮಾರುಕಟ್ಟೆ ಕಟ್ಟಡ; ಖಟ್ಲೆ ಕಾಟದಿಂದ ಕೊನೆಗೂ ಮುಕ್ತಿ?

4(2

Mangaluru: ರಂಗಿನ ಮಾತು ಮಾತ್ರ, ಮಂದಿರವಿಲ್ಲ !

Prayagraj: ಕುಂಭಮೇಳದಿಂದ ಕರಾವಳಿಗರ ಮಾತು: ವ್ಯವಸ್ಥೆ ಇದೆ, ಆದರೂ ಜಾಗ್ರತೆ ಇರಲಿ

Prayagraj: ಕುಂಭಮೇಳದಿಂದ ಕರಾವಳಿಗರ ಮಾತು: ವ್ಯವಸ್ಥೆ ಇದೆ, ಆದರೂ ಜಾಗ್ರತೆ ಇರಲಿ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Arrest

Ballari: ಮಕ್ಕಳ ತಜ್ಞ ವೈದ್ಯ ಅಪಹರಣ ಪ್ರಕರಣ: ಎ1 ಆರೋಪಿಯನ್ನೂ ಬಂಧಿಸಿದ ಪೊಲೀಸರು

vijayendra-3

BJP; ಘೋಷಣೆಯಾಗಿರುವ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ವಿಜಯೇಂದ್ರ

Aravind-Kejri–MLA-resign

Delhi Election: ಚುನಾವಣೆಗೂ ಮೊದಲೇ ಕೇಜ್ರಿವಾಲ್‌ಗೆ ಆಘಾತ; ಆಪ್‌ ತೊರೆದ 7 ಶಾಸಕರು!

1-asdsad

Micro Finance; ಕಂಪನಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಡಕ್ ಎಚ್ಚರಿಕೆ

1-wqewq

Maha Kumbh; ಪ್ರಯಾಗ್ ರಾಜ್ ನಲ್ಲಿ ಯಾತ್ರಿಕರಿಗೆ ಈಗ ನಡೆಯುವುದೇ ಸವಾಲು..!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.