ನಾಲ್ಕೇ ವರ್ಷಗಳಲ್ಲಿ ಸೋರಿಕೆ: ಕಲಾಕೃತಿಗೆ ಧಕ್ಕೆ ಭೀತಿ


Team Udayavani, Aug 6, 2017, 8:00 AM IST

0508gns1b.jpg

ಪುತ್ತೂರು: ಡಾ| ಶಿವರಾಮ ಕಾರಂತರು ಓಡಾಡಿದ ಪರ್ಲಡ್ಕ ಬಾಲ ವನದ ಗ್ಯಾಲರಿ ಸೋರುತಿದೆ. ಅಮೂಲ್ಯ ಕಲಾಕೃತಿ, ಗ್ರಂಥಾಲಯಕ್ಕೆ ಧಕ್ಕೆಯಾಗುವ ಭೀತಿ ಎದುರಾಗಿದೆ. ನಾಲ್ಕೇ ವರ್ಷಗಳಲ್ಲಿ ಕೋಟಿ ರೂ. ವೆಚ್ಚದ ಗ್ಯಾಲರಿ ಕಟ್ಟಡದ ಸೋರುತ್ತಿರುವುದರಿಂದ ಕಾಮಗಾರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನು ಮಾನಗಳು ಕಾಡತೊಡಗಿವೆ. ನಗರದ ಪರ್ಲಡ್ಕ ಬಾಲವನ ಆವರ ಣದಲ್ಲಿ ಸ್ವಿಮ್ಮಿಂಗ್‌ ಫೂಲ್‌ ಖ್ಯಾತಿ ಪಡೆಯಿತು. 

ಇದರ ಬಳಿಕ ಮಕ್ಕಳಿಗೆ ಸ್ಕೇಟಿಂಗ್‌ ತರಬೇತಿ ಕೇಂದ್ರವೂ ಬೇಕೆಂಬ ಇಚ್ಛೆಯನ್ನು ಆಡಳಿತ ಮನಗಂಡಿತು. ಈ ಹಿನ್ನೆಲೆಯಲ್ಲಿ  2013ರಲ್ಲಿ ಸ್ಕೇಟಿಂಗಿಗೆ ಅನುಕೂಲವಾಗುವಂತೆ ಕಟ್ಟಡ ರಚಿಸ ಲಾಯಿತು. ಸ್ಕೇಟಿಂಗ್‌ ತರಬೇತಿ ಕೇಂದ್ರಕ್ಕೆ ಸಾಹಿತ್ಯ ವಲಯದಲ್ಲಿ ವಿರೋಧ ಕೇಳಿಬಂದ ಪರಿಣಾಮ ಕಟ್ಟಡ ಗ್ಯಾಲರಿಯಾಗಿ ಬದ ಲಾವಣೆಗೊಂಡಿತು.

ಗ್ಯಾಲರಿ ವಿನ್ಯಾಸ ಆಕರ್ಷಕವಾಗಿದೆ. ಸ್ಕೇಟಿಂಗ್‌ ತರಬೇತಿ ಪಡೆಯಲು ಅನು ಕೂಲವಾಗುವಂತೆ ಟ್ರಾÂಕ್‌ ನಿರ್ಮಿಸಿ, ಅದಕ್ಕೆ ಕಟ್ಟಡ ನಿರ್ಮಿಸಲಾಗಿದೆ. ಅಂದರೆ ಆಯ ತಾಕಾರದ ಕಟ್ಟಡ. ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಕಟ್ಟಡದ ಒಂದು ಭಾಗವನ್ನು   ಗೋಡೆ  ಕಟ್ಟಿ ಗ್ರಂಥಾಲಯವಾಗಿ ಪರಿವರ್ತಿ ಸಲಾಯಿತು.

ಜೋಪಾನವಾಗಿ ತೆಗೆದಿಡಬೇಕಿದೆ 
ಕಟ್ಟಡದ ಮೂರು ಭಾಗದಲ್ಲಿ ಪ್ರೊಫೆ ಷನಲ್‌ ಕಲಾವಿದರು ರಚಿಸಿದ ಕಲಾಕೃತಿಗಳು. ಇನ್ನೊಂದು ಭಾಗದಲ್ಲಿ ಗ್ರಂಥಾಲಯ. ಸುಮಾರು 49 ಅಮೂಲ್ಯ ಕಲಾಕೃತಿಗಳಿವೆ. ಶಿವರಾಮ ಕಾರಂತರು ರಚಿಸಿದ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಕಲಾಕೃತಿಗಳು ರೂಪು ಪಡೆದಿವೆ. ಶಿವರಾಮ ಕಾರಂತರು ರಚಿಸಿದ ಸುಮಾರು 400ಕ್ಕೂ ಮಿಕ್ಕಿ ಪುಸ್ತಕಗಳ ಪೈಕಿ 80ಕ್ಕೂ ಅಧಿಕ ಪುಸ್ತಕಗಳು ಇಲ್ಲಿವೆ. ಇವುಗಳನ್ನು ಜೋಪಾನವಾಗಿ ತೆಗೆದಿಡಬೇಕಾದ ಅಗತ್ಯವಿದೆ. ಆದರೆ ಮಳೆ ನೀರು ಬಿದ್ದು, ಕೆಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

1932ರಲ್ಲಿ ಶಿವರಾಮ ಕಾರಂತರು ಆರಂಭಿಸಿದ ಮಕ್ಕಳ ಕೂಟವನ್ನು ಮುಂದು ವರಿಸಿಕೊಂಡು ಹೋಗಬೇಕೆಂದು ಇದೇ ಗ್ಯಾಲರಿಯಲ್ಲಿ ಶಿಬಿರಗಳನ್ನು ಆಯೋಜಿ ಸಲಾಗುತ್ತಿದೆ. 

ಮಳೆಗಾಲದಲ್ಲಿ ನೀರು ಸೋರು
ವುದರಿಂದ, ಸೋರಿಕೆಯಾಗದ ಜಾಗ  ಹುಡುಕಿ ಮಕ್ಕಳು ಕುಳಿತುಕೊಳ್ಳ ಬೇಕಿದೆ.  ಸುಮಾರು 24 ಶಾಲೆಗಳ ಮಕ್ಕಳು  ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ. ಮುಖ್ಯ ವಾಗಿ ಶಿವರಾಮ ಕಾರಂತರ ಜನ್ಮದಿನವಾದ ಅ. 10 ಹಾಗೂ ಮಕ್ಕಳ ದಿನಾಚರಣೆಯಂದು ಶಿಬಿರ ಹಮ್ಮಿಕೊಳ್ಳಲಾಗುತ್ತದೆ.

ಶಿವರಾಮ ಕಾರಂತರ ಗ್ಯಾಲರಿ ಹಿಂದಿನಂತೆ ಕ್ರಿಯಾಶೀಲವಾಗಿಲ್ಲ ಎಂಬು ದಂತು ನಿಜ. ಹಾಗೆಂದು ಇರುವ ಆಸ್ತಿ ಯನ್ನಾದರೂ ಜೋಪಾನ ಮಾಡುವ ಹೊಣೆಗಾರಿಕೆ ಇದೆಯಲ್ಲ. ಈ ನಿಟ್ಟಿನಲ್ಲಿ ಆಡಳಿತ ಯೋಚನೆ ಮಾಡಬೇಕಾಗಿದೆ.

ಮಳೆ ನೀರು ಬಿದ್ದ ಕಾರಣ ಇಲೆಕ್ಟ್ರಾನಿಕ್‌ ಉಪಕರಣಗಳು ಕೈಕೊಡಲು ಆರಂಭಿಸಿವೆ. ವಿದ್ಯುತ್‌ ಬಲ್ಬ್ಗಳ ಒಳಗಡೆ ನೀರು ನಿಂತಿವೆ. ಸರಿಯಾಗಿ ಬೆಳಕು ನೀಡುತ್ತಿಲ್ಲ. ಸಿಡಿಯುವ ಸಂಭವವೂ ಇದೆ. ಹೀಗೆ ಮುಂದುವರಿದರೆ ಗೋಡೆಗಳಲ್ಲಿ ವಿದ್ಯುತ್‌ ಸಂಚಾರ ಉಂಟಾ ಗಬಹುದು. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವುದು ಒಳಿತು.

ಕಾರಂತರ ಕೃತಿಗೆ ಅಪಚಾರ
ಗ್ಯಾಲರಿಯ ಗೋಡೆಗೆ ಕಲಾಕೃತಿಗಳನ್ನು ನೇತು ಹಾಕಲಾಗಿದೆ. ಇವುಗಳ ಮೇಲೆ ಮಳೆ ನೀರು ಬಿದ್ದು ವಿರೂಪಗೊಳ್ಳುವ ಸಂಭ ವವಿದೆ. ಅವುಗಳು ವಿರೂಪಗೊಂಡರೆ, ಶಿವರಾಮ ಕಾರಂತರ ಕೃತಿಗೇ ಅಪಚಾರ ಎಸಗಿದಂತೆ. 

ಪುಸ್ತಕಗಳಿಗೂ ಹಾನಿ!
ನೂರಾರು ಪುಸ್ತಕಗಳು ಗ್ಯಾಲರಿಯೊಳಗಡೆಯಿದೆ. ಕೆಲ ಸಮಯಗಳ ಹಿಂದೆ ಇಲ್ಲಿ ಆರ್ಯಾಪು ಗ್ರಾ.ಪಂ.ನ ಗ್ರಂಥಾಲಯ ಇತ್ತು. ಸದ್ಯ ಇದನ್ನು ಕುಂಜೂರು ಪಂಜಕ್ಕೆ ಶಿಫ್ಟ್‌ ಮಾಡಲಾಗಿದೆ. ಒಂದಷ್ಟು ಪುಸ್ತಕಗಳು ಸದ್ಯ ಇದ್ದು, ಅದನ್ನು ಜೋಪಾನವಾಗಿ ಇಡಬೇಕಾಗಿದೆ. ಆಸಕ್ತ ಓದುಗರು, ಪ್ರವಾಸಿಗರು ಸಂದರ್ಶನ ನೀಡಿ, ಪುಸ್ತಕಗಳತ್ತ ಗಮನ ಹರಿಸುತ್ತಾರೆ. ಗ್ರಂಥಾಲಯದ ಒಂದು ಗೋಡೆಗೆ ಸಂಪೂರ್ಣ ಗಾಜು ಅಳವಡಿಸಿದ್ದು, ಇದರ ಸೆರೆಯಿಂದಲೂ ನೀರು ಒಳಬರುತ್ತಿದೆ.

ಗಮನಕ್ಕೆ ತರುತ್ತೇನೆ
ಗ್ಯಾಲರಿ ಸೋರಿಕೆ ಬಗ್ಗೆ  ಬಾಲವನ ಅಭಿವೃದ್ಧಿ  ಸಮಿತಿಯ ರಾಜ್ಯ ಸದಸ್ಯರಾಗಿರುವ ಸಹಾಯಕ ಆಯುಕ್ತರ ಗಮನಕ್ಕೆ ತರುತ್ತೇನೆ. ಸದ್ಯ ಸಹಾಯಕ ಆಯುಕ್ತರು ರಜೆಯಲ್ಲಿದ್ದಾರೆ. ಅವರು ಪರಿಶೀಲನೆ ಮಾಡಿ ಮಾಹಿತಿ ನೀಡಬೇಕು.

– ಅನಂತ ಶಂಕರ
ತಹಶೀಲ್ದಾರ್‌

– ವಿಶೇಷ ವರದಿ

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1

Bantwal: ಕಲ್ಲಡ್ಕ ಫ್ಲೈಓವರ್‌; ಪೂರ್ಣತೆಯತ್ತ; ಕಾಂಕ್ರೀಟ್‌ ಕಾಮಗಾರಿ ಪ್ರಗತಿ

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Court-1

Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.