‘ಹಿಂದಿ ಲೇಖಕರು ಕಂಡ ಕರ್ನಾಟಕ ದರ್ಶನ’ ಉಪನ್ಯಾಸ
Team Udayavani, May 4, 2018, 9:58 AM IST
ಉರ್ವಸ್ಟೋರ್: ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ವತಿಯಿಂದ ಡಾ| ಸುನೀತಾ ಎಂ. ಶೆಟ್ಟಿ ದತ್ತಿನಿಧಿ ಕಾರ್ಯಕ್ರಮ ಹಾಗೂ ‘ಹಿಂದಿ ಲೇಖಕರು ಕಂಡ ಕರ್ನಾಟಕ ದರ್ಶನ’ ಉಪನ್ಯಾಸ ಇಲ್ಲಿನ ಸಾಹಿತ್ಯ ಸದನದಲ್ಲಿ ಗುರುವಾರ ಜರಗಿತು.
ಉಪನ್ಯಾಸ ನೀಡಿದ ಹಿಂದಿ-ಕನ್ನಡ ಸಾಹಿತಿ ಪ್ರೊ| ಮಾಧವಿ ಭಂಡಾರಿ, ವಿಕಾಸ್‌ಕುಮಾರ್ ಚಾ ಎಂಬ ಹಿಂದಿ ಲೇಖಕರೋರ್ವರು ಬರೆದ ‘ವರ್ಷಾ ವನ್ ಕಿ ರೂಪ್ ಕಥಾ’ ಪುಸ್ತಕದಲ್ಲಿ ಕರ್ನಾಟಕದ ಆಗುಂಬೆಯ ಸಮಗ್ರ ಬದುಕನ್ನು ಚಿತ್ರಿಸಿದ್ದಾರೆ. ಇಡೀ ಆಗುಂಬೆಯ ಚಿತ್ರಣ, ಕೃಷಿ ಬದುಕು, ಅಲ್ಲಿನ ರೈತರ ಸಮಸ್ಯೆ, ಕೌಟುಂಬಿಕ ಸಮಸ್ಯೆಗಳನ್ನೂ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಕರ್ನಾಟಕದ ಮಳೆ ಕಾಡಿನ ಬಗ್ಗೆ ಹಿಂದಿ ಲೇಖಕನ ಮಿಡಿತದ ಶಕ್ತಿ ಅಪಾರವಾದುದು ಎಂದರು.
ಲಕ್ಷ್ಮೀ ಕುಂಜತ್ತೂರು ಬರೆದ ‘ಪ್ರಗತಿ ಪಥ’ ಕಾದಂಬರಿಯ ಕುರಿತು ಸಂಘದ ಸದಸ್ಯರಿಗೆ ಹಮ್ಮಿಕೊಂಡ ವಿಮರ್ಶಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಂಬಯಿಯ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಬಹುಮಾನ ವಿತರಿಸಿದರು. ಸಾಹಿತಿ ಎ. ಪಿ. ಮಾಲತಿ ಉಪಸ್ಥಿತರಿದ್ದರು.
ಮಂಜುಳಾ ಸುಕುಮಾರ್ ಸ್ವಾಗತಿಸಿದರು. ಸಂಘದ ಜತೆ ಕಾರ್ಯದರ್ಶಿ ಅರುಣಾ ನಾಗರಾಜ್ ವಂದಿಸಿದರು. ಮೋಲಿ ಮಿರಾಂದ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Bengaluru: 4 ಕೋಟಿ ಪ್ರಯಾಣಿಕರು: ಏರ್ ಪೋರ್ಟ್ ದಾಖಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.