ಮಂಗಳೂರಿನಲ್ಲಿ ಚಿರತೆ ಹೆಜ್ಜೆ ; 2ನೇ ದಿನವೂ ಕಾರ್ಯಾಚರಣೆ


Team Udayavani, Oct 6, 2021, 5:47 AM IST

ಮಂಗಳೂರಿನಲ್ಲಿ ಚಿರತೆ ಹೆಜ್ಜೆ ; 2ನೇ ದಿನವೂ ಕಾರ್ಯಾಚರಣೆ

ಮಂಗಳೂರು: ನಗರದ ಮರೋಳಿಯ ಜಯನಗರದಲ್ಲಿ ರವಿವಾರ ಸಂಜೆ ಪತ್ತೆಯಾಗಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಮಂಗಳ ವಾರವೂ ಶೋಧ ನಡೆಸಿದ್ದಾರೆ. ಸದ್ಯ ಸ್ಥಳದಲ್ಲಿ ಬೋನು ಇಡಲಾಗಿದೆ.

ರವಿವಾರ ಸಂಜೆ ಮಕ್ಕಳು ಆಡುತ್ತಿ ದ್ದಾಗ ಚಿರತೆಯನ್ನು ಹೋಲುವ ಪ್ರಾಣಿ ಯೊಂದನ್ನು ದೂರದಿಂದ ನೋಡಿದ್ದರು. ನಿಧಿ ಶೆಟ್ಟಿ ಎಂಬ ಬಾಲಕಿ ಮೊಬೈಲ್‌ನಲ್ಲಿ ವೀಡಿಯೋ ಸೆರೆಹಿಡಿದಿದ್ದು, ಅದು ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಈ ಬಗ್ಗೆ ಸ್ಥಳೀಯರುಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಹೋಗಿದ್ದರು. ಸೋಮವಾರ ಬೆಳಗ್ಗೆ ಮತ್ತೆ ಪರಿಶೀಲನೆನಡೆಸಿದ್ದು, ಹೆಜ್ಜೆ ಗುರುತು ಆಧಾರದಲ್ಲಿ ಅದು ಚಿರತೆಯೇ ಎಂದು ಖಚಿತಪಡಿಸಿದ್ದರು. ಆದರೆ ದಿನವಿಡೀ ಕಾರ್ಯಾಚರಣೆ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ.

ಮಂಗಳವಾರ ಬೆಳಗ್ಗೆಯೂ ಇಲಾ ಖೆಯ 15 ಮಂದಿ ಅಧಿಕಾರಿಗಳು ಜಯ ನಗರ ಪರಿಸರದಲ್ಲಿ ಹುಡುಕಾಟ ನಡೆಸಿ ದ್ದಾರೆ. ಕನಪದವು, ಮಾರ್ತ ಕಾಂಪೌಂಡ್‌, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅಲ್ಲಿ ಬೋನು ಇಡಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಪೈ “ಉದಯವಾಣಿ’ಗೆ ತಿಳಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಸಂಜಯ್‌ ಪೈ, ಉಪ ವಲಯ ಅರಣ್ಯಾಧಿಕಾರಿ ಸಂಜಯ್‌, ಅರಣ್ಯ ರಕ್ಷಕರಾದ ವೀಣಾ, ಸೋಮಲಿಂಗ ಹಿಪ್ಪರಗಿ, ಶಿವು, ಉರಗ ರಕ್ಷಕ ಅತುಲ್‌ ಪೈ, ಸ್ಥಳೀಯ ಮನಪಾ ಸದಸ್ಯ ಕೇಶವ ಮರೋಳಿ ಕಾರ್ಯಾಚರಣೆಯ ವೇಳೆ ಸಹಕರಿಸಿದ್ದರು.

ಇದನ್ನೂ ಓದಿ:ವಾಹನ ನೋಂದಣಿ ನವೀಕರಣಕ್ಕೆ 8 ಪಟ್ಟು ಹೆಚ್ಚು ಶುಲ್ಕ

ಬಜಪೆಯಿಂದ ಬಂತೇ?
ಕಳೆದ ಕೆಲವು ಸಮಯದಿಂದ ಬಜಪೆ, ಕೆಂಜಾರು ಪ್ರದೇಶದಲ್ಲಿ ಮೂರು ಚಿರತೆಗಳು ಕಾಣಿಸುತ್ತಿವೆ. ಕೆಲವು ಮನೆ ಗಳಲ್ಲಿದ್ದ ನಾಯಿ, ಕೋಣ, ದನವನ್ನು ಬೇಟೆ ಯಾಡಿವೆ. ಅರಣ್ಯ ಇಲಾಖೆ ಅಧಿ ಕಾರಿಗಳು ಮೂರ್‍ನಾಲ್ಕು ಕಡೆಗಳಲ್ಲಿ ಬೋನು ಇಟ್ಟರೂ ಬೋನಿಗೆ ಬಿದ್ದಿಲ್ಲ. ಕೆಲವು ದಿನಗಳ ಹಿಂದೆ ಪಚ್ಚನಾಡಿ ಪರಿಸರದಲ್ಲಿ ಚಿರತೆ ಕಂಡುಬಂದ ಬಗ್ಗೆ ಸ್ಥಳೀಯರು ಇಲಾಖೆಗೆ ಮಾಹಿತಿ ನೀಡಿದ್ದರು. ಪಚ್ಚನಾಡಿ ಕಡೆಯಿಂದ ಗುಡ್ಡ ಪ್ರದೇಶ ಮೂಲಕ ಮರೋಳಿಗೆ ಬಂದಿರುವ ಶಂಕೆ ಇದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಈ ಹಿಂದೆಯೂ ಬಂದಿತ್ತು
2005ರಲ್ಲಿ ನಗರದ ಬಾವುಟ ಗುಡ್ಡೆ ಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಅಧಿಕಾರಿಗಳು 4 ಗಂಟೆಗಳ ಕಾರ್ಯಾ ಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದ್ದರು. ಕಳೆದ ವರ್ಷ ಸುರತ್ಕಲ್‌ ಬಳಿ ಎಂಆರ್‌ಪಿಎಲ್‌ ಪರಿಸರದಲ್ಲಿ ಚಿರತೆ ಯೊಂದು ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಹಾಗೂ ಪಿಲಿಕುಳದ ತಂಡ ಕುತ್ತೆತ್ತೂರು ಸಮೀಪ ಸೆರೆಹಿಡಿದಿತ್ತು. ಕಳೆದ ಮೇ 5ರಂದು ಮಂಗಳೂರು ನಗರದ ಕುದ್ರೋಳಿ, ಮಣ್ಣಗುಡ್ಡ ವ್ಯಾಪ್ತಿಯ ಜನನಿಬಿಡ ರಸ್ತೆಯಲ್ಲಿ ಕಾಡುಕೋಣ ದಿಢೀರ್‌ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.